Advertisement

ಭಾವೈಕ್ಯತೆ; ಗಣಪನಿಗೆ ಮುಸ್ಲಿಮರಿಂದ ವಿಶೇಷ ಪೂಜೆ: ಪ್ರಸಾದ ವಿತರಣೆ

09:21 PM Sep 05, 2022 | Team Udayavani |

ಕುಣಿಗಲ್ : ಪಟ್ಟಣದ ಕೋಟೆ ಪ್ರದೇಶದ ದೊಡ್ಡಗರಡಿ ವಿನಾಯಕ ಬಳಗದವರು ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯ ಪೂಜೆಯಲ್ಲಿ ಸೋಮವಾರ ಮುಸ್ಲಿಂ ಭಾಂದವರು ಭಾಗವಹಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

Advertisement

ವಿನಾಯಕ ಬಳಗದವರು ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, , ಗಣಪತಿ ಮೂರ್ತಿ ಪೂಜೆಯನ್ನು ನಿತ್ಯ ಒಬ್ಬರು ವಹಿಸಿಕೊಂಡು ಪೂಜೆ ಹಾಗೂ ಪ್ರಸಾದ ಮಾಡಿಸುತ್ತಿದ್ದರು, ಆದರೆ ಸೋಮವಾರ ಕೋಟೆ ಪ್ರದೇಶದ ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಅಮೀದ್, ಮುಖಂಡ ತಾಲೀಪ್‌ಪಾಷ ಸೇರಿದಂತೆ ಹಲವು ಮುಸ್ಲಿಂ ಭಾಂದವರು ತಮ್ಮ ಸ್ವಂತ ಖರ್ಚಿನಿಂದ ಗಣಪತಿ ಮೂರ್ತಿಗೆ ಪೂಜೆ ಇಟ್ಟುಕೊಂಡು, ಪೂಜೆ ನೆರವೇರಿಸಿದರು, ಬಳಿಕ ಪ್ರಸಾದ ವಿತರಣೆ ಮಾಡಿದ್ದಾರೆ. ಹಿಂದು, ಮುಸ್ಲಿಮರ ಸೌಹಾರ್ಧತೆಗೆ ಕುಣಿಗಲ್ ಸಾಕ್ಷಿಯಾಗಿದೆ.

ಪುರಸಭಾ ಸದಸ್ಯ ಕೋಟೆ ನಾಗಣ್ಣ ಮಾತನಾಡಿ ಕುಣಿಗಲ್ ಇತಿಹಾಸದಲ್ಲೇ ಮುಸ್ಲಿಂ ಭಾಂದವರು ಗಣಪತಿಗೆ ಪೂಜಾ ಕಾರ್ಯವನ್ನು ಇಟ್ಟುಕೊಂಡು ಪೂಜೆ ಸಲ್ಲಿಸಿರುವುದು ಹಾಗೂ ಪ್ರಸಾದವನ್ನು ವಿತರಣೆ ಮಾಡಿರುವುದು ಇದು ಮೊದಲನೆಯದಾಗಿದೆ ಅಲ್ಲದೆ ಹಿಂದೂ, ಮುಸ್ಲಿಮರ ರಾಷ್ಟ್ರೀಯ ಭಾವೈಕ್ಯತೆಗೆ ಕಾರಣವಾಗಿದೆ, ಬಹು ವರ್ಷಗಳಿಂದಲ್ಲೂ ಈ ಭಾಗದಲ್ಲಿ ಹಿಂದೂ ಮುಸ್ಲಿಂಮರು ಸಹೋದರರಂತೆ ಒಟ್ಟಾಗಿ ಬದುಕುತ್ತಿದ್ದೇವೆ, ಮುಸ್ಲಿಂ ಭಾಂದವರು ಮಾಡುವ ಧಾರ್ಮಿಕ ಕಾರ್ಯದಲ್ಲಿ ಹಿಂದೂಗಳು ಭಾಗವಹಿಸುತ್ತಿದ್ದೇವೆ, ಹಿಂದೂಗಳು ಮಾಡುವ ಧಾರ್ಮಿಕ ಕಾರ್ಯಗಳಿಗೆ ಮುಸ್ಲಿಂ ಭಾಂದವರು ಭಾಗವಹಿಸಿ ಶ್ರದ್ದಾಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ, ಇದೆ ರೀತಿ ಇಡೀ ಭಾರತದಲ್ಲೇ ನಡೆಯುವಂತಾಗಲಿ ಎಂದರು.

ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಅಮೀದ್ ಮಾತನಾಡಿ, ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಹತ್ತು ಹಲವು ಧರ್ಮದ ಹಾಗೂ ವಿವಿಧ ಸಮುದಾಯದ ಜನರು ಸಾವಿರಾರು ವರ್ಷಗಳಿಂದ ಸೌಹಾರ್ಧವಾಗಿ ಬಧುಕುತ್ತಿದ್ದಾರೆ, ಹಲವು ಧರ್ಮಗಳನ್ನು ಹೊಂದಿರುವ ಭಾರತವು ವಿಶ್ವಕ್ಕೆ ಮಾದರಿಯಾಗಿದೆ, ಮನುಷ್ಯನ್ನು ಹುಟ್ಟುವಾಗ ಯಾವುದೇ ಜಾತಿ, ಧರ್ಮ ವನ್ನು ಕಟ್ಟಿಕೊಂಡು ಬರುವುದಿಲ್ಲ. ಜನನವಾದ ಬಳಿಕ ಜಾತಿ ಹಾಗೂ ಧರ್ಮ ಹುಟ್ಟಿಕೊಳ್ಳುತ್ತದೆ, ಆಯಾ ಧರ್ಮದ ಜನರು ತಮ್ಮದೆಯಾದ ರೀತಿಯಲ್ಲಿ ಭಗವಂತನನ್ನು ಪ್ರಾರ್ಥಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಅದನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ, ಇಂದು ಗಣಪತಿ ಪೂಜೆ ಕಾರ್ಯದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿರುವುದು ನಮ್ಮಗೆ ಖುಷಿ ತಂದಿದೆ ಭಗವಂತ ಎಲ್ಲರಿಗೂ ಒಳ್ಳಯದು ಮಾಡಲಿ ಎಂದರು.

ಈ ವೇಳೆ ಪುರಸಭಾ ಸದಸ್ಯರಾದ ಉದಯ್‌ಕುಮಾರ್, ಗೋಪಿ ಅರಸ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಗರಡಿ ಮನೆಯ ಮುಖ್ಯಸ್ಥ ಪೈಲ್‌ವಾನ್  ಶ್ರೀಕಂಠಯ್ಯ, ಅರ್ಚಕ ಮಹೇಶ್ ಮತ್ತಿತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next