ಹೊಸದಿಲ್ಲಿ: ಈ ತಿಂಗಳ ಅಂತ್ಯದ ವೇಳೆಗೆ ಒಲಿಂಪಿಕ್ಸ್ ಗೆ ಆಯ್ಕೆಯಾದ ಆ್ಯತ್ಲೀಟ್‌ಗಳಿಗೆ ರಾಷ್ಟ್ರೀಯ ಶಿಬಿರವನ್ನು ಹಂತ ಹಂತವಾಗಿ ಪುನರಾರಂಭಿಸಲು ತನ್ನ ಸಚಿವಾಲಯ ಯೋಜನೆಯನ್ನು ರೂಪಿಸುತ್ತಿದೆ ಎಂದು ತಿಳಿಸಿದ ಕೇಂದ್ರದ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಉಳಿದ ಆ್ಯತ್ಲೀಟ್‌ಗಳು ಕಡಿಮೆಪಕ್ಷ ಸಪ್ಟಂಬರ್‌ವರೆಗೆ ಕಾಯಬೇಕಾಗಬಹುದು ಎಂದರು.
ಲಾಕ್‌ಡೌನ್‌ನಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಶಿಬಿರ ಪುನರಾರಂಭ ವಿಳಂಬವಾಗುತ್ತಿದೆ.ಶಿಬಿರಗಳು ಹಂತಹಂತವಾಗಿ ಆರಂಭವಾಗಲಿದೆ. ಮೊದಲಿಗೆ ನಾವು ಎನ್‌ಐಎಸ್ ಪಟಿಯಾಲ ಮತ್ತು ಸಾಯ್ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಆರಂಭಿಸಲಿದ್ದೇವೆ. ಈ ಎರಡು ಕೇಂದ್ರಗಳಲ್ಲಿ ಈಗಾಗಲೇ ಆ್ಯತ್ಲೀಟ್‌ಗಳು ಇರುವ ಕಾರಣ ಈ ತಿಂಗಳ ಅಂತ್ಯದಲ್ಲಿ ತರಬೇತಿ ಶಿಬಿರ ಆರಂಭಿಸಲಾಗುವುದು ಎಂದು ರಿಜಿಜು ತಿಳಿಸಿದರು.
ಒಲಿಂಪಿಕ್ಸ್‌ಗೆ ಅರ್ಹತೆಗಳಿಸಿದ ಆ್ಯತ್ಲೀಟ್‌ಗಳಿಗೆ ಮತ್ತು ಭವಿಷ್ಯದಲ್ಲಿ ಒಲಿಂಪಿಕ್ ಅರ್ಹತಾ ಕೂಟ ಇರುವ ಕ್ರೀಡಾ ಸ್ಪರ್ಧೆಗಳ ಆ್ಯತ್ಲೀಟ್‌ಗಳಿಗೆ ತರಬೇತಿ ಶಿಬಿರ ಆರಂಭವಾಗಲಿದೆ.
ಕೋವಿಡ್-19ದಿಂದಾಗಿ ಮಾರ್ಚ್ ಮಧ್ಯ ಭಾಗದಲ್ಲಿ ರಾಷ್ಟ್ರೀಯ ಶಿಬಿರ ಗಳನ್ನು ರದ್ದುಗೊಳಿಸಲಾಗಿತ್ತು.ಮೇ 3ರಿಂದ ಶಿಬಿರ ಪುನ ರಾರಂಭಿಸಲು ನಾವು ಬಯಸಿ ದ್ದೆವು. ಆದರೆ ಲಾಕ್‌ಡೌನ್ ವಿಸ್ತರಣೆಯಾಗಿದ್ದರಿಂದ ನಮ್ಮ ಕೈ ಕಟ್ಟಲ್ಪಟ್ಟಿತ್ತು ಎಂದ ರಿಜಿಜು ನಾವೀಗ ಮೇ ಅಂತ್ಯದ ವೇಳೆ ಶಿಬಿರ ಪುನರಾರಂಭಕ್ಕೆ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಪಟಿಯಾಲದಲ್ಲಿ 60 ಆ್ಯತ್ಲೀಟ್‌ಗಳು
ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ರಾಷ್ಟ್ರೀಯ ರಿಲೇ ತಂಡದ ಸದಸ್ಯರ ಸಹಿತ 60ಕ್ಕಿಂತ ಹೆಚ್ಚಿನ ಆ್ಯತ್ಲೀಟ್‌ಗಳು ಪಟಿಯಾಲದ ಎನ್‌ಐಎಸ್ ಕೇಂದ್ರದಲ್ಲಿ ಲಾಕ್‌ಡೌನ್ ಘೋಷಿಸುವ ಮೊದಲೇ ಇದ್ದರು. ಬೆಂಗಳೂರು ಸಾಯ್ ಕೇಂದ್ರದಲ್ಲಿ ರಾಷ್ಟ್ರೀಯ ಪುರುಷ ಮತ್ತು ವನಿತಾ ಹಾಕಿ ತಂಡದ ಸದಸ್ಯರು ಉಳಿದುಕೊಂಡಿದ್ದಾರೆ.