Advertisement
ಉಡುಪಿ: ಸರಕಾರಿ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈಗಾಗಲೇ ಕರಾಟೆ ತರಬೇತಿ ಆರಂಭಿಸಿರುವ ಸರಕಾರ, 2022-23ನೇ ಸಾಲಿನಿಂದ ಮೆಟ್ರಿಕ್ ಅನಂತರ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಇರುವ ಬಾಲಕ ಹಾಗೂ ಬಾಲಕಿಯರಿಗೆ ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದೆ.
ಮುಂದಿನ ಜೂನ್‌ನಿಂದಲೇ ಆರಂಭಿಸಿ 2023ರ ಮಾರ್ಚ್ ವರೆಗೆ ಪ್ರತೀ ತಿಂಗಳು ತಲಾ ಒಂದು ಗಂಟೆಯ 15 ತರಗತಿ ನಡೆಸಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಕಲಿಸಲಾಗುವುದು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹಾಸ್ಟೆಲ್‌ನಲ್ಲಿ ಹೆಚ್ಚಿರುವುದರಿಂದ ಅವರ ಸಂವಹನ ಕೌಶಲ ಹೆಚ್ಚಿಸುವುದು ಇದರ ಉದ್ದೇಶ.
Related Articles
ಹಾಸ್ಟೆಲ್ ವ್ಯಾಪ್ತಿಯ ಸರಕಾರಿ ಪ. ಪೂರ್ವ ಕಾಲೇಜುಗಳ ಇಂಗ್ಲಿಷ್ ಉಪ ನ್ಯಾಸಕರು ತರಬೇತಿ ನೀಡಲಿದ್ದಾರೆ. ಅವರ ಕೊರತೆ ಇದ್ದಲ್ಲಿ ಅನುದಾನಿತ ಅಥವಾ ಅನು ದಾನ ರಹಿತ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತದೆ. ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಉಪನ್ಯಾಸಕಿ ಯರು ಅಥವಾಮಹಿಳಾ ತರಬೇತುದಾರರು ಕಲಿಸಿಕೊಡಲಿದ್ದಾರೆ. ಉಪನ್ಯಾಸಕರಿಗೆ ತಿಂಗಳಿಗೆ ಗರಿಷ್ಠ 3,000 ರೂ. ಗೌರವಧನ ನೀಡಲಾಗುತ್ತದೆ.
Advertisement
ಫಲಾನುಭವಿಗಳುಉಡುಪಿ ಜಿಲ್ಲೆಯಲ್ಲಿರುವ ಮೆಟ್ರಿಕ್ ಅನಂತರ 9 ಬಾಲಕರ ಹಾಸ್ಟೆಲ್‌ಗಳಲ್ಲಿ 1,025 ಹಾಗೂ 14 ಬಾಲಕಿಯರ ಹಾಸ್ಟೆಲ್‌ಗಳಲ್ಲಿ 1,730 ಸೇರಿದಂತೆ 23 ಹಾಸ್ಟೆಲ್‌ಗಳಲ್ಲಿ 2,755 ವಿದ್ಯಾರ್ಥಿಗಳ ಮಿತಿಯಿದೆ. ದ.ಕ. ಜಿಲ್ಲೆಯ 17 ಬಾಲಕರ ಹಾಸ್ಟೆಲ್‌ಗಳಲ್ಲಿ 1,750 ಹಾಗೂ 32 ಬಾಲಕಿಯರ ಹಾಸ್ಟೆಲ್‌ಗಳಲ್ಲಿ 3,455 ಸೇರಿದಂತೆ 49 ಹಾಸ್ಟೆಲ್‌ಗಳಲ್ಲಿ 5,205 ವಿದ್ಯಾರ್ಥಿಗಳ ದಾಖಲಾತಿ ಮಿತಿ ನೀಡಲಾಗಿದೆ. ಜತೆಗೆ ಎರಡು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ. ಸ್ಫೂರ್ತಿಯ ನಡೆ ಯೋಜನೆಯಡಿ ಬಿಸಿಎಂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ 5 ಕೋ.ರೂ. ವೆಚ್ಚದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ನಿರ್ಧರಿಸಿದ್ದು, ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ಜೂನ್‌ನಲ್ಲಿ ಪ್ರಕ್ರಿಯೆ ಜಾರಿಯಾ ಗಲಿದೆ.
– ಕೋಟ ಶ್ರೀನಿವಾಸ ಪೂಜಾರಿ,
ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ -ರಾಜು ಖಾರ್ವಿ ಕೊಡೇರಿ