Advertisement

ಸಿಂಥೆಟಿಕ್‌ ಟ್ರ್ಯಾಕ್‌ ಲೋಕಾರ್ಪಣೆಗೆ ಸೂಚನೆ

04:01 PM Nov 28, 2020 | Suhan S |

ವಿಜಯಪುರ: ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಅಥ್ಲೇಟಿಕ್‌ ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಯುವಜನ-ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶುಕ್ರವಾರ ನಗರದ ಕನಕದಾಸ ಬಡಾವಣೆಯಲ್ಲಿ ಈಜುಗೊಳ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ನಗರದ ಕ್ರೀಡಾಂಗಣದಲ್ಲಿರುವ ಸಿಂಥೇಟಿಕ್‌ ಅಥ್ಲೇಟಿಕ್‌ ಟ್ರ್ಯಾಕ್, ವಾಲಿಬಾಲ್‌ ಮೈದಾನ, ಈಜುಗೊಳ ಬಳಕೆಗೆ ಸಂಬಂಧಪಟ್ಟಂತೆ ನಿಯಮಾವಳಿಯಂತೆ ಕ್ರಮ ಕೈಗೊಳ್ಳಬೇಕು. ಈಜುಗೊಳ ನಿರ್ವಹಣೆಗೆ ಮಹಿಳಾ ವ್ಯವಸ್ಥಾಪಕರನ್ನು ನಿಯೋಜಿಸಬೇಕು. ಒಳಾಂಗಣ ಕ್ರೀಡಾಂಗಣ, ಮಲ್ಟಿಜಿಮ್‌ಗಳ ಮಾಸಿಕ ಶುಲ್ಕಗಳನ್ನುನಿಗದಿಪಡಿಸಿದಂತೆ ಆಕರಿಸಬೇಕು. ಕಾಲ ಕಾಲಕ್ಕೆ ಶುಲ್ಕ ನವೀಕರಿಸುವಂತೆ ಸೂಚಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೇಟಿಕ್‌ ವಾಲಿಬಾಲ್‌ ಅಂಕಣ ನಿರ್ಮಾಣದ ಕುರಿತಂತೆ ತಕ್ಷಣಅನುದಾನ ಬಳಕೆ ಪ್ರಮಾಣಪತ್ರ ಪಡೆಯಬೇಕು. ನಗರದ ಭೂತನಾಳ ಗ್ರಾಮದ ಹತ್ತಿರ ನಿರ್ಮಾಣ ಹಂತದಲ್ಲಿರುವ ಸೈಕ್ಲಿಂಗ್‌ ವೆಲೊಡ್ರೋಂ ಕಾಮಗಾರಿಗಳನ್ನು ಸೈಕ್ಲಿಂಗ್‌ ಫೆಡರೇಶನ್‌ನಪರಿಶೀಲನೆ ಆಧಾರದ ಮೇಲೆ ಅನುದಾನಸಂದಾಯ, ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣಕ್ಕೆಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕನಕದಾಸ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಗೊಳ ಕಾಮಗಾರಿ ಆದ್ಯತೆಮೇಲೆ ನಿಯಮಾವಳಿ ಮತ್ತು ನಿರ್ದೇಶನಗಳನ್ವಯನಿರ್ಮಿಸಬೇಕು. ಒಳಾಂಗಣ, ಕ್ರೀಡಾಂಗಣ ಕಾಮಗಾರಿಗಳನ್ನು ನಿಗದಿತ ಅವ ಧಿಯೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಕ್ರೀಡಾ ತರಬೇತುದಾರರ,ಮಾರ್ಕರ್‌ಗಳ ಹಾಗೂ ರಾತ್ರಿ ಕಾವಲುಗಾರರು, ಉದ್ಯಾನ ನಿರ್ವಾಹಕರು (ಗಾರ್ಡನರ್‌) ಈ ಎಲ್ಲರ ಮೂರು ವಿಭಾಗಗಳಾಗಿ ಪ್ರತ್ಯೇಕವಾಗಿ ಕನಿಷ್ಠವೇತನ ನಿಗದಿಪಡಿಸಬೇಕು. ಅವರಿಗೆ ಕನಿಷ್ಠ 8 ಗಂಟೆಕಡ್ಡಾಯ ಸೇವೆ ಸಲ್ಲಿಸುವ ಕುರಿತು ಮನವರಿಕೆಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾ ಕ್ರೀಡಾಂಗಣದ ಮಳಿಗೆಗಳ ಬಾಡಿಗೆಹೆಚ್ಚಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.ಅದರಂತೆ ಒಳಾಂಗಣ ಕ್ರೀಡಾಂಗಣದ ಎದುರು  ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ 11 ಮಳಿಗೆಗಳ ಬಾಡಿಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕರಾರು ಒಪ್ಪಂದ ಮತ್ತು ಬಾಡಿಗೆ ಹೆಚ್ಚಿಸುವ ಕುರಿತಂತೆ ಪಾಲಿಕೆ ಆಯುಕ್ತರಿಂದ ವರದಿ ಪಡೆಯಲು ಅವರು ಸೂಚಿಸಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್‌, ಕೇರಂ ಮತ್ತು ಬಿಲಿಯರ್ಡ್ಸ್‌ ಕ್ರೀಡೆಗೂ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಒಟ್ಟಾರೆ ವಿವಿಧ ಕಾಮಗಾರಿಗಳು ಮಾದರಿಯಾಗಿ ನಿರ್ಮಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೆ ಅತ್ಯುತ್ತಮವಾಗಿ ನಿರ್ವಹಿಸಲು ಸೂಚಿಸಿದರು.

ಸಭೆಯಲ್ಲಿ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಎಸ್‌.ಜಿ. ಲೋಣಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next