Advertisement
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಆಕರ್ಷಕ ಪಥಸಂಚಲನ: ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ರಾಣೆಬೆನ್ನೂರು,ಹಾವೇರಿ, ಶಿಗ್ಗಾವಿ ಉಪವಿಭಾಗ ಹಾಗೂಡಿಎಆರ್ ತಂಡ ಹಾಗೂ ಮಹಿಳಾ ಪೊಲೀಸ್‌ಕ್ರೀಡಾ ತಂಡಗಳು ಹಳದಿ, ಪಿಂಕ್, ಆರೇಂಜ್, ಕ್ರೀಮ್, ಮರೂನ್ ಬಣ್ಣದ ಟೀ ಶರ್ಟ್ ಧರಿಸಿ ಪಥಸಂಚಲನ ನಡೆಸಿದರು. ಡಿಎಆರ್‌ತಂಡದ ಮುಖ್ಯಸ್ಥರಾದ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ನಡೆದ ಪಥಸಂಚಲನ ಅತ್ಯಂತಆಕರ್ಷಕವಾಗಿತ್ತು. ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಬೆಳಗಿಸಿ ಕಳೆದ ಪೊಲೀಸ್‌ವಾರ್ಷಿಕ ಕ್ರೀಡಾಕೂಟದ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕ್ರೀಡಾಪಟು ಸಂತೋಷಜ್ಯೋತಿಯನ್ನು ಸ್ವೀಕರಿಸಿದರು. ಆರಂಭಿಕವಾಗಿಓಟದ ಸ್ಪರ್ಧೆಗೆ ಹಸಿರು ನಿಶಾನೆ ಮೂಲಕಜಿಲ್ಲಾಧಿಕಾರಿಗಳು ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು.
ಜಿಪಂ ಸಿಇಒ ಮಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಿವೃತ್ತಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾಟೀಲಸೇರಿದಂತೆ ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್‌ಅಧಿಕಾರಿಗಳು, ಗಣ್ಯರು ಇದ್ದರು.ಖವೈಎಸ್‌ಪಿ ವಿಜಯಕುಮಾರ ಸಂತೋಷಸ್ವಾಗತಿಸಿದರು. ರಾಣೆಬೆನ್ನೂರು ಡಿಎಸ್‌ಪಿ, ಟಿ.ವಿ. ಸುರೇಶ ವಂದಿಸಿದರು.
ಹಬ್ಬ ಹರಿದಿನಗಳಲ್ಲಿ ತನ್ನ ಕುಟುಂಬದಿಂದ ದೂರ ಉಳಿದನಾಗರಿಕರ ನೆಮ್ಮದಿಗಾಗಿ ಕೆಲಸಮಾಡುವಪೊಲೀಸರಿಗೆ ದೈಹಿಕ ಮತ್ತು ಮಾನಸಿಕ ದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಕ್ರೀಡಾ ಚಟುವಟಿಕೆಯಿಂದ ಒಳ್ಳೆಯ ದೈಹಿಕ-ಮಾನಸಿಕ ಆರೋಗ್ಯ ದೃಢತೆ ಕಾಯ್ದುಕೊಳ್ಳಬಹುದು. – ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ