ಭರವಸೆಗಳನ್ನೇ ಕಳೆದುಕೊಂಡಿರುವ ತಂದೆ ತಾಯಿ ತಮ್ಮ ಮಗನನ್ನು ಉಳಿಸಲು ನಿಮ್ಮ ಮೊರೆ ಬಂದಿದ್ದಾರೆ. ದಯವಿಟ್ಟು ದಾನ ಮಾಡಿ ನನ್ನ ಮಗನ ಹೃದಯ ದುರ್ಬಲವಾಗಿದೆ. ಅವನಿಗೆ ತಕ್ಷಣವೇ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ.
ಸಹಾಯ ಮಾಡಿ.
“ಹುಟ್ಟಿದ ತಕ್ಷಣ ಆಸ್ಪತ್ರೆಯ ತೊಟ್ಟಿಲಲ್ಲಿ ನನ್ನ ಮಗ ಶಾಂತವಾಗಿ ನಿದ್ದೆ ಮಾಡುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡಿದಾಗ, ನನಗೆ ಒಂದು ರೀತಿಯ ಜವಾಬ್ದಾರಿಯ ಅನುಭವವಾಯಿತು. ನಾನು ಬಹಳ ಖುಷಿಯಾಗಿದ್ದೆ ಮತ್ತು ಜಗತ್ತಿನಲ್ಲಿರುವ ಒಳ್ಳೆಯದೆಲ್ಲವನ್ನೂ ಅವನಿಗೆ ದೊರಕಿಸಬೇಕು ಎನ್ನುವ ಆಶಯದಲ್ಲಿದ್ದೆ. ಆದರೆ ಬರುವ ದಿನಗಳಲ್ಲಿ ಎಲ್ಲ ಬದಲಾಗುತ್ತದೆ ಮತ್ತು ನನಗೆ ಬೇರೇನೂ ಬೇಡ, ಅವನು ಬದುಕಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಬರಲಿದೆ ಎಂಬುದು ಗೊತ್ತೇ ಇರಲಿಲ್ಲ” ಎನ್ನುತ್ತಾರೆ ಸಂದೀಪ್.
(ಧನಸಹಾಯ ಮಾಡಿ)
ಸಂದೀಪ್ ಮತ್ತು ಮಧುಮಿತಾ ಬಹಳ ದೊಡ್ಡ ಸಂಕಷ್ಟದಲ್ಲಿದ್ದಾರೆ, ಅವರ 3 ವರ್ಷದ ಮಗ ರಿಯನ್ಸ್, Congenital severe aortic stenosis ಎನ್ನುವ ಮಾರಣಾಂತಿಕ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾನೆ. ಓಪನ್ ಹಾರ್ಟ್ ಸರ್ಜರಿ ಮಾಡದೇ, ಅವನು ಹೆಚ್ಚು ಕಾಲ ಬದುಕುವುದು ಸಾಧ್ಯವಿಲ್ಲ. ಈ ಚಿಕಿತ್ಸೆಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ, ಆದರೆ ಕುಟುಂಬದವರ ಬಳಿ ಅಷ್ಟೊಂದು ಹಣವಿಲ್ಲ.
ಸಂದೀಪ್ ಒಂದು ಒಡವೆ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ, ಆದರೆ ಕರೋನ ಬಂದ ಮೇಲೆ ಕೆಲಸವನ್ನೇ ಕಳೆದುಕೊಂಡ. ಈಗ ಆತ ಹೊಲಗದ್ದೆಗಳಲ್ಲಿ ದಿನಗೂಲಿಯ ಕೆಲಸ ಮಾಡಲೇಬೇಕಾಗಿದೆ, ಮನೆ ನಡೆಸಲೇಬೇಕಲ್ಲವೇ? ಆತ ಉಳಿತಾಯ ಮಾಡಿಟ್ಟಿದ್ದ ಎಲ್ಲ ಹಣವೂ ಈಗಾಗಲೇ ವೈದ್ಯರ ತಪಾಸಣೆ ಮತ್ತು ಔಷಧಿಗಾಗಿ ಖರ್ಚಾಗಿಬಿಟ್ಟಿವೆ. ತಮ್ಮ ಮಗನ ಜೀವ ಉಳಿಸಿಕೊಳ್ಳಲು ಆಗಬೇಕಿರುವ ಚಿಕಿತ್ಸೆಗೆ ಖರ್ಚು ಮಾಡಲು ಅವರ ಬಳಿ ಈಗ ಯಾವ ಹಣವೂ ಇಲ್ಲ.
(ಧನಸಹಾಯ ಮಾಡಿ)
“ನಮಗೆ ಒಂದು ಮಗು ಬೇಕೆಂದು ನಾವು ಹಾತೊರೆಯುತ್ತಿದ್ದೆವು ಮತ್ತು ನಮ್ಮ ಮಕ್ಕಳನ್ನು ಚೆನ್ನಾಗಿಡುವಂತೆ ದೇವರಲ್ಲಿ ಸದಾ ಪ್ರಾರ್ಥಿಸುತ್ತಿದ್ದೆವು. ನನ್ನ ಮಗನನ್ನು ನಾನು ಎತ್ತಿಕೊಂಡ ಕ್ಷಣ ನನಗನಿಸಿತು, ಜಗತ್ತಿನಲ್ಲಿ ಈಗ ನನಗೆ ಇವನಿಗಿಂತ ಮುಖ್ಯವಾದದ್ದು ಬೇರೇನೂ ಇಲ್ಲ, ಇವನಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದು. ಅವನಿಗಾಗಿ ಹಾಡುತ್ತಾ ಅವನೊಂದಿಗೆ ಹಗಲಿರುಳು ಕಳೆದಿದ್ದೇನೆ, ಆದರೆ ಎಲ್ಲಿಯವರೆಗೆ? ಅದೊಂದು ದಿನ ಇದ್ದಕ್ಕಿದ್ದಂತೆ ನನಗೆ ಆ ಕೆಟ್ಟ ಸುದ್ದಿ ಗೊತ್ತಾಯಿತು. ಈಗ ನಾವು ಕಳೆಯುತ್ತಿರುವ ಪ್ರತಿ ಕ್ಷಣವೂ ನರಕ”. ಎನ್ನುತ್ತಾ ಕಣ್ಣು ತುಂಬಿಕೊಳ್ಳುತ್ತಾರೆ ಮಧುಮಿತಾ.
ಮಗನ ಪಕ್ಕದಲ್ಲೇ ನಿಂತು ಅವನು ಒದ್ದಾಡುತ್ತಿರುವುದನ್ನು ನೋಡಿದರೆ ಅವರ ಕರಳು ಕಿತ್ತು ಬರುತ್ತದೆ. ಚಿಕಿತ್ಸೆಯ ಹಣವನ್ನು ಹೊಂದಿಸಲು ತಮ್ಮ ಬಳಿಯಿದ್ದ ಬೆಲೆಬಾಳುವಂತಹ ಎಲ್ಲ ವಸ್ತುಗಳನ್ನೂ ಮಾರಿ, ಬಂಧುಗಳಿಂದ ಸಾಲ ಪಡೆದು, ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಈಗ, ಅವರು ನಿಮ್ಮ ಬಳಿ ಸಹಾಯ ಯಾಚಿಸುತ್ತಿದ್ದಾರೆ. ನಿಮ್ಮ ಉದಾರ ದಾನದಿಂದ, ಅವನ ಮಗನ ಶಸ್ತ್ರಚಿಕಿತ್ಸೆಯಾಗಬಲ್ಲದು, ಅವನು ಮತ್ತೆ ತನ್ನ ತಂದೆ ತಾಯಿಯರ ಜೊತೆ ಸಂತೋಷವಾಗಿ ಜೀವಿಸಬಲ್ಲ. ದಯವಿಟ್ಟು ನಿಮ್ಮ ಕೈಲಾದಷ್ಟು
ಸಹಾಯ ಮಾಡಿ, ಏಕೆಂದರೆ ಪ್ರತಿಯೊಬ್ಬರ ಕೊಡುಗೆಯೂ ಅವನಿಗೆ ಜೀವನದಲ್ಲಿ ಇನ್ನೊಂದು ಅವಕಾಶವನ್ನು ನೀಡಲು ದೊಡ್ಡ ಸಹಾಯವಾಗುವುದು.