Advertisement
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಜರಗುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಅಂಗವಾಗಿ ಬುಧವಾರ ನಡೆದ ಧರ್ಮ ಸಂಸತ್ತಿನಲ್ಲಿ ಮಾತನಾಡಿ, ವೇದ ಚಿಂತನೆಯ ಸನ್ಮಾರ್ಗದಲ್ಲಿ ಮಾನವನ ಜೀವನ ಕ್ರಮ ಉಪಕ್ರಮಿಸಿದಾಗ ಒಳಿತಿನ ಭವಿಷ್ಯ ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಲೋಕ ಹಿತಕ್ಕಾಗಿ ಕೊಂಡೆವೂರು ಶ್ರೀಕ್ಷೇತ್ರವು ಗಮಿಸುತ್ತಿರುವ ವಿವಿಧ ಆಧ್ಯಾತ್ಮಿಕ ಯಾಗಾದಿ ಚಟುವಟಿಕೆಗಳು ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದರು.
ತೃಶ್ಶೂರಿನ ಪಾಂಬೂಮೇಕಾಡ್ ಶ್ರೀ ನಾಗರಾಜ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಪಾಂಬೂಮೇಕಾಡ್ ಜಾತವೇದನ್ ನಂಬೂದಿರಿ ಪ್ಪಾಡ್ ಮಾತನಾಡಿ ಋಷಿ ಸಮಾನ ಸನ್ಯಾಸಿಗಳಿಗೆ ಮಲೆಯಾಳ ಹಾಗೂ ತುಳು ಭಾಷೆಗಳು ಸಮಾನ ಸಹೋದರರಂತೆ. ಸಾûಾತ್ ಭಾರ್ಗವ ರಾಮರು ಈ ಎರಡೂ ಪ್ರದೇಶಗಳಲ್ಲಿ ಸಂಚರಿಸಿ ಧರ್ಮ ನೆಲೆಗೊಳಿಸಿದವರು ಎಂದು ಇತಿಹಾಸದ ಮೆಲುಕನ್ನು ಹಾಕಿದರು. ವಿವಿಧ ಆಧ್ಯಾತ್ಮಿಕ, ವೈದಿಕ ಕಾರ್ಯಯೋಜನೆಗಳಲ್ಲಿ ತೊಡಗಿಸಿಕೊಂಡು ಲೋಕ ಕಲ್ಯಾಣ ಉಪಕ್ರಮಗಳನ್ನು ಮುನ್ನಡೆಸುತ್ತಿರುವ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ಚಿಂತನೆಗಳು ಹೊಸ ಮನ್ವಂತರ ಸೃಷ್ಟಿಗೆ ಕಾರಣವಾಗಲಿ ಎಂದರು.
Related Articles
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಕೊಡಗು ಜಿಲ್ಲಾ ಹೋಟೇಲ್ ಮತ್ತು ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ ಧರ್ಮಗ್ರಂಥಗಳಿಂದ ಓದಿ ಕೇಳಿದ್ದ ಸನಾತನ ವೈದಿಕ ಪರಂಪರೆಯ ಆಚರಣೆಯನ್ನು ಇಲ್ಲಿ ಕಣ್ಣಾರೆ ಕಾಣುವ ಭಾಗ್ಯ ಲಭಿಸಿರುವುದು ಜನ್ಮಾಂತರ ಪುಣ್ಯವೆಂದರು.
Advertisement
ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರದ ಸಂಸ್ಕೃತಿ ಉತ್ಕೃಷ್ಣವಾಗಿ ಜಗತ್ತಿಗೆ ಬೆಳಕು ನೀಡಿದೆ. ಋಷಿ ಸಂಸ್ಕೃತಿಯ ಮೂಲದಿಂದ ಹುಟ್ಟಿಬಂದ ಇಲ್ಲಿಯ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಯತ್ನಗಳು ಆಗಲೇಬೇಕಿದೆ. ಕೇರಳದ ಉತ್ತರದ ಕೊಂಡೆವೂರು ಪುಣ್ಯಭೂಮಿಯ ಅಭೂತಪೂರ್ವ ಯಾಗದ ಹೊಗೆ ಪ್ರಪಂಚ ವ್ಯಾಪಕ ನೆಮ್ಮದಿ ನೀಡುವುದರ ಜೊತೆಗೆ ಕಳವಳಕಾರಿಯಾಗಿ ಧರ್ಮ ಕ್ಲೇಶಕ್ಕೆ ನಾಂದಿಯಾಗುತ್ತಿರುವ ಕೇರಳದ ಹಿಂಸಾ ವಿದ್ಯಮಾನಗನ್ನು ನಾಶಗೊಳಿಸಲಿ ಎಂದರು.
ಪ್ರೊ| ಎಂ.ಬಿ. ಪುರಾಣಿಕ್, ಕ್ಯಾ| ಗಣೇಶ್ ಕಾರ್ಣಿಕ್, ಸರೋಜಿನಿ ಗೋವರ್ಧನ್, ಕೊರಗಪ್ಪ ಶೆಟ್ಟಿ ಸಣ್ಣಹಿತ್ಲು, ಜಿತೇಂದ್ರ ಕೊಟ್ಟಾರಿ, ಜಗದೀಶ ಶೇಣವ, ನ್ಯಾಯನಾದಿ ಕೆ.ಮೋನಪ್ಪ ಭಂಡಾರಿ, ಡಾ| ಶ್ರೀಧರ ಭಟ್ ಉಪ್ಪಳ, ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ,ಯಾಗ ಸಮಿತಿಯ ಗೌರವ ಕಾರ್ಯದರ್ಶಿ, ಕೊಂಡೆವೂರು ಶ್ರೀ ಆಶ್ರಮದ ವಿಶ್ವಸ್ಥರಾದ ಗೋಪಾಲ ಎಂ. ಬಂದ್ಯೋಡು ಅವರನ್ನು ನಿಸಲಾಯಿತು.
ಕುಮಾರಿಯರಾದ ಭೂಮಿಕಾ, ಹರ್ಷಾ ಹಾಗೂ ಶ್ರಾವ್ಯಾಪ್ರಾರ್ಥನೆ ಹಾಡಿದರು. ಅರವಿಂದಾಕ್ಷ ಭಂಡಾರಿ ಸನ್ಮಾನ ಪತ್ರ ವಾಚಿಸಿದರು. ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು, ಮೀರಾ ಆಳ್ವ ವಂದಿಸಿದರು. ದಿನಕರ್ ಹೊಸಂಗಡಿ ನಿರೂಪಿಸಿದರು. ವಿಶ್ವಶಾಂತಿ ಲಭ್ಯವಾಗಲಿ
ಮಾನವೀಯ ಸಂಬಂಧಗಳನ್ನು ಬೆಸೆಯುವ ಈ ಸೋಮಯಾಗ ದಿಂದ ವಿಶ್ವಶಾಂತಿ ಲಭ್ಯವಾಗಲೆಂದೂ ಧರ್ಮದ ಅಡಿಪಾಯವಾದ ವೇದಗಳನ್ನೂ, ವೈದಿಕ ಸಂಸ್ಕೃತಿಯನ್ನು ನಾವೆಲ್ಲ ಸೇರಿ ರಕ್ಷಿಸುವ ಮೂಲಕ ಬೆಳೆಸೋಣ.
– ಶ್ರೀ ಮೋಹನದಾಸ ಸ್ವಾಮೀಜಿ