Advertisement

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

03:26 PM Mar 19, 2024 | Team Udayavani |

ವಸಂತ ಋತು ಯಾರಿಗೆ ಇಷ್ಟವಿಲ್ಲ. ಕವಿಗಳು ವಸಂತ ಋತುವನ್ನು ಹಾಡಿ ಹೊಗಳುವ ಮೂಲಕ ಅದೆಷ್ಟೋ ಕವಿತೆಗಳು ಹುಟ್ಟಿಕೊಂಡಿವೆ. ಕವಿಗಳು ತಮ್ಮ ಮನದಾಳದ ಭಾವವನ್ನು ಕವಿತೆ ಮುಖೇನ ವ್ಯಕ್ತಪಡಿಸಿದ್ದಾರೆ. ಋತುಗಳಲ್ಲಿ ವಸಂತ ಋತು ಅತ್ಯಂತ ಆಕರ್ಷಣೀಯ. ಬೋಳಾದ ಮರಗಳು ಎಳೆಯ ಚಿಗುರೊಡೆದು ಹಚ್ಚ ಹಸುರಿನ ಎಲೆಯೊಂದಿಗೆ ಪ್ರಕೃತಿಯ ಸೊಬಗನ್ನು ಹೆಚ್ಚಿಸುವ ಕಾಲ ವಸಂತ ಋತುವಿನ ವೈಶಿಷ್ಟ್ಯವಾಗಿದೆ.

Advertisement

ಇದನ್ನೂ ಓದಿ:Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಆದರೆ ಸೆಂಟ್ರಲ್‌ ಕ್ಲೈಮೇಟ್‌ ಹೊಸ ಅಧ್ಯಯನ ವರದಿಯ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ ಭಾರತದಾದ್ಯಂತ ವಸಂತ ಋತು ಕಣ್ಮರೆಯಾಗುತ್ತಿದೆ ಎಂದು ಹೇಳಿದೆ.!

ಇತ್ತೀಚೆಗಿನ ದಶಕಗಳಲ್ಲಿ ಫೆಬ್ರವರಿ ತಿಂಗಳ ತಾಪಮಾನ ತೀವ್ರವಾಗಿ ಏರಿಕೆಯಾಗುವ ಮೂಲಕ ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಚಳಿಗಾಲದಲ್ಲಿಯೂ ಬೇಸಿಗೆಯಂತಹ ವಿಪರೀತ ವಾತಾವರಣ ಕಂಡುಬಂದಿರುವುದಾಗಿ ವರದಿ ವಿಶ್ಲೇಷಿಸಿದೆ.

ಜನವರಿಯಲ್ಲಿ ಉತ್ತರ ಮತ್ತು ಮಧ್ಯ ರಾಜ್ಯಗಳಲ್ಲಿ ತಂಪಾದ ವಾತಾವರಣ ಇದ್ದರೆ, ಫೆಬ್ರವರಿಯಲ್ಲಿ ತಾಪಮಾನ ಏರಿಕೆಯಾಗತೊಡಗಿದೆ. ಇದರ ಪರಿಣಾಮ ವಸಂತ ಋತು ಕಣ್ಮರೆಯಾಗತೊಡಗಿದೆ ಎಂದು ಕ್ಲೈಮೇಟ್‌ ಸೈನ್ಸ್‌ ನ ಉಪಾಧ್ಯಕ್ಷ ಡಾ.ಆಂಡ್ರ್ಯೂ ಪೆರ್ಶಿಂಗ್‌ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಕಲ್ಲಿದ್ದಲು ಸುಡುವಿಕೆ, ವಾಹನಗಳ ಹೊಗೆಯ ಪರಿಣಾಮ ಭಾರತದಾದ್ಯಂತ ಎಲ್ಲಾ ಋತುಗಳನ್ನೂ ಬೇಸಿಗೆಯಂತಹ ಸ್ಥಿತಿಗೆ ತಂದೊಡ್ಡಲು ಕಾರಣವಾಗಿದೆ. 1970ರಿಂದ 2023ರವರೆಗಿನ ಭಾರತದಾದ್ಯಂತದ ಹವಾಮಾನವನ್ನು ಕ್ಲೈಮೇಟ್‌ ಸೆಂಟರ್‌ ಅಧ್ಯಯನ ನಡೆಸಿದ್ದು, ಡಿಸೆಂಬರ್‌ ನಿಂದ ಫೆಬ್ರವರಿಯ ಚಳಿಗಾಲದ ತಿಂಗಳುಗಳಲ್ಲಿ ತಾಪಮಾನ ಏರಿಕೆಯಾಗುತ್ತಿರುವುದನ್ನು ಪತ್ತೆಹಚ್ಚಿದೆ.

ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ತಾಪಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್‌ ಗಿಂತ ಹೆಚ್ಚಿನ ವ್ಯತ್ಯಾಸವನ್ನು ಕಂಡಿದೆ.

ಹವಾಮಾನ ಬದಲಾವಣೆಯ ಪರಿಣಾಮ ಚಳಿಗಾಲದಲ್ಲಿಯೂ ತಾಪಮಾನ ಏರಿಕೆಯಾಗುವ ಮೂಲಕ ವಸಂತ, ಶಿಶಿರ ಋತುವು ಕಣ್ಮರೆಯಾದಂತೆ ಭಾಸವಾಗುತ್ತಿದೆ. ಇಂಧನ ಬಳಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ತಾಪಮಾನ ಏರಿಕೆ ತಡೆಗಟ್ಟಲು ಅಸಾಧ್ಯ ಎಂದು ಕ್ಲೈಮೇಟ್‌ ಸೆಂಟ್ರಲ್‌ ಎಚ್ಚರಿಕೆಯನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next