Advertisement
ಕ್ರಿಕೆಟ್– ಮಾ. 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಸೇರಿದಂತೆ ಭಾರತದ ವಿವಿಧ ಕ್ರಿಕೆಟ್ ಕೂಟಗಳು ಮುಂದೂಡಿಕೆ. ಐಪಿಎಲ್ ಪೂರ್ಣ ರದ್ದಾದರೆ 3,500 ಕೋಟಿ ರೂ.ನಷ್ಟವಾಗುವ ಆತಂಕ.
– ಪಿಎಸ್‌ಎಲ್ ಹೊರತುಪಡಿಸಿ ಐಸಿಸಿ ಆಯೋಜನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳು ರದ್ದು.
– ಮಾ. 3ರಿಂದ 7ರ ತನಕ ದುಬಾೖನಲ್ಲಿ ಆಯೋಜಿಸಲಾಗಿದ್ದ ಏಶ್ಯ-ಒಶಿಯಾನಿಯಾ ಗ್ರೂಪ್ ಟೆನಿಸ್ ಕೂಟ ಮುಂದೂಡಿಕೆ. ಆ್ಯತ್ಲೆಟಿಕ್ಸ್
– ಮಾ. 13ರಿಂದ 15ರ ತನಕ ಚೀನದ ನಾಜಿಂಗ್‌ನಲ್ಲಿ ನಡೆಯಬೇಕಿದ್ದ ಆ್ಯತ್ಲೆಟಿಕ್ಸ್ ಮುಂದಿನ ವರ್ಷದ ವರೆಗೆ ಮುಂದೂಡಿಕೆ.
– ಫೆ. 12ರಿಂದ 13ರ ತನಕ ಹ್ಯಾಂಗ್‌ಝುನಲ್ಲಿ ನಡೆಯಬೇಕಿದ್ದ ಏಶ್ಯನ್ ಆ್ಯತ್ಲೆಟಿಕ್ಸ್ ಕೂಟ ಕೂಡ ರದ್ದು.
Related Articles
– ಎ. 19ರಿಂದ ಶಾಂಘೈನಲ್ಲಿ ಆಯೋಜಿಸಲಾಗಿದ್ದ ಫಾರ್ಮುಲ 1 ಗ್ರ್ಯಾನ್‌ಪ್ರಿ ಕೂಟವನ್ನು ರದ್ದು ಮಾಡಲಾಗಿದೆ. ಮಾ. 21ರ ಫಾರ್ಮುಲ ಇ ಮೋಟಾರ್ ರೇಸ್ ಕೂಡ ರದ್ದಾಗಿದೆ.
Advertisement
ಬ್ಯಾಡ್ಮಿಂಟನ್– ಫೆ. 1ರಿಂದ ಮಾ.2 5ರ ತನಕ ಚೀನದಲ್ಲಿ ನಡೆಯಬೇಕಿದ್ದ ಮಾಸ್ಟರ್ಸ್ ಬ್ಯಾಡ್ಮಿಂಟನ್ ಕೂಟ ಮುಂದೂಡಿಕೆ.
– ಎ. 21ರಿಂದ ಎ. 26 ತನಕ ಚೀನದ ವುಹಾನ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಕೂಟ ರದ್ದುಗೊಂಡಿಲ್ಲವಾದರೂ ಕೂಟ ನಡೆಯುವುದು ಅನುಮಾನ. ಬಾಕ್ಸಿಂಗ್
– ಮಾ. 3ರಿಂದ 11ರ ವರೆಗೆ ಚೀನದಲ್ಲಿ ನಡೆಯಬೇಕಿದ್ದ ಟೋಕೊÂ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಕೂಟಗಳು ಚೀನದಿಂದ ಒಮಾನ್‌ಗೆ ವರ್ಗಾವಣೆಯಾಗಿದ್ದವು. ಹಾಕಿ
– ಮಾ. 14, 15ರಂದು ಚೀನ, ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯಬೇಕಿದ್ದ ಪ್ರೊ ಹಾಕಿ ಲೀಗ್ ರದ್ದು. ಎಲ್ಲ ಒಲಿಂಪಿಕ್ಸ್ ಅರ್ಹತಾ ಕೂಟಗಳು ರದ್ದು. ಬಾಸ್ಕೆಟ್‌ಬಾಲ್
– ಫೆ. 6ರಿಂದ 9ರ ವರೆಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಬಾಸ್ಕೆಟ್‌ಬಾಲ್ ಕೂಟ ಸರ್ಬಿಯಾಕ್ಕೆ ವರ್ಗಾವಣೆ. ನೂತನ ದಿನಾಂಕ ನಿಗದಿಯಾಗಿಲ್ಲ. ಫುಟ್‌ಬಾಲ್
– ವಿಶ್ವಾದ್ಯಂತ ನಡೆಯಲಿದ್ದ ಎಲ್ಲ ಫುಟ್‌ಬಾಲ್ ಕೂಟಗಳನ್ನು ಫಿಫಾ ತಾತ್ಕಾಲಿಕ ರದ್ದು ಮಾಡಿದೆ. ಗಾಲ್ಫ್
– ಮಾ. 5ರಿಂದ 8ರ ತನಕ ಚೀನದಲ್ಲಿ ಆಯೋಜನೆಗೊಂಡಿದ್ದ ಎಲ್‌ಪಿಜಿಎ ಗಾಲ್ಫ್ ಕೂಟಗಳು ಸಂಪೂರ್ಣ ರದ್ದು. ಕೆಲವು ಗಾಲ್ಫ್ ಕೂಟಗಳು ಚೀನದಿಂದ ಇಂಡೋನೇಶ್ಯಕ್ಕೆ ಸ್ಥಳಾಂತರ.