Advertisement

ಆಟೋಟ ಸ್ಪರ್ಧೆಗಳಲ್ಲಿ ನಲಿದ ಶ್ರಮಿಕರು

03:20 PM May 02, 2018 | Team Udayavani |

ಮೈಸೂರು: ಜೀವನ ನಿರ್ವಹಣೆಗಾಗಿ ನಿತ್ಯವೂ ಕೆಲಸ ಕಾರ್ಯಗಳಲ್ಲಿ ತೊಡಗಿರುವ ದುಡಿಯುವ ವರ್ಗದ ಪುರುಷ ಹಾಗೂ ಮಹಿಳೆಯರಿಗಾಗಿ, ಕಾರ್ಮಿಕರ ದಿನದ ಪ್ರಯುಕ್ತ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

Advertisement

ಆಟೋಟ ಸ್ಪರ್ಧೆಗಳು, ಮೆರವಣಿಗೆ, ಸಮಾವೇಶ ಹಾಗೂ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಾರ್ಮಿಕರು ಸಂತಸದಿಂದ ದಿನಕಳೆದರು. ಹಲವು ವರ್ಷಗಳ ಹಿಂದೆ ಚಿಕಾಗೋದ, ಇಲಿನಾಯ್ಸ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯ ಸ್ಮರಣಾರ್ಥ ಪ್ರತಿ ವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಹೀಗಾಗಿ ನಗರದ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬಿಲ್ಡರ್ ಅಸೋಸಿಯೇಷನ್‌ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮತ್ತು ಗೌರವ ಧನ ನೌಕರರ ಮಹಾಮಂಡಲ ಸೇರಿದಂತೆ ವಿವಿಧ ಕಾರ್ಮಿಕರ ಸಂಘಟನೆಗಳ ವತಿಯಿಂದ ಮಂಗಳವಾರ ನಗರದ ವಿವಿಧ ಕಡೆಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು.

ಆಟೋಟ ಸ್ಪರ್ಧೆಗಳು: ನಗರದ ಬಿಲ್ಡರ್ ಅಸೋಸಿಯೇಷನ್‌ ಆಪ್‌ ಇಂಡಿಯಾ, ಮೈಸೂರು ಬಿಲ್ಡರ್ ಚಾರಿಟಬಲ್‌ ಟ್ರಸ್ಟ್‌ನಿಂದ ಕಾರ್ಮಿಕರ ದಿನದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಜಯಲಕ್ಷ್ಮೀಪುರಂ ಮಹಾಜನ ಕಾಲೇಜು ಮೈದಾನದಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ಜಿಲ್ಲೆಯ 500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಕಾರ್ಮಿಕರಿಗೆ ಓಟ, ಗುಂಡು ಎಸೆತ, ಹಗ್ಗ ಜಗ್ಗಾಟ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ವಾಲಿಬಾಲ್‌ ಕ್ರೀಡಾಪಟು ಎಚ್‌.ಎನ್‌.ಹೇಮಲತಾ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. 

Advertisement

ಕಾರ್ಮಿಕರ ಸಮಾವೇಶ: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಮತ್ತು ಗೌರವಧನ ನೌಕರರ ಮಹಾಮಂಡಲ ಹಾಗೂ ವಿವಿಧ ಕಾರ್ಮಿಕ ಸಂಘಗಳು ಕಾರ್ಮಿಕ ದಿನದ ಅಂಗವಾಗಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಸಮಾವೇಶ ನಡೆಸಲಾಯಿತು.

ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ನಡೆದ ಕಾರ್ಮಿಕ ನ್ಯಾಯಾಲಯ ಜಿಲ್ಲಾ ನ್ಯಾಯಾಧೀಶ ಎನ್‌.ಎಂ.ರವಿ, ಕಾರ್ಮಿಕ ಆಯುಕ್ತ ಎ.ಜೆ.ಶ್ರೀವಳ್ಳಿ, ಎಸ್‌.ಡಿ.ರವಿಕುಮಾರ್‌, ವೆಂಕಟೇಶ್‌ ಶಿಂದಿಹಟ್ಟಿ, ಅಪರ ಕಾರ್ಮಿಕ ಆಯುಕ್ತ ಜಿ.ಟಿ.ಜಿಂಕಲಪ್ಪಇನ್ನಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next