Advertisement

ಹುಬ್ಬಳ್ಳಿಯಲ್ಲಿ 150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುತ್ಛಯ

06:55 PM May 02, 2021 | Team Udayavani |

ವರದಿ : ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡು ಅಂದಾಜು 150 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್‌ ಸೋರ್ಟ್ಸ್ ಕಾಂಪ್ಲೆಕ್ಸ್‌ ಸುಮಾರು 15 ಎಕರೆ ಜಾಗದಲ್ಲಿ ತಲೆ ಎತ್ತಲಿದೆ.

ಕ್ರೀಡಾಪಟುಗಳಿಗೆ ತರಬೇತಿಗೆ ಇನ್ನಷ್ಟು ಉತ್ತೇಜನ ನೀಡುವ ಕಾರ್ಯವನ್ನು ಇದು ಮಾಡಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಗೋಕುಲ ರಸ್ತೆಯಲ್ಲಿ ಸಮಗ್ರ ಕ್ರೀಡಾ ಸಂಕೀರ್ಣ ಕೈಗೊಳ್ಳಲಾಗುತ್ತಿದ್ದು, ಉತ್ತರ ಕರ್ನಾಟಕದ ಪ್ರಮುಖ ಕ್ರೀಡಾಂಗಣವೆಂಬ ಖ್ಯಾತಿ ಪಡೆಯಲಿದೆ. ಈಗಾಗಲೇ ಕ್ರೀಡಾಂಗಣದ ವಿನ್ಯಾಸ ರೂಪಿಸಲಾಗಿದ್ದು, ಎಷ್ಟು ಕಟ್ಟಡಗಳು ಬರಲಿವೆ, ಯಾವ ಯಾವ ಕ್ರೀಡೆಗೆ ಅವಕಾಶ ದೊರೆಯಲಿದೆ ಎಂಬುದರ ಮಾಹಿತಿ ಸಿದ್ಧಪಡಿಸಲಾಗಿದೆ.

ಬೆಂಗಳೂರಿನಲ್ಲಿನ ಪಡುಕೋಣೆ ಕ್ರೀಡಾ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ ಭೇಟಿ, ಪರಿಶೀಲನೆ, ಖ್ಯಾತ ಹಿರಿಯ ಕ್ರೀಡಾಪಟುಗಳು, ತಜ್ಞರಿಂದ ಮಾಹಿತಿ ಪಡೆಯಲಾಗಿದೆ. ಕ್ರೀಡಾಂಗಣ ಒಟ್ಟು 3,47,400 ಚದರ ಅಡಿಯಲ್ಲಿ ಅರಳಲಿದೆ. ಜಿ+3 ಮಾದರಿಯ ಸಂಕೀರ್ಣ ಇದಾಗಿದ್ದು, ಒಟ್ಟು ಐದು ಬ್ಲಾಕ್‌ಗಳನ್ನು ಹೊಂದಲಿದೆ.

ಹೊರಾಂಗಣ ಕ್ರೀಡೆಗಳಿಗೆ 6.75 ಎಕರೆ, ಕಟ್ಟಡಗಳಿಗಾಗಿ 2.75 ಎಕರೆ, ಇನ್ನಿತರ ಕಾರ್ಯಕ್ಕಾಗಿ 5.5 ಎಕರೆ ಭೂಮಿ ಬಳಕೆ ಆಗಲಿದೆ. ಗೋಕುಲ ರಸ್ತೆಯ ಕಾಟನ್‌ ಕೌಂಟಿ ಕ್ಲಬ್‌ನ ಹಿಂಭಾಗದಲ್ಲಿ 15 ಎಕರೆ ಜಾಗವನ್ನು ಕ್ರೀಡಾ ಸಂಕೀರ್ಣಕ್ಕೆ ಗುರುತಿಸಲಾಗಿತ್ತು. ಸ್ಮಾರ್ಟ್‌ ಸಿಟಿ ಯೋಜನೆ ಉನ್ನತಾಧಿ ಕಾರಿ ಸಮಿತಿ ಒಪ್ಪಿಗೆ, ಸ್ಮಾರ್ಟ್‌ ಸಿಟಿ ಯೋಜನೆಯ ಇನ್ನೊಂದು ಕಾಮಗಾರಿಯ ಹಣವನ್ನು ಈ ಯೋಜನೆಗೆ ಬಳಕೆಗೆ ಆರ್ಥಿಕ ಇಲಾಖೆ ಅನುಮೋದನೆ ಕಾರಣದಿಂದ ಯೋಜನೆ ಆರಂಭ ಸಾಧ್ಯವಾಗಿರಲಿಲ್ಲ. ಇದೀಗ ಇರುವ ಎಲ್ಲ ಅಡ್ಡಿಗಳು ನಿವಾರಣೆಯಾಗಿದ್ದು, ಸಮಗ್ರ ಕ್ರೀಡಾ ಸಂಕೀರ್ಣದ ಕಾಮಗಾರಿ ಆರಂಭಕ್ಕೆ ಯೋಗ ಕೂಡಿ ಬಂದಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next