Advertisement
ದೇಶದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ನೀಡಲು ಅವರಿಗೆ ಸಮರ್ಪಕ ತರಬೇತಿ ಅಗತ್ಯ. ಗುಣಮಟ್ಟದ ತರಬೇತಿ ಪಡೆದ ಕ್ರೀಡಾಪಟುವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಲು ಸಾಧ್ಯವಿದೆ. ಶಾಲಾ-ಕಾಲೇಜಿನ ಓದಿನ ಜತೆಗೆ ಕ್ರೀಡೆಗೆ ತರಬೇತಿ ನೀಡಿದರೆ, ಪೂರ್ಣಮಟ್ಟದ ಗುರಿಮುಟ್ಟಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಂದಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕ್ರೀಡಾ ಶಾಲೆಗಳನ್ನು ತೆರೆಯುವ ಅಗತ್ಯವಿದೆ.
Related Articles
ವಿವಿಧ ರಾಜ್ಯಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾನಿಲಯಗಳಿದ್ದು, ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಪಠ್ಯಕ್ರಮದಂತಯೇ ಕ್ರೀಡಾ ವಿಷಯದ ಪಠ್ಯಗಳಿದ್ದು, ಪ್ರಾಯೋಗಿಕ ಚಟುವಟಿಕೆಗಳಿಗೆ ಮಹತ್ವ ನೀಡಲಾಗುತ್ತಿದೆ.
Advertisement
ಪಠ್ಯೇತರ ಚಟುವಟಿಕೆಯಾಗಿಯೂ ಬಳಕೆಕ್ರೀಡೆ ಎನ್ನುವುದನ್ನು ಇತ್ತೀಚೆನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಯಾಗಿಯೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಹೆಚ್ಚುವರಿ ಅಂಕ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲೂ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಗುತ್ತಿದೆ. ಕಾಲೇಜುವಾರು ಕ್ರೀಡಾಕೂಟಗಳನ್ನು ಆಯೋಜಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಕ್ರೀಡಾಸವಲತ್ತುಗಳಿಗೂ ಪ್ರಾಮುಖ್ಯತೆ ನೀಡುವುದು ಅಗತ್ಯ. ಅದರಲ್ಲಿಯೂ ಭಾರತದಲ್ಲಿ ಪ್ರಮುಖವಾಗಿ ಹೊಸದಿಲ್ಲಿಯಲ್ಲಿರುವ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್ ಆ್ಯಂಡ್ ನ್ಪೋರ್ಟ್ ಸೈನ್ಸ್, ಬಾಂಬೆ ಫಿಸಿಕಲ್ ಕಲ್ಚರ್ ಅಸೋಸಿಯೇಶನ್, ಪಂಜಾಬ್‌ನಲ್ಲಿನ ನೇತಾಜಿ ಸುಭಾಶ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ನ್ಪೋರ್ಟ್ಸ್, ಪಶ್ಚಿಮ ಬಂಗಾಳದ ಯುನಿವರ್ಸಿಟಿ ಆಫ್ ಕ್ಯಾಲಿಕಟ್, ಚೆನ್ನೈನಲ್ಲಿನ ಯುನಿವರ್ಸಿಟಿ ಆಫ್ ಮದ್ರಾಸ್, ಹೈದರಾಬಾದ್‌ನ ಒಸ್ಮಾನಿಯಾ ಯುನಿವರ್ಸಿಟಿ, ಪುಣೆ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಸೇರಿದಂತೆ ಮತ್ತಿತರ ಕಾಲೇಜುಗಳಲ್ಲಿ ಕ್ರೀಡಾ ವಿಷಯದ ಕುರಿತು ಬೋಧನೆ ಮಾಡಲಾಗುತ್ತದೆ. ರಾಜ್ಯಕ್ಕೂ ಬೇಕಿದೆ ಕ್ರೀಡಾ ವಿ.ವಿ.
ರಾಜ್ಯದ ಅನೇಕ ಮಂದಿ ಕ್ರೀಡಾಪಟುಗಳಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಎಳೆವೆಯಲ್ಲಿಯೇ ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಇರುವವರಿಗೆ ಪ್ರತ್ಯೇಕ ಶಾಲೆಗಳನ್ನು ರಾಜ್ಯ ಸರಕಾರ ತೆರೆದು ಪ್ರೋತ್ಸಾಹ ನೀಡಬೇಕಿದೆ. ಪಾಠಕ್ಕಿಂತ ಆಟಕ್ಕೆ ಪ್ರಾಮುಖ್ಯ
ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕೂತು ಪಾಠ ಕೇಳುವ ಪದ್ಧತಿ ಹೆಚ್ಚಾಗಿ ಇದೆ. ಕ್ರೀಡಾ ಶಾಲೆ ಅಂದಮೇಲೆ ಅಲ್ಲಿ ಪಾಠಕ್ಕಿಂತ ಹೆಚ್ಚು ಆಟಕ್ಕೇ ಪ್ರಾಮುಖ್ಯತೆ ಇರುತ್ತದೆ. ಶಾಲೆಗಳಲ್ಲಿ ಇರುವಂತೆಯೇ ಸಿಲೆಬಸ್ ಇರುತ್ತದೆ. ಅಷ್ಟೇಕೆ ವರ್ಷಂಪ್ರತಿ ಪರೀಕ್ಷೆ ಕೂಡ ಇರುತ್ತದೆ. ಆದರೆ ಇದರಲ್ಲಿ ಕೇವಲ ಕ್ರೀಡಾ ಚಟುವಟಿಕೆಗಳು ಮಾತ್ರ ಒಳಗೊಂಡಿರುತ್ತದೆ. ಕ್ರೀಡೆ ಅಂದ ಮೇಲೆ ಅದಕ್ಕೆ ತನ್ನದೇ ಆದಂತಹಾ ನಿಯಮಗಳಿರುತ್ತದೆ. ಅಲ್ಲದೆ, ಅದರ ಅಳವಾದ ಜ್ಞಾನ ಕೂಡ ಅಗತ್ಯವಿದೆ. ಇವುಗಳ ಬಗೆಯನ್ನು ಸಾಮಾನ್ಯ ಶಾಲೆಗಳಲ್ಲಿ ಕಲಿಯಲು ಸಾಧ್ಯವಿಲ್ಲ. ಕೆಲವೊಂದು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಾಠ ಇದ್ದರೂ, ಆಳವಾದ ಅಧ್ಯಯನ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇವಲ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಬೇಕು ಎನ್ನುವ ವಿದ್ಯಾರ್ಥಿಗಳಿಗೆ ಕ್ರೀಡಾ ತರಗತಿ/ಶಾಲೆಗಳಿಗೆ ದಾಖಲಾಗುವುದು ಉತ್ತಮ. ಕ್ರೀಡಾ ಶಾಲೆ/ವಿ.ವಿ.ಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತಹಾ ಉಪಕರಣಗಳಿರುತ್ತದೆ. ಅದರಲ್ಲಿಯೂ ಸುಸಜ್ಜಿತ ಮೈದಾನ, ಜಿಮ್ ಉಪಕರಣ, ತರಬೇತಿ ಕೊಠಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನವೀನ್ ಭಟ್ ಇಳಂತಿಲ