ನವ ದೆಹಲಿ : ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದೇಶ್ವರಿ ಅವರ ‘ಉಗುಳು’ ಹೇಳಿಕೆಯನ್ನು ಖಂಡಿಸಿದ್ದಾರೆ. ಬಿಜೆಪಿಗೆ ಸೇರಿದ ಮೇಲೆ ಅವರ ಮಾನಸಿಕ ಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದು ಗೊತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ದಗ್ಗುಬಾಟಿ ಪುರಂದೇಶ್ವರಿ ನಿನ್ನೆ (ಗುರುವಾರ, ಸಪ್ಟೆಂಬರ್ 2), ತನ್ನ ಪಕ್ಷ ತಿರುಗಿ ಉಗುಳಿದರೇ, ಭೂಪೇಶ್ ಬಾಘೆಲ್ ಅವರ ಸಚಿವ ಸಂಪುಟ ಉದುರಿ ಹೋಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬಾಘೆಲ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಕಾಶ್ಮೀರದಲ್ಲಿರುವ ಮುಸ್ಲಿಮರ ಪರ ಧ್ವನಿ ಎತ್ತುವ ಎಲ್ಲಾ ಹಕ್ಕು ನಮಗಿದೆ: ತಾಲಿಬಾನ್
ನಿನ್ನೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಬಸ್ತಾರ್ ನಲ್ಲಿ ಮಾತನಾಡಿದ್ದ ಪುರಂದೇಶ್ವರಿ, ನಿಮ್ಮ ನಿರಂತರ ಪಕ್ಷ ಸಂಗಟನೆಯ ಕಾರಣದಿಂದ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸ ಇದೆ. ಪಕ್ಷದ ಕಾರ್ಯಕರ್ತರಾದ ನೀವೆಲ್ಲರೂ ಒಂದು ಪ್ರತಿಜ್ಞೆ ಮಾಡಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನೀವು ಕಾರ್ಯಕರ್ತರೆಲ್ಲಾ ತಿರುಗಿ ಬಿದ್ದು ಒಮ್ಮೆ ಉಗುಳಿದರೇ, ಭೂಪೇಶ್ ಬಾಘೆಲ್ ಸಚಿವ ಸಂಪುಟ ಉದುರಿ ಹೋಗುತ್ತದೆ ಎಂದು ಹೇಳಿದ್ದರು.
ಪುರಂದೇಶ್ವರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭೂಪೇಶ್, ಯಾರೇ ಆಗಲಿ, ಆಕಾಶಕ್ಕೆ ಉಗುಳಿದರೇ, ಅವರ ಮುಖಕ್ಕೆ ವಾಪಾಸ್ ಬಂದು ಬೀಳುತ್ತದೆ. ಅಂತಹ ತಲೆಬುಡವಿಲ್ಲದ ಹೇಳಿಕೆಗೆ ನಾನು ಏನೆಂದು ಪ್ರತಿಕ್ರಿಯಿಸಲಿ..? ಬಿಜೆಪಿ ಗೆ ಸೇರಿದ ಮೇಲೆ ಪುರಂದೇಶ್ವರಿ ಅವರ ಮಾನಸಿಕ ಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಊಹಿಸಿರಲಿಲ್ಲ. ನಮ್ಮೊಂದಿಗೆ (ಕಾಂಗ್ರೆಸ್ ) ಇದ್ದಾಗ ಅವರು ಸರಿಯಾಗಿಯೇ ಇದ್ದಿದ್ದರು. ಬಿಜೆಪಿಗೆ ಸೇರಿದ ಮೇಲೆ ಯಾಕೆ ಹೀಗೆ ಎನ್ನುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ರೋಹಿಣಿ ಸಿಂಧೂರಿ ವಿರುದ್ದ ಮತ್ತೊಂದು ಭ್ರಷ್ಟಾಚಾರ ಆರೋಪ ಮಾಡಿದ ಸಾ.ರಾ.ಮಹೇಶ್