Advertisement

ಒತ್ತಡದಲ್ಲಿರುವವರಿಗೆ ಕ್ರೀಡೆ ದಿವ್ಯಔಷಧ

12:46 PM Jan 23, 2018 | Team Udayavani |

ಬೀದರ: ಕ್ರೀಡೆಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಬಲಗೊಳಿಸುತ್ತವೆ. ಕ್ರೀಡೆಗಳು ವ್ಯಕ್ತಿ ವಿಕಸನಕ್ಕೆ ಪೂರಕವಾಗಿದ್ದು, ಅಭಿವೃದ್ಧಿಯ ಮೆಟ್ಟಿಲೂ ಆಗಬಲ್ಲವು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಹೇಳಿದರು.

Advertisement

ನಗರ ಹೊರವಲಯದ ಪಶು ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಸೋಮವಾರ ಪ್ರಸಕ್ತ ಸಾಲಿನ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವರ್ಷ ಸರ್ಕಾರಿ ಕೆಲಸ
ನಿರ್ವಹಣೆಯ ಒತ್ತಡದಲ್ಲಿರುವ ನೌಕರರಿಗೆ ಕ್ರೀಡೆಗಳು ದಿವ್ಯ ಔಷಧ ಆಗಬಲ್ಲವು ಎಂದು ಅಭಿಪ್ರಾಯಪಟ್ಟರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಯಾವುದೇ ವಿವಾದಕ್ಕೆ ಆಸ್ಪದ ಕೊಡದೇ ಶಿಸ್ತಿನಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾಡಳಿತದ ಸಹಕಾರ ದಿಂದ ಮುಂದಿನ ವರ್ಷ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ಬೀದರನಲ್ಲಿ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

 ಪ್ರಧಾನ ಕಾರ್ಯದರ್ಶಿ ರಮೇಶ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಪಂಚಾಕ್ಷರಿ, ತೀರ್ಪುಗಾರ ಶ್ರೀನಿವಾಸ ರೆಡ್ಡಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರರು. ರಾಜ್‌ ಪರಿಷತ್‌ ಸದಸ್ಯ ರಾಜಕುಮಾರ ಮಾಳಗೆ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಪೀಟರ್‌ ನಿರೂಪಿಸಿದರು. 

ಕ್ರೀಡಾ ಬೈಕ್‌ ರ್ಯಾಲಿ: ಉದ್ಘಾಟನೆ ಸಮಾರಂಭಕ್ಕೆ ಮೊದಲು ನೂರಾರು ಸರ್ಕಾರಿ ನೌಕರರು ರಾಜೇಂದ್ರಕುಮಾರ ಗಂದಗೆ, ರಮೇಶ ಮಠಪತಿ, ರಾಜಕುಮಾರ ಮಾಳಗೆ ಅವರ ನೇತೃತ್ವದಲ್ಲಿ ನಗರದ ನೆಹರೂ ಕ್ರೀಡಾಂಗಣದಿಂದ ಪಶುವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದ ವರೆಗೆ ಬೈಕ್‌ ರ್ಯಾಲಿ ನಡೆಸಿದರು. ಕ್ರೀಡಾ ಜ್ಯೋತಿಯೊಂದಿಗೆ ಜಯಘೋಷಗಳನ್ನು ಕೂಗುತ್ತ ತೆರಳಿದ್ದು ಗಮನ ಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next