ಮಡಿಕೇರಿ: ಸಮಾಜದ ಸಂಘಟನೆಯನ್ನು ಶಕ್ತಿಯುತಗೊಳಿಸಲು ಕ್ರೀಡಾಕೂಟಗಳು ಹೆಚ್ಚು ಸಹಕಾರಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ಹೇಳಿದರು. ಕೊಡಗು ಗೌಡ ಯುವ ವೇದಿಕೆಯ ವತಿಯಿಂದ 2019 ನೇ ಸಾಲಿನ ‘ಗೌಡ ಕ್ರಿಕೆಟ್ ಕಪ್’ ಪಂದ್ಯಾವಳಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾುತು.
ಸಭಾ ಕಾರ್ಯಕ್ರಮ ಮತ್ತು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗೌಡ ಸಮಾಜ ಬಾಂಧವರೆಲ್ಲರೂ ಸೌಹಾರ್ದಯುತವಾಗಿ ಒಂದೆಡೆ ಸೇರುವ ಮೂಲಕ ಸಮಾಜದ ಸಂಘಟನೆಯನ್ನು ಶಕ್ತಿಯುತಗೊಳಿಸುವ ಸಲುವಾಗಿ ಆಯೋಜಿಸಿರುವ ಕ್ರೀಡಾಕೂಟ ಯಶಸ್ವಿಯಾಗಲಿ ಮತ್ತು ಸಾಮರಸ್ಯ ಮೂಡಲಿ ಎಂದು ಕರೆ ನೀಡಿದರು. ಇಂತಹ ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಅಗತ್ಯದೆ. ಕ್ರೀಡೆ ಮತ್ತು ವ್ಯಾಯಾಮದಿಂದ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯದೆ ಎಂದರು.
ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಸೈನಿಕ ಪರಂಪರೆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿರುವ ಕೊಡಗು ಜಿಲ್ಲೆ, ಕ್ರೀಡಾ ಕ್ಷೇತ್ರದಲ್ಲಿಯು ತನ್ನದೇ ಆದ ಛಾಪನ್ನು ಮೂಡಿಸಿದೆ. ಜಿಲ್ಲೆಯ ಗ್ರಾುàಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪೋ›ತ್ಸಾಸುವ ಕೆಲಸವಾಗಬೇಕೆಂದರು.
ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಹಾಗೂ ಸಮಾಜಸೇವಕಿ ಪುದಿಯನೆರವನ ರೇವತಿ ರಮೇಶ್, ಗೌಡ ಯುವ ವೇದಿಕೆ ಕ್ರೀಡಾಸುತಿ ಅಧ್ಯಕ್ಷ ಬಾಲಾಡಿ ಮನೋಜ್ ಕುಮಾರ್, ಸಾಂಸ್ಕೃತಿಕ ಸುತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಆಹಾರ ಸುತಿ ಅಧ್ಯಕ್ಷ ಪರಿಚನ ಸತೀಶ್ ಉಪಸ್ಥಿತರಿದ್ದರು. ಕಟ್ಟೆಮನೆ ಜಾಗೃತಿ ಹಾಗೂ ಕುಕ್ಕೇರ ಬೆಳಕು ಬೊಳ್ಳಮ್ಮ ಪ್ರಾರ್ಥಿಸಿದರೆ, ಕಟ್ಟೆಮನೆ ಸೋನಾ ಸ್ವಾಗತಿಸಿ, ರಿತ್ ಮಾದಯ್ಯ ವಂದಿಸಿದರು.ಆರ್‌ಸಿಬಿ ಮಡಿಕೇರಿ ಹಾಗೂ ಎಫ್ಎಂಸಿ ವಾರಿಯರ್ಸ್ ನಡುನ ಪ್ರದರ್ಶನ ಪಂದ್ಯವನ್ನು ಶಾಸಕ ಅಪ್ಪಚ್ಚು ರಂಜನ್ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.
ಸ್ನೇಹ ಸೌಹಾರ್ದ
ಅಧ್ಯಕ್ಷತೆ ವಸಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಯುವ ವೇದಿಕೆ ಕಳೆದ 19 ವರ್ಷಗಳಿಂದ ಕಾರ್ಯನಿರ್ವಸುತ್ತಿದ್ದು, ಕ್ರೀಡಾಕೂಟದ ಆಯೋಜನೆಯ ಮೂಲಕ ಸಮಾಜ ಬಾಂಧವರಲ್ಲಿ ಪರಸ್ಪರ ಸ್ನೇಹ ಸೌಹಾರ್ದ ಮೂಡಿಸುವ ಕಾರ್ಯ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಪ್ರಾಕೃತಿಕ ಕೋಪ ಸಂಭಸಿದ ನ್ನೆಲೆಯಲ್ಲಿ ಈ ಬಾರಿಯ ಕ್ರೀಡಾಕೂಟವನ್ನು ಸರಳ ರೀತಿಯಲ್ಲಿ ಆಯೋಜಿಸಿರುವುದಾಗಿ ಹೇಳಿದರು.
ಇದೇ ಸಂದರ್ಭ ಪುಲ್ವಾಮ ದಾಳಿಯಲ್ಲಿ àರಮರಣವನ್ನಪ್ಪಿದ ಯೋಧರಿಗೆ ಹಾಗೂ ಪ್ರಾಕೃತಿಕ ಕೋಪಕ್ಕೆ ಸಿಲುಕಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾುತು.