Advertisement

ಮೈನವಿರೇಳಿಸಿದ ರೋಚಕ ಎತಿನಗಾಡಿಗಳ ಓಟ

03:16 PM Dec 22, 2021 | Team Udayavani |

ಜಾವಗಲ್‌: ಸುಮಾರು 60 ಅಡಿಗಳ ಎರಡು ಟ್ರ್ಯಾಕ್‌, 72 ಎತ್ತಿನಗಾಡಿ, ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದವರ ಹುಮ್ಮಸ್ಸು, ನಿರೀಕ್ಷೆಗೂ ಮೀರಿದ ಜನ, ಎಲ್ಲಿ ನೋಡಿದರೂ ಶಿಳ್ಳೆ ಚಪ್ಪಾಳೆ-ಕೂಗಾಟ…. ಇದೆಲ್ಲಾ ಕಂಡು ಬಂದಿದ್ದು ಅರಸೀಕೆರೆ ತಾಲೂಕು ಜಾವಗಲ್‌ ಸಮೀಪದ ಕೆಂಪಗೌಡನಹಳ್ಳಿಯಲ್ಲಿ. ಇಲ್ಲಿ ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಜೋಡಿ ಎತ್ತಿನಗಾಡಿ ಸ್ಪರ್ಧೆ ರೋಚಕವಾಗಿದ್ದು, ಗ್ರಾಮೀಣ ಸೊಗಡಿನ ಈ ಸ್ಪರ್ಧೆ ಜನರನ್ನು ಮನಸೂರೆಗೊಳಿಸಿತು.

Advertisement

ಶಿಳ್ಳೆ-ಚಪ್ಪಾಳೆ: ಕೆಂಪಗೌಡನಹಳ್ಳಿಯ ಶ್ರೀ ವೀರಾಂಜನೇಯ ಸೇವಾ ಸಮಿತಿ ಪ್ರಥಮ ಬಾರಿಗೆ ಭಾನುವಾರ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 72 ಎತ್ತಿನಗಾಡಿಗಳು ಪಾಲ್ಗೊಂಡಿದ್ದವು. 3000 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ಎತ್ತಿನಗಾಡಿಗಳ ಓಟದಲ್ಲಿ ಪಾಲ್ಗೊಂಡಿದ್ದವರು ಬಹುಮಾನ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಗಾಡಿಗಳನ್ನು ಓಡಿಸುತ್ತಿದ್ದುದು, ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಳ್ಳೆ, ಕೂಗಾಟಗಳು ರಂಜನೀಯವಾಗಿದ್ದವು.

ನಿರೀಕ್ಷೆಗೂ ಮೀರಿದ ಜನ: ನಿರೀಕ್ಷೆಗೂ ಮೀರಿ ಬಂದಿದ್ದ ಪ್ರವೇಶದಿಂದಾಗಿ ಸ್ಥಳಾವಕಾಶದ ಕೊರತೆ ಇದ್ದರೂ ಕಾರ್ಯಕ್ರಮ ಸಂಘಟಕರು ಸ್ಪರ್ಧೆಗೆ ಬಂದಿದ್ದ ಎತ್ತಿನಗಾಡಿಗಳ ನಿರ್ವಹಿಸಲು ಪರದಾಡಿದರು. ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಿ ಸ್ಪರ್ಧೆ ನಿರ್ವಹಿಸಿದರು. ಸುಮಾರು 60 ಅಡಿಗಳ ಎರಡು ಟ್ರ್ಯಾಕ್‌ಗಳಲ್ಲಿ ಎತ್ತಿನಗಾಡಿಗಳನ್ನು ಓಡಿಸಲು ವ್ಯವಸ್ಥೆ ಮಾಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎತ್ತಿನಗಾಡಿಗಳು ಒಂದೂವರೆಯಿಂದ 2 ನಿಮಿಷದೊಳಗೆ ಸುಮಾರು 300 ಮೀಟರ್‌ ಗುರಿ ಮುಟ್ಟಿದವು.

ಒಂದೂವರೆ ನಿಮಿ ಷದೊಳಗೆ ಗುರಿ ಮುಟ್ಟಿದ ಎತ್ತಿನಗಾಡಿಗಳನ್ನು ಕ್ರಮ ವಾಗಿ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು ಎಂದು ಸ್ಪರ್ಧೆಯ ಸಂಘಟಕರು ಮಾಹಿತಿ ನೀಡಿದರು. ವಿಶೇಷವಾದ ಎತ್ತಿನಗಾಡಿ ಸ್ಪರ್ಧೆ ನೋಡಲು ನೆರೆಹೊರೆಯ ಗ್ರಾಮಗಳಿಂದ ಸಾವಿರಾರು ಜನ ಸೇರಿದ್ದರು. ಸ್ಪರ್ಧೆ ನಡೆಯುವ ಸಮೀಪದಲ್ಲಿ ತಿಂಡಿ ತಿನಿಸುಗಳ ಅಂಗಡಿಗಳೂ ತೆರೆದಿದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಬೀರೂರಿಗೆ ಪ್ರಥಮ ಸ್ಥಾನ

Advertisement

ಎತ್ತಿನಗಾಡಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬೀರೂರಿನ ಎತ್ತಿನಗಾಡಿಗೆ 50 ಸಾವಿರ ರೂ.ನಗದು, 2ನೇ ಬಹುಮಾನ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಎತ್ತಿನಗಾಡಿಗೆ 40 ಸಾವಿರ ರೂ., ಕೆಂಪಗೌಡನಹಳ್ಳಿ ಗ್ರಾಮದ ಎತ್ತಿನಗಾಡಿಗೆ 3ನೇ ಬಹುಮಾನ 30 ಸಾವಿರ ರೂ. ಮೈಸೂರು ಜಿಲ್ಲೆಯ ಎತ್ತಿನ ಗಾಡಿಗೆ 4ನೇ ಬಹುಮಾನ 20 ಸಾವಿರ ರೂ. ಮತ್ತು ಟ್ರೋμ ವಿತರಿಸಲಾಯಿತು.

7 ಸುತ್ತಿನ ಬೈಕ್‌ ರೇಸ್‌ ಸ್ಪರ್ಧೆ

ಹಾಸನ: ನಗರದ ಹೊರ ವಲಯ ಬೇಲೂರು ರಸ್ತೆ ಹೂವನಹಳ್ಳಿಯ ಬಳಿ ಏರ್ಪಡಿಸಿದ್ದ ಡರ್ಟ್‌ ಬೈಕ್‌ ರೇಸ್‌ ಮೈನವಿರೇಳಿಸುವಂತಿತ್ತು. ಜಮೀರ್‌ ಅಹ ಮದ್‌ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಡರ್ಟ್‌ ಬೈಕ್‌ ರೇಸ್‌ನಲ್ಲಿ ರಾಜ್ಯದ ಹಾಸನ, ಮಡಿ ಕೇರಿ ಸೇರಿ ಹಲವು ಜಿಲ್ಲೆಗಳ ಬೈಕ್‌ ರೈಡರ್‌ಗಳಷ್ಟೇ ಅಲ್ಲದೆ ಕೇರಳ, ತಮಿಳುನಾಡು ರಾಜ್ಯಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. 40 ಕ್ಕೂ ಹೆಚ್ಚು 40 ಕ್ಕೂ ಬೈಕ್‌ ರೈಡ್ಸ್‌ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

7 ಸುತ್ತಿ ನ ಓಟದಲ್ಲಿ ಪ್ರಥಮ ಬಹುಮಾನವಾಗಿ 30 ಸಾವಿರ ರೂ. ಘೋಷಿಸಲಾಗಿತ್ತು. ಬೈಕ್‌ಗಳ ಶಬ್ಧ, ದೂಳೆಬ್ಬಿಸಿ ಬೈಕ್‌ ಸಾಗುವ ದೃಶ್ಯಗಳು ಮೈನಡುಗಿಸುವಂತಿತ್ತು. ಮೈನವೀರೇಳಿಸುವಂಥ ವೇಗದಲ್ಲಿ ಸಾಗುತ್ತಿದ್ದ ಬೈಕ್‌ ಸವಾರರು ಜಟಾಪಟಿಗೆ ಬಿದ್ದಿದ್ದರೆ,ಅತ್ತ ನೋಡು ಗರು ಈ ಬೈಕ್‌ ರೇಸ್‌ ನೋಡಿ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಯುವಕರು ರಸ್ತೆಯಲ್ಲಿ ವೇಗ ವಾಗಿ ಬೈಕ್‌ ಓಡಿಸಿ ಏನೇನೋ ಅವಾಂತರ ಮಾಡಿ ಕೊಳ್ಳುವುದನ್ನು ತಪ್ಪಿಸಿ ಸುರಕ್ಷಿತವಾಗಿ ಬೈಕ್‌ ರೇಸ್‌ ಅನುಭವಿಸಲೆಂದು ಈ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಹಮ್ಮದ್‌ ಅಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next