ಲಂಡನ್: ಭಾರತೀಯ ಅಭಿಮಾನಿಗಳ ಕ್ರೀಡಾ ಪ್ರೀತಿಯ ಬಗ್ಗೆ ಜಗತ್ತಿಗೆ ಗೊತ್ತು. ಎಲ್ಲೇ ಕ್ರಿಕೆಟ್ ಪಂದ್ಯ ನಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳು ಸೇರುತ್ತಾರೆ. ವಿಶ್ವಕಪ್ ಪಂದ್ಯ ಎಂದರೆ ಕೇಳಬೇಕೆ, ಸಾಕಷ್ಟು ಮಂದಿ ಭಾರತೀಯರು ವಿಶ್ವಕಪ್ ನ ಮಜಾ ಸವಿಯಲು ಇಂಗ್ಲೆಂಡ್ ಗೆ ಹಾರಿದ್ದಾರೆ.
ರವಿವಾರ ಕೆನ್ನಂಗ್ಟನ್ ಓವಲ್ ನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಪಂದ್ಯವೂ ಇದಕ್ಕೆ ಹೊರತಾಗಿಲ್ಲ,ಕ್ರೀಡಾಂಗಣದ ತುಂಬಾ ಭಾರತೀಯ ಅಭಿಮಾನಿಗಳೇ ತುಂಬಿದ್ದಾರೆ. ಮೈದಾನದ ತುಂಬೆಲ್ಲಾ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಭಾರತದಲ್ಲೇ ವಿಶ್ವಕಪ್ ನಡೆಯತ್ತಿದೆ ಎನ್ನವಂತೆ ಭಾಸವಾಗುವಂತೆ ಟೀಂ ಇಂಡಿಯಾ ಅಭಿಮಾನಿಗಳು ಓವಲ್ ಅಂಗಳದಲ್ಲಿ ಸೇರಿದ್ದಾರೆ.
ಐಸಿಸಿ ಕೂಡಾ ಈ ಬಗ್ಗೆಟ್ವೀಟ್ ಮಾಡಿದ್ದು, ಮೈದಾನದಲ್ಲಿ ಭಾರತೀಯ ಅಭಿಮಾನಿಗಳು ಸಮುದ್ರದಂತೆ ಸೇರಿದ್ದಾರೆ. ಆಸೀಸ್ ಅಭಿಮಾನಿಗಳನ್ನು ಹುಡುಕಿ ಎಂದು ಮನವಿ ಮಾಡಿದೆ.