Advertisement

ಜ.1ರಿಂದ ಮಂದಿರ ಉದ್ಘಾಟನೆ ಕಾರ್ಯಕ್ರಮ ಬಗ್ಗೆ ಪ್ರಚಾರ ಮಾಡಿ- BJP ನಾಯಕರಿಗೆ ಶಾ ಸೂಚನೆ

09:09 PM Dec 24, 2023 | Team Udayavani |

ನವದೆಹಲಿ: ದೇಶವಾಸಿಗಳ ಮನೆ-ಮನೆಗೂ ತೆರಳಿ, ರಾಮ ಮಂದಿರ ಉದ್ಘಾಟನೆ ಸಮಾರಂಭದ ಕರಪತ್ರಗಳನ್ನು, ಅಕ್ಷತೆಯನ್ನು ಹಂಚಿ. ಜನರು ತಮ್ಮ ಮನೆಗಳಲ್ಲೇ ಶ್ರೀರಾಮನಿಗಾಗಿ ದೀಪ ಹಚ್ಚುವಂತೆ ಮನವಿ ಮಾಡಿ. ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Advertisement

ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಜ.1ರಿಂದಲೇ ಅಕ್ಷತೆ ಹಂಚುವ, ಕರಪತ್ರಗಳನ್ನು ವಿತರಿಸುವ, ಮನೆ-ಮನೆಗಳಿಗೆ ಭೇಟಿ ನೀಡಿ ಮಂದಿರದ ವೈಭವದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಮಂದಿ ಉದ್ಘಾಟನೆಯಂದು ಮನೆಯಲ್ಲಿ ದೀಪ ಬೆಳಗಿಸಿ ಎಂದು ಜನರಿಗೆ ತಿಳಿಸಿ, ಮನವರಿಕೆ ಮಾಡಲು ಅಮಿತ್‌ ಶಾ ಸಲಹೆ ಮಾಡಿದ್ದಾರೆ.

ಈ ಮೂಲಕ ಅಯೋಧ್ಯೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ ಇಡೀ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಸುವಂತೆ ಮಾಡಿ ಎಂದಿದ್ದಾರೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಆ ಎಲ್ಲಾ ಕಾರ್ಯಕ್ರಮಗಳ ಜತೆಗೆ ಬಿಜೆಪಿ ಕಾರ್ಯಕರ್ತರು ಕೈ ಜೋಡಿಸುವಂತೆ ಅಮಿತ್‌ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.

ಸೀತೆ ತವರೂರು ಜಾನಕಪುರಿಯಿಂದ ರಾಮನಿಗೆ ಸಿಗಲಿದೆ ವಿಶೇಷ ಸ್ಮರಣಿಕೆ
ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆಂದು ಸೀತಾ ದೇವಿಯ ಜನ್ಮಭೂಮಿ ಎನ್ನಲಾಗುವ ನೇಪಾಳದಿಂದ ಅಯೋಧ್ಯೆಗೆ ವಿಶಿಷ್ಟ ಸ್ಮರಣಿಕೆಗಳನ್ನು ಕಳುಹಿಸಲಾಗುತ್ತಿದೆ. ಜ.18ರಂದು ಜಾನಕಪುರಧಾಮ್‌- ಅಯೋಧ್ಯಾಪುರಧಾಮ್‌ ಎಂಬ ಹೆಸರಿನ ಯಾತ್ರೆಯನ್ನು ನೇಪಾಳದಿಂದ ಆರಂಭಿಸಲಾಗುತ್ತಿದ್ದು, ಜ.20ರಂದು ಈ ಪ್ರಯಾಣ ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ. ರಾಮನಿಗಾಗಿ ವಿವಿಧ ಆಭರಣ, ವಸ್ತ್ರಗಳು, ಪಾತ್ರೆ ಮತ್ತು ಸಿಹಿ ತಿಂಡಿಗಳನ್ನು ಸ್ಮರಣಿಕೆಯಾಗಿ ಕಳುಹಿಸಲಾಗುತ್ತಿದೆ ಎಂದು ಜಾನಕಿ ದೇಗುಲದ ಮಹಂತರಾದ ರಾಮ್‌ರೋಶನ್‌ ದಾಸ್‌ ವೈಷ್ಣವ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next