Advertisement

ಭಾರತೀಯರಲ್ಲೇ ಅಧ್ಯಾತ್ಮಿಕ ಶ್ರೀಮಂತಿಕೆ ಅಧಿಕ

06:20 PM Aug 09, 2021 | Team Udayavani |

ಭಾಲ್ಕಿ: ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತಲೂ ಭಾರತೀಯರಲ್ಲಿ ಅಧ್ಯಾತ್ಮಿಕ ಶ್ರೀಮಂತಿಕೆ ಹೆಚ್ಚಿದೆ. ಇಲ್ಲಿಯ ಶರಣು, ಸಂತರು, ಸ್ವಾಮಿಗಳು ಜೀವನದ ಮೌಲ್ಯಗಳನ್ನು ಜನರಿಗೆ ತಿಳಿಹೇಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ನಾವೆಲ್ಲರೂ ಪೂಜ್ಯರ ಪ್ರವಚನ ಕೇಳಿ ಪುನೀತರಾಗಬೇಕು ಎಂದು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಆಯೋಜಿಸುವ ಕುರಿತು ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮನೆಯ ಸ್ವತ್ಛವಾಗಲು ಕಸ ಗುಡಿಸಬೇಕು. ದೇಹ ಸ್ವತ್ಛವಾಗಿಸಿಕೊಳ್ಳಲು ಸ್ನಾನ ಮಾಡಬೇಕು. ಹಾಗೇ ನಮ್ಮ ಅಂತರಂಗ ಶುದ್ಧವಾಗಿಸಿಕೊಳ್ಳಲು ಸಂತರ, ಮಹಾತ್ಮರ ವಾಣಿ ಆಲಿಸುವುದು ಅಗತ್ಯ. ಸಿದ್ದೇಶ್ವರ ಸ್ವಾಮೀಜಿ ಅವರು ನಡೆದಾಡುವ ವಿಶ್ವಕೋಶ ಇದ್ದ ಹಾಗೆ. ಅಂತಹ ಮಹಾತ್ಮರು ಭಾಲ್ಕಿ ಪಟ್ಟಣದಲ್ಲಿ ಪ್ರವಚನ ನಡೆಸಿಕೊಡಲು ಒಪ್ಪಿಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಸೆಪ್ಟಂಬರ್‌ನಲ್ಲಿ ಶ್ರೀಗಳ ಪ್ರವಚನ ನಡೆಯಲಿದ್ದು, ಭಕ್ತರು ನಿಸ್ವಾರ್ಥ ಮನೋಭಾವದಿಂದ ತಮ್ಮ ಜವಾಬ್ದಾರಿ ನಿಭಾಯಿಸಿ ಶ್ರೀಗಳ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅವರು ಅಪ್ಪಟ ಬಸವತತ್ವದ ಅನುಯಾಯಿ, ಆದರ್ಶ ಪುರುಷರಾಗಿದ್ದಾರೆ. ಶ್ರೀಗಳು ಈ ಭಾಗಕ್ಕೆ ಬರುತ್ತಿರುವುದು ಹರ್ಷ ತಂದಿದೆ. ಶ್ರೀಗಳ ಪ್ರವಚನ ಯಶಸ್ವಿಗೆ ತನು, ಮನ, ಧನದಿಂದ ಸಹಕಾರ ನೀಡುವುದಾಗಿ ತಿಳಿಸಿದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಮನುಷ್ಯನ ವ್ಯಕ್ತಿತ್ವ ಸುಧಾರಣೆಗೆ ಅಧ್ಯಾತ್ಮದ ಜ್ಞಾನ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಸಿದ್ದೇಶ್ವರ ಸ್ವಾಮೀಜಿ ಇಲ್ಲಿಗೆ ಬಂದು ಜ್ಞಾನದ ದಾಸೋಹ ನೀಡಲು ಒಪ್ಪಿರುವುದು ನಮ್ಮೆಲ್ಲರ ಭಾಗ್ಯ. ಶೀಘ್ರವೇ ಮತ್ತೂಮ್ಮೆ ನಿಯೋಗ ಕೊಂಡೊಯ್ಯದು ಶ್ರೀಗಳನ್ನು ಭೇಟಿಯಾಗಿ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಯುವ ಮುಖಂಡ ಪ್ರಸನ್ನ ಖಂಡ್ರೆ, ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಪ್ರಕಾಶ ಬಿರಾದಾರ್‌ ಮಾತನಾಡಿದರು. ಈ ಸಂದರ್ಭದಲ್ಲಿ ಬಸವಲಿಂಗ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ರಾಜಶೇಖರ ಅಷ್ಟೂರೆ, ಸೋಮನಾಥಪ್ಪ ಅಷ್ಟೂರೆ, ವಿಶ್ವನಾಥಪ್ಪ ಬಿರಾದಾರ್‌, ಪ್ರಕಾಶ ಡೋಣಗಾಪೂರೆ, ಚನ್ನಬಸವ ಬಳತೆ, ಶಶಿಧರ ಕೋಸಂಬೆ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ್‌, ಸಂಗಮೇಶ ಗುಮ್ಮೆ, ಉಮಾಕಾಂತ ವಾರದ, ಶೇಖರ ವಂಕೆ, ಸಿಕ್ರೇಶ್ವರ ಶೆಟಕಾರ್‌, ಜಯರಾಜ ಪಾತ್ರೆ, ಶಂಭುಲಿಂಗ ಕಾಮಣ್ಣ, ವೈಜಿನಾಥ ಸಿಸರ್ಗಿ, ಸಂಗಮೇಶ ಕಾರಾಮುಂಗೆ, ಅಮರ ಜಲೆª, ಟಿಂಕು ರಾಜಭವನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next