ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೇ, ದೇಶದಲ್ಲಿ ಲಸಿಕೆಯ ಕೊರತೆ ಮತ್ತೊಂದೆಡೆ. ಕೊರತೆಯನ್ನು ನೀಗಿಸಲು ದೇಶ ಹರಸಾಹಸ ಪಡುತ್ತಿದ್ದರೂ ಆ ಸಮಸ್ಯೆಯನ್ನು ನೀಗಿಸಲು ಸರ್ಕಾರಕ್ಕೆ ಸಾಗುತ್ತಿಲ್ಲ. ಈ ನಡುವೆ ಸ್ಪಟ್ನಿಕ್ ವಿ ಆ್ಯಂಟಿ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡಲು ರಷ್ಯಾ ಭಾರತಕ್ಕೆ ಶೀಘ್ರದಲ್ಲೇ ಅನುಮತಿಸಲಿದೆ ಎಂಬ ಮಾಹಿತಿಯನ್ನು ಅಂತರಾಷ್ಟ್ರೀಯ ಸುದ್ಧಿ ಸಂಸ್ಥೆಗಳು ನೀಡಿವೆ.
ಇದನ್ನೂ ಓದಿ : ತಾಯಿಯ ನೆನಪುಗಳಿರುವ ಮೊಬೈಲ್ ಫೋನ್ ಹುಡುಕಿಕೊಡಿ ಪ್ಲೀಸ್.. : ಜಿಲ್ಲಾಡಳಿತಕ್ಕೆ ಬಾಲಕಿ ಮನವಿ
ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಭಾರತ ತಯಾರಿ ಮಾಡಿಕೊಳ್ಳುತ್ತಿದ್ದು, ಬರುವ ಒಂದೆರಡು ವರ್ಷಗಳಲ್ಲಿ ಅಂದರೇ ಅಂದಾಜು ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾಋದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಕುರಿತಾಗಿ ಸೈಂಟ್ ಪೀಟರ್ ಬರ್ಗ್ಸ್ ನಲ್ಲಿ ಸ್ಥಳಿಯ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಷ್ಯಾದ ಭಾರತೀಯ ರಾಯಭಾರಿ ಡಿ ಬಾಲಾ ವೆಂಕಟೇಶ್ ವರ್ಮಾ, ”ವಿಶ್ವಾದ್ಯಂತ ಸರಬರಾಜು ಮಾಡುವ ಸ್ಪುಟ್ನಿಕ್ ವಿ ಲಸಿಕೆಯ ಶೇಕಡಾ 65 ರಿಂದ 70 ರಷ್ಟನ್ನು ಭಾರತದಲ್ಲಿಯೇ ಉತ್ಪಾದಿಸಲಾಗುತ್ತದೆ. ರಷ್ಯಾ ಸರ್ಕಾರ ಈಗಾಗಲೇ ಈ ತಿಂಗಳ 1 ರಿಂದ 2,10,000 ಡೋಸ್ ಲಸಿಕೆಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ಕಳುಹಿಸಿದೆ. ಇನ್ನೂ ಮೂರು ಮಿಲಿಯನ್ ಡೋಸ್ ಲಸಿಕೆ ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ” ಎಂದು ಅವರು ಹೇಳಿದ್ದಾರೆ.
ಜೂನ್ ಕೊನೆಯ ವಾರದ ವೇಳೆಗೆ ಐದು ಲಕ್ಷ ಡೋಸ್ ಗಳನ್ನು ಭಾರತಕ್ಕೆ ಕಳುಹಿಸುವ ಗುರಿಯನ್ನು ರಷ್ಯಾ ಸರ್ಕಾರ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುಮಾರು 995.40 ರೂ ಬೆಲೆಯಿರುವ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆಯು ಭಾರತದಲ್ಲಿ ಆಗಸ್ಟ್ ನಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಹೈದರಾಬಾದ್ ನ ಡಾ. ರೆಡ್ಡಿ’ಸ್ ಲ್ಯಾಬರೆಟರೀಸ್ ನಲ್ಲಿ ಉತ್ಪಾದಿಸಲಾಗುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಯಾಸ್ ಚಂಡಮಾರುತ : ಪ್ರಧಾನಿ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ