Advertisement
ಅಮೆರಿಕ, ಜಪಾನ್, ಬ್ರಿಟನ್, ಭಾರತದಲ್ಲಿ ಮುಂಬೈ, ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ಸ್ಮಾರ್ಟ್‌ಮೀಟರ್‌ಗಳು ಅಳವಡಿಸಿದ್ದು, ಇಲ್ಲೆಲ್ಲ ಶೇ.100 ರಷ್ಟು ನಿಖರವಾಗಿ ನೀರಿನ ಬಿಲ್‌ಗಳು ಬರುತ್ತಿವೆ.
Related Articles
Advertisement
ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಜಲ ಮಂಡಳಿ ಸರ್ವರ್‌ಗಳಿಗೆ ರೀಡಿಂಗ್ ಬರಲಿವೆ. ಪ್ರತಿದಿನ ಬಳಕೆಯಾಗುವ ನೀರು, ಅದಕ್ಕೆ ತಗುಲುವ ವೆಚ್ಚ, ಎಷ್ಟು ಪ್ರಮಾಣದಲ್ಲಿ ನೀರು ಪೂರೈಸಬಹುದು ಸೇರಿದಂತೆ ಹಲವಾರು ನಿಖರವಾದ ಮಾಹಿತಿಗಳು ಜಲ ಮಂಡಳಿ ಮುಖ್ಯ ಕಚೇರಿಯಲ್ಲೇ ಪರಿಶೀಲಿಸಬಹುದಾಗಿದೆ.
ಟೆಂಡರ್ ಪಡೆದ ಸಂಸ್ಥೆಯಿಂದ ಅಧ್ಯಯನ:
ಬೆಂಗಳೂರಿನಲ್ಲಿ ಸ್ಮಾರ್ಟ್‌ಮೀಟರ್ ಅಳವಡಿಸುವ ಕುರಿತು ಅಧ್ಯಯನ ನಡೆಸಿ ಜಲಮಂಡಳಿಗೆ ವರದಿ ನೀಡಲು (ಟ್ರಾನ್ಸಾಕ್ಷನ್ ಎಡ್ವೈಸರ್) ಕನ್ಸಟೆನ್ಸಿಗಾಗಿ ಕರೆದ ಟೆಂಡರ್ ನಲ್ಲಿ ರಾಜ್ಯ ಸರ್ಕಾರದ ಅಧೀನದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಕರ್ನಾಟಕ ಲಿ.(ಐಡೆಕ್)ಹೆಸರಿನ ಕಂಪನಿವೊಂದು ಭಾಗವಹಿಸಿದೆ. ಕಂಪನಿಯು ಸಲ್ಲಿಸಿರುವ ದಾಖಲೆ ಗ ಳನ್ನು ಜಲಮಂಡಳಿ ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಬಹುತೇಕ ಇದೇ ಕಂಪನಿಗೆ ಕನ್ಸಟೆನ್ಸಿ ನೀಡುವ ಸಾಧ್ಯತೆಗಳಿವೆ.
ಇನ್ನು ಸ್ಮಾರ್ಟ್ ಮೀಟರ್‌ಗಳನ್ನು ಯಾವ ಮಾದರಿಯಲ್ಲಿ ಅಳವಡಿಸಬಹುದು, ವಿದೇಶದ ನಗರಗಳಲ್ಲಿ ಸ್ಮಾಟ್‌ಮೀಟರ್ ವ್ಯವಸ್ಥೆಗಳು ಹೇಗಿವೆ, ಇದಕ್ಕೆ ಅಲ್ಲಿನ ಸರ್ಕಾರವೇ ದುಡ್ಡು ವ್ಯಯಿಸಿ ದೆಯೇ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗಿ ದೆಯೇ, ಯಾವ ಮೀಟರ್ ಅಳವಡಿಸಿದರೆ ಸೂಕ್ತ ರೀಡಿಂಗ್ ತೆಗೆದುಕೊಳ್ಳಬಹುದು ಎಂಬಿತ್ಯಾದಿ ವಿಚಾ ರಗಳ ಕುರಿತು ಈ ಸಂಸ್ಥೆಯು ಕೆಲವು ತಿಂಗಳುಗಳ ಕಾಲ ಅಧ್ಯಯನ ನಡೆಸಲಿದೆ.
ಬೆಂಗಳೂರಿನ ಐದಾರು ಕಡೆ ಸ್ಮಾರ್ಟ್‌ಮೀಟರ್ ಅಳವಡಿಸಿ ಪರಿಶೀಲಿಸಲಿದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಜಲಮಂಡಳಿಗೆ ಈ ಸುದೀರ್ಘವಾದ ವರದಿ ನೀಡಲಿದೆ. ಈ ಸಂಸ್ಥೆಯು ನೀಡುವ ವರದಿ ಆಧರಿಸಿ ಯೋಜನೆ ರೂಪಿಸುವ ಬಗ್ಗೆ ಸರ್ಕಾರಕ್ಕೆ ಜಲಮಂಡಳಿಯು ಪ್ರಸ್ತಾವನೆ ಸಲ್ಲಿಸಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯ ಶುರುವಾಗಲಿದೆ.
ವಾಣಿಜ್ಯ ಸಂಕೀರ್ಣಗಳಿಗೆ ಮಾತ್ರ ಅಳವಡಿಕೆ ಏಕೆ?
ಕಾವೇರಿ ನೀರು ಬಳಸುತ್ತಿರುವ ಬೆಂಗಳೂರಿನ 10.95 ಲಕ್ಷ ಸಂಪರ್ಕಗಳಲ್ಲಿ ಜಲಮಂಡಳಿಯು ಮೆಕ್ಯಾನಿಕಲ್ ಮೀಟರ್ ಅಳವಡಿಸಿದೆ. ಮೆಕ್ಯಾನಿಕಲ್ ಮೀಟರ್‌ಗಳಿಂದ ನೀರಿನ ಬಿಲ್‌ಗಳಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತವೆ. ಪ್ರತಿ ತಿಂಗಳು 1 ಲಕ್ಷ ಲೀಟರ್‌ಗಿಂತ ಕಡಿಮೆ ನೀರನ್ನು ಬಳಸುವವರಿಗೆ ಇದು ಹೊರೆಯಾಗುವುದಿಲ್ಲ. ಬದಲಾಗಿ 5 ಲಕ್ಷ ಲೀಟರ್‌ಗಿಂತ ಹೆಚ್ಚಿನ ನೀರು ಬಳಸುವ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಐಟಿ-ಬಿಟಿ ಕಂಪನಿಗಳಂತಹ ಪ್ರದೇಶಗಳಲ್ಲಿ ಪ್ರತಿ ತಿಂಗಳು ಹೆಚ್ಚುವರಿಯಾಗಿ ಲಕ್ಷಾಂತರ ರೂ. ನೀರಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ವಾಣಿಜ್ಯ ಸಂಕೀರ್ಣಗಳಂತಹ ಪ್ರದೇಶಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲು ಜಲಮಂಡಳಿಯು ಚಿಂತಿಸಿದೆ.
ಸ್ಮಾರ್ಟ್ ಮೀಟರ್ ಅಳವಡಿಸುವ ಬಗ್ಗೆ ಅಧ್ಯಯನ ನಡೆಸುವ ಕಂಪನಿಯು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸುತ್ತೇವೆ. ಮೊದಲನೇ ಹಂತದಲ್ಲಿ ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳಲ್ಲಿ ಸ್ಮಾರ್ಟ್‌ಮೀಟರ್ ಅಳವಡಿಸುವ ಉದ್ದೇಶವಿದೆ. ಇದರಿಂದ ವಾಣಿಜ್ಯ ಕಟ್ಟಡಗಳಿಗೆ ಅನುಕೂಲವಾಗಲಿದೆ. ●ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಲಮಂಡಿ ಅಧ್ಯಕ
-ಅವಿನಾಶ ಮೂಡಂಬಿಕಾನ