Advertisement

ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ

05:31 PM Nov 30, 2019 | Suhan S |

ಬೈಲಹೊಂಗಲ: ದೈಹಿಕ ಶಿಕ್ಷಣ ಎಲ್ಲರಿಗೂ ಅವಶ್ಯವಾಗಿದ್ದು, ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದು ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವಿಕ್ಷಕ ಆರ್‌.ಬಿ. ಗೋಕಾಕ ಹೇಳಿದರು.

Advertisement

ಪಟ್ಟಣದ ಬೈಲವಾಡ ರಸ್ತೆಯಲ್ಲಿರುವ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಮಾನವನ ಸರ್ವಾಂಗೀಣ ಬೆಳವಣಿಗೆ ಕ್ರೀಡೆ ಅವಶ್ಯವಾಗಿದ್ದು, ಕ್ರೀಡೆಯಿಂದ ಸದೃಢ ದೇಹ, ಸದೃಢ ಮನಸ್ಸು ಹಾಗೂ ಶಿಸ್ತು ನೀಡುತ್ತದೆ . ಎಲ್ಲರೂ ಕ್ರೀಡಾಮನೋಭಾವನೆ ಹೊಂದಿ, ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅದ್ಯಕ್ಷ ಎಸ್‌.ಎಂ. ಕರೀಕಟ್ಟಿ ಮಾತನಾಡಿ, ಉತ್ತಮ ಕ್ರೀಡಾ ಪಟುಗಳಿಗೆ ಜಿಲ್ಲಾ ಸಂಘದಿಂದ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟ್ರಮಟ್ಟದ ಕ್ರೀಡಾ ಪಟುಗಳನ್ನಾಗಿ ಮಾಡಲುಸಂಪೂರ್ಣ ಸಹಾಯ ಸಹಕಾರ ನೀಡುತ್ತವೆ. ಆದ್ದರಿಂದ ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಬಿರಾದಾರ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಛಲ ಹಾಗೂ ಗುರು ಅವಶ್ಯವಾಗಿದ್ದು, ಕ್ರೀಡೆಯಿಂದ ಸಹಕಾರ ಮನೋಭಾವನೆ ಬಂದು ಸಮಾಜದಲ್ಲಿ ಉತ್ತಮವಾಗಿ ಬಾಳಬೇಕಾದರೆ ಕ್ರೀಡೆ ಅವಶ್ಯವಾಗಿದೆ ಎಂದರು. ಈ ವೇಳೆ ಉಪಾಧ್ಯಕ್ಷ ಯೋಗೀಶ ಬಿರಾದಾರ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಮತಾ ಹಿರೇಮಠ, ಮಹಾಂತೇಶ ರೇಶ್ಮಿ, ಬಿ.ಎಸ್‌.ರಾಗಿ, ಶಿಕ್ಷಕರಾದ ವಿ.ಎಸ್‌.ಕುದರಿ, ರಮೇಶ ರೋಟ್ಟಿ, ದೀಪಕ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next