Advertisement

ತಮಿಳು ಮೂಲದ ಯಕ್ಷ ಕಲಾವಿದನಿಗೆ “ಸೂರು ಯೋಜನೆ’

04:01 PM Apr 13, 2017 | |

ಉಡುಪಿ: ಹಾಸ್ಯರಂಗದಲ್ಲಿ ಉತ್ತುಂಗಕ್ಕೇರಿದವರ ಜೀವನ ನೋವಿನಿಂದ ಕೂಡಿತ್ತೆಂಬುದಕ್ಕೆ ಹಲವು ಉದಾಹರ‌ಣೆಗಳಿವೆ. ಯಕ್ಷಗಾನವೂ ಈ ಪರಿಸ್ಥಿತಿಗೆ ಹೊರತೇನಲ್ಲ. ಅನೇಕ ಯಕ್ಷ ಕಲಾವಿದರ ಬದುಕು ನಿಜಜೀವನದಲ್ಲಿ ಬಡತನದಿಂದ ಕೂಡಿರುತ್ತದೆಂಬುದು ಒಪ್ಪಿಕೊಳ್ಳಲೇಬೇಕಾದ ಕಟುಸತ್ಯ. ಅಂತಹವರಲ್ಲಿ  ತಮಿಳುನಾಡು ಮೂಲದ ಯಕ್ಷ ಕಲಾವಿದ ಅರುಣ್‌ ಕುಮಾರ್‌ ಜಾರ್ಕಳ ಕೂಡ ಒಬ್ಬರು.

Advertisement

ಸತತ 14 ವರ್ಷಗಳಿಂದ ಯಕ್ಷರಂಗದಲ್ಲಿ ಕಲಾವಿದನಾಗಿªರೂ ವಾಸಕ್ಕಾಗಿ  ಸ್ವಂತ ಸೂರಿಲ್ಲ. ಈಗ ತಾನು ಇಷ್ಟೆಲ್ಲ ಬೆಳೆಯಲು ಸಾಧ್ಯವಾದ ಯಕ್ಷರಂಗ ತನಗೊಂದು ಮನೆಯನ್ನು ಕಟ್ಟಿಸಿ ಕೊಡಲಾರದೇ ಎಂದು ಯೋಚಿಸಿದ ಅರುಣ್‌ ಗೃಹ ನಿರ್ಮಾಣ ಸಹಾಯಾರ್ಥ ಎ. 13ರಂದು ಕುಂದಾಪುರದಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರೊಂದಿಗೆ   “ಮಾನಿಷಾದ’ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಲಿದೆ.

ಮೂಲ ತಮಿಳುನಾಡಾದರೂ ಅರುಣ್‌ ಹುಟ್ಟಿದ್ದು ಉಡುಪಿ ಜಿÇÉೆಯ ಕಟಪಾಡಿ ಸಮೀಪದ ಪಾಜಕದಲ್ಲಿ. ಹೆತ್ತವರಾದ ದೊರೆಸ್ವಾಮಿ ಹಾಗೂ ಲೀಲಾವತಿ ದಂಪತಿ ಉದ್ಯೋಗ ನಿಮಿತ್ತವಾಗಿ ಇಲ್ಲಿಗೆ ಬಂದು ಇಲ್ಲಿಯೇ ವಾಸವಾಗಿದ್ದಾರೆ. ದೈವ ಭಕ್ತರಾದ ದೊರೆಸ್ವಾಮಿ ಪ್ರತಿ ವರ್ಷ ಅಯ್ಯಪ್ಪನ ಮಾಲೆ ಹಾಕುವುದನ್ನು ತಪ್ಪಿಸುತ್ತಿರಲಿಲ್ಲ. ಆ ಸಮಯದಲ್ಲಿ ಊರವರ ಸಹಾಯದೊಂದಿಗೆ ಯಕ್ಷಗಾನ ಬಯಲಾಟ ಆಡಿಸುತ್ತಿದ್ದರು. 

ಇದರಿಂದ ಅರುಣ್‌ ಕುಮಾರ್‌ ಪ್ರೇರಣೆಗೊಂಡು ಯಕ್ಷಗಾನ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಯಿತು. ಅರುಣ್‌ ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಮಿಂಚುತ್ತಿರುವುದು ಅವರ ಅಸಾಧಾರಣ ಪ್ರತಿಭೆಗೆ ಹಿಡಿದ ಕೈಗನ್ನಡಿ. ಪ್ರಸ್ತುತ ತೆಂಕು ಹಾಗೂ ಬಡಗು ಉಭಯ ತಿಟ್ಟುಗಳಲ್ಲಿಯೂ ವಿಶಿಷ್ಟ ಶೈಲಿಯ ಹಾಸ್ಯದಿಂದ ಜನರನ್ನು ರಂಜಿಸುತ್ತಿದ್ದಾರೆ. ಧರ್ಮಸ್ಥಳ ತರಬೇತಿ ಶಿಬಿರದಲ್ಲಿ ಯಕ್ಷಗಾನದ ಕಲೆಗಳನ್ನು ಕರಗತ ಮಾಡಿಕೊಂಡ ಅವರು ಅನಂತರ ಕಟೀಲು ಮೇಳಕ್ಕೆ ಸೇರಿಕೊಂಡರು. ಮೊದಲು ಚಿಕ್ಕ ಪುಟ್ಟ ವೇಷಗಳನ್ನು ಮಾಡ‌ುತ್ತಾ ಆನಂತರ ಪ್ರಧಾನ ಹಾಸ್ಯಗಾರನಾಗಿ ಹೆಸರು ಗಳಿಸಿರುತ್ತಾರೆ. 

ವಿಶಿಷ್ಟ ಶೈಲಿಯ ಆಂಗಿಕ ಅಭಿನಯದಿಂದ ಜನರನ್ನು ನಗೆಗಡಲಲ್ಲಿ ತೇಲಿಸಬಲ್ಲ ಸಮರ್ಥ ಹಾಸ್ಯಗಾರರೆಂಬ ಖ್ಯಾತಿಯೂ ಅವರಿಗಿದೆ. ಅಮೆರಿಕ ಹಾಗೂ ಲಂಡನ್‌ನಲ್ಲೂ  ಯಕ್ಷಗಾನ ಪ್ರದರ್ಶಿಸಿದ್ದಾರೆ.ಯಕ್ಷಗಾನ ಕಲಾಭಿಮಾನಿಗಳು ಕೈಸೇರಿಸಿದರೆ ಅರುಣರಂತಹ ಅನೇಕ ಕಲಾವಿದರಿಗೆ ಸೂರು ಬಂದೀತು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next