Advertisement

ಎಸ್‌.ಆರ್‌. ಕಾಲೇಜು: ಪ್ರಥಮ ಪಿಯುಸಿ ಪ್ರಾರಂಭೋತ್ಸವ, ಸಮ್ಮಾನ

11:10 PM May 31, 2019 | Team Udayavani |

ಹೆಬ್ರಿ: ಬದುಕಿನ ಸವಾಲುಗಳನ್ನು ಎದುರಿಸುವ ವಿಶ್ವಾಸದ ಜತೆಗೆ ಪೋಷಕರು ಮಕ್ಕಳಿಗೆ ಮಮತೆ ಹಾಗೂ ಸಮಯ ನೀಡಿ ಅವರೊಂದಿಗೆ ಬೆರತಾಗ ಮಕ್ಕಳು ಉತ್ತಮ ಹಾದಿಯಲ್ಲಿ ಹೋಗಲು ಸಾಧ್ಯ ಎಂದು ಎಂ.ಜಿ.ಎಂ. ಕಾಲೇಜಿನ ಹಿರಿಯ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ ಹೇಳಿದರು.

Advertisement

ಹೆಬ್ರಿ ಎಸ್‌.ಆರ್‌. ಕಾಲೇಜಿನ ಸಭಾಂಗಣದಲ್ಲಿ ಮೇ 30ರಂದು ನಡೆದ ಪ್ರಥಮ ಪಿಯುಸಿ ಪ್ರಾರಂಭೊತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ್‍ಯಾಂಕ್‌ ಪಡೆದ ಎಸ್‌.ಆರ್‌. ವಿದ್ಯಾರ್ಥಿನಿ ರಾಯಿಸಾ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೇವಲ 4 ವಿದ್ಯಾರ್ಥಿ ಗಳೊಂದಿಗೆ 20 ವರ್ಷಗಳ ಹಿಂದೆ ಆರಂಭಗೊಂಡ ಎಸ್‌.ಆರ್‌.ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪರಿಣಾಮ ಈ ಬಾರಿ ಇಲ್ಲಿನ ವಿದ್ಯಾರ್ಥಿನಿ ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದಿರುವುದು ಶ್ಲಾಘನೀಯ ಎಂದರು.

ಶಿಸ್ತು ಬದ್ಧ ಶಿಕ್ಷಣ
ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಅವರ ಪರಿಶ್ರಮ ಹಾಗೂ ಸಂಚಾಲಕಿ ಸಪ್ನಾ ಶೆಟ್ಟಿ ಅವರ ವಿದ್ಯಾರ್ಥಿನಿರ ಮೇಲೆ ವಿಶೇಷ ನಿಗಾದೊಂದಿಗೆ ಶಿಸ್ತು ಬದ್ಧ ಶಿಕ್ಷಣದಿಂದ ಇಂದು ರಾಜ್ಯದ ಮೂಲೆ ಮೂಲೆಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಅನುಭವಿ ಉಪನ್ಯಾಸಕ ವೃಂದ, ಕಲಿಕೆಗೆ ಪೂರ‌ಕವಾದ ವಾತವಾರಣ, ಗುಣಮಟ್ಟದ ಶಿಕ್ಷಣದಿಂದ ಇಂದು ಸಂಸ್ಥೆ ರಾಜ್ಯದಲ್ಲಿ ಗುರುತಿಸಿಕೊಂಡಿದೆ ಎಂದು ತೀರ್ಥಹಳ್ಳಿ ಕಾಲೇಜಿನ ಉಪನ್ಯಾಸಕ ಸುಧಾಕರ ಕೆ.ಜಿ. ಹೇಳಿದರು.

ಈ ಸಂದರ್ಭಕಾಲೇಜಿನ ಟಾಪರ್‌ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.ಕಾಲೇಜಿನ ಕಾರ್ಯದರ್ಶಿ ಸ್ವಪ್ನಾ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್‌ ಸ್ವಾಗತಿಸಿ, ನಿಶಿತಾ ಕಾರ್ಯಕ್ರಮ ನಿರೂಪಿಸಿದರು. ದೀಪಕ್‌ ವಂದಿಸಿದರು.

Advertisement

ಉಪನ್ಯಾಸಕರ ಪರಿಶ್ರಮ ಪೋಷಕರ ಸಹಕಾರದಿಂದ ಸಂಸ್ಥೆ ಬೆಳೆದಿದೆ. ನಿರಂತರ ಪರಿಶ್ರಮವಿದ್ದಾಗ ಯಶಸ್ಸು ಕಂಡಿತ. ಅದಕ್ಕೆ ಉತ್ತಮ ಉದಾಹರಣೆ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ, ಈ ಬಾರಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದ ರಾಯಿಸ ಎಂದು ಎಸ್‌.ಆರ್‌ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಹೇಳಿದರು.

ನಿರಂತರ ಪರಿಶ್ರಮದಿಂದ ಯಶಸ್ಸು
ಉಪನ್ಯಾಸಕರ ಪರಿಶ್ರಮ ಪೋಷಕರ ಸಹಕಾರದಿಂದ ಸಂಸ್ಥೆ ಬೆಳೆದಿದೆ. ನಿರಂತರ ಪರಿಶ್ರಮವಿದ್ದಾಗ ಯಶಸ್ಸು ಕಂಡಿತ. ಅದಕ್ಕೆ ಉತ್ತಮ ಉದಾಹರಣೆ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ, ಈ ಬಾರಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದ ರಾಯಿಸ ಎಂದು ಎಸ್‌.ಆರ್‌ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next