Advertisement

ಕ್ರೀಡಾ ಬಜೆಟ್: ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಗೆ ಅಸ್ತು

01:54 AM Jul 06, 2019 | Sriram |

ನವದೆಹಲಿ: ಈ ಸಲ ಕೇಂದ್ರ ಸರ್ಕಾರದಿಂದ ಮಂಡಿಸಲ್ಪಟ್ಟ ಬಜೆಟ್‌ನಲ್ಲಿ ಕ್ರೀಡೆಗೆ ನಿರೀಕ್ಷೆಯ ಮಟ್ಟದಲ್ಲಿ ಅನುದಾನ ದೊರಕಿಲ್ಲ. ಖೇಲೊ ಇಂಡಿಯಾದಡಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ (ಎನ್‌ಎಸ್‌ಇಬಿ) ಆರಂಭಿಸುತ್ತಿರುವುದು ಹೊಸ ವಿಚಾರ. ಉಳಿದಂತೆ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದುದ್ದೆ ಪುನರಾವರ್ತನೆಯಾಗಿದೆ. ಈ ಸಲ ಒಟ್ಟಾರೆ ಕ್ರೀಡೆಗೆ 411 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಸಲ 316 ಕೋಟಿ ರೂ. ಕೊಡಮಾಡಲಾಗಿತ್ತು.

Advertisement

‘2017ರಲ್ಲಿ ಖೇಲೊ ಇಂಡಿಯಾ ಆರಂಭಿಸಲಾಗಿದೆ. ದೇಶದಲ್ಲಿ ಕ್ರೀಡಾಭಿವೃದ್ದಿಗೆ ಹೊಸದೊಂದು ಆಯಾಮ ನೀಡುವ ದೃಷ್ಟಿಯಿಂದ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಆರಂಭಿಸಲಾಗುತ್ತಿದೆ. ಖೇಲೋ ಇಂಡಿಯಾದ ವ್ಯಾಪ್ತಿಯ ವಿಸ್ತರಣೆಗೆ ನಾವು ಬದ್ಧರಾಗಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು. ಖೇಲೊ ಇಂಡಿಯಾ ಯೋಜನೆಯನ್ನು ಎನ್‌ಎಸ್‌ಇಬಿ ಸ್ಥಾಪಿಸುವ ಮೂಲಕ ಬಲಪಡಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಿರ್ಧಾರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next