Advertisement

ಒಡೆದ ಮನೆಯಾದ ರೈತ ಹಿತರಕ್ಷಣಾ ಸಮಿತಿ!

04:46 AM Jun 19, 2020 | Lakshmi GovindaRaj |

ಮಂಡ್ಯ: ಸಕ್ಕರೆ ಕಂಪನಿ ಆರಂಭದ ವಿಚಾರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿ ರುವ ಹೋರಾಟ ಕವಲುದಾರಿ ಹಿಡಿದಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ (ಒ ಅಂಡ್‌ ಎಂ)ಯನ್ನು ಖಾಸಗಿಯವರಿಗೆ ನೀಡುವ ಕೂಗಿಗೆ  ಹೆಚ್ಚಿನ ಬಲ ಬಂದಿದೆ. ಸಂಸದೆ ಸುಮಲತಾ ನಿಲುವಿಗೆ ರೈತ ಹಿತರಕ್ಷಣಾ ಸಮಿತಿ ಹಿರಿಯ ನಾಯಕರಾದ ಎಚ್‌.ಡಿ.ಚೌಡ ಯ್ಯ ಹಾಗೂ ಆತ್ಮಾನಂದ ಅವರು ಸಾಥ್‌ ನೀಡಿದ್ದು, ಇದರೊಂದಿಗೆ ಸಮಿತಿ ಇದೀಗ ಒಡೆದ ಮನೆಯಂತಾಗಿದೆ.

Advertisement

ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರನ್ನು ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಯಬೇಕು ಎಂಬ ಆಗ್ರಹ ದೊಂದಿಗೆ ನಡೆಸುತ್ತಿದ್ದ ಹೋರಾಟ ಈಗ ಬಲ ಕಳೆದುಕೊಂಡಂತಾಗಿದೆ. ಅನಾರೋಗ್ಯದ ಕಾರ  ಣದಿಂದ ತಮ್ಮ ನಿಲುವನ್ನು ಸ್ಪಷ್ಟಪಡಿಸದಿದ್ದ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಹಾಗೂ ಮಾಜಿ ಶಾಸಕರಾದ ಎಚ್‌.ಡಿ.ಚೌಡಯ್ಯ, ಜಿ.ಬಿ.ಶಿವಕುಮಾರ್‌ ಅವರು ಹಲವು ಸಂಘಟ ನೆಗಳ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವು ದರಿಂದ ಹಿತರಕ್ಷಣಾ ಸಮಿತಿ ಹೋರಾಟ ಮಹತ್ವ ಕಳೆದುಕೊಂಡಿದೆ.

ಡೀಸಿ ಕಚೇರಿ ಬಳಿ ಧರಣಿ: ಮೈಷುಗರ್‌ ಕಬ್ಬು ಒಪ್ಪಿಗೆದಾರರ ಸಂಘ, ಜಯಕರ್ನಾಟಕ ಸಂಘಟ ನೆ, ಜಿಲ್ಲಾ ಹಾಲು  ಉತ್ಪಾದಕರ ಹೋರಾಟ ಸಮಿತಿ, ರೈತ ಸಂಘ, ಜನಸ್ಪಂದನ ಟ್ರಸ್ಟ್‌, ಕದಂಬ ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘ ದವರು ಗುರುವಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿ ಒ ಅಂಡ್‌ ಎಂ ಮುಖಾಂತರ  ಕಾರ್ಖಾನೆ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟ ನೆಗೆ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ಮಾಜಿ ಶಾಸಕರಾದ ಎಚ್‌.ಡಿ.ಚೌಡಯ್ಯ, ಜಿ.ಬಿ.ಶಿವಕುಮಾರ್‌ ಖುದ್ದು ಹಾಜರಾಗಿ ಬೆಂಬಲ  ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಡೀಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ದರು. ಅಲ್ಲಿಗೆ ಸಂಸದೆ ಸುಮಲತಾ ಅಂಬರೀಶ್‌ ಕೂಡ ಆಗಮಿಸಿ  ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿದರು.

ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಿ: ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಅವಧಿಗೆ ಪೂರಕವಾಗಿ ನುರಿಸಲು ಕಾರ್ಖಾನೆಯನ್ನು ಒ ಅಂಡ್‌ ಎಂ ಸೂತ್ರದಡಿ ಆರಂಭಿಸಲು ಕ್ರಮ ವಹಿಸಬೇಕು. ಕಬ್ಬು ಕಟಾವು ಮಾಡಲು ಗ್ಯಾಂಗ್‌ಮನ್‌ಗಳನ್ನು ತಂದು ಕಬ್ಬು ಕಟಾವಿಗೆ ಕ್ರಮ ವಹಿಸುವುದು. ಮೈಷುಗರ್‌ ಅಭಿವೃದ್ಧಿಗೆ 2003ರಿಂದ 2019ರವರೆಗೆ ನೀಡಿರುವ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸುವುದು. ಶೋಧನಾ ಸಮಿತಿ ರಚಿಸಬೇಕು.  ಪ್ರತಿಭಟನಾಕಾರರು  ಮೈಷುಗರ್‌ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಎಸ್‌.ಕೃಷ್ಣ, ಯೋಗಣ್ಣ, ಎಸ್‌.ಸಿ.ಮಧುಚಂದನ್‌, ಬೇಕ್ರಿ ರಮೇಶ್‌, ಕಾಂಗ್ರೆಸ್‌ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್‌, ನಾಗರತ್ನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next