Advertisement

ಪಾರ್ಶ್ವವಾಯುಗೆ ಬೆನ್ನುಮೂಳೆ ಟಿಬಿ ಕಾರಣ

12:41 AM Jun 23, 2019 | Lakshmi GovindaRaj |

ಬೆಂಗಳೂರು: ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಕ್ಷಯ (ಟಿಬಿ) ರೋಗಿಗಳು ಭಾರತದಲ್ಲಿದ್ದಾರೆ. ಸುಮಾರು 6 ದಶಲಕ್ಷದಷ್ಟು ಕ್ಷಯ ರೋಗ ಪ್ರಕರಣಗಳು ಇಲ್ಲಿವೆ. ಅದರಲ್ಲಿ ಶೇ. 2 ರಷ್ಟು ಮಂದಿ ಅಸ್ಥಿಪಂಜರ ವ್ಯವಸ್ಥೆಯ ಟಿಬಿಯಿಂದ ಬಳಲುತ್ತಿದ್ದರೆ, ಅರ್ಧಕ್ಕಿಂತ ಹೆಚ್ಚಿನವರು ಬೆನ್ನುಮೂಳೆ ಟಿಬಿಯನ್ನು ಹೊಂದಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್‌ ಸ್ಪೈನ್‌ ಸರ್ಜರಿ ಡಾ.ಅಮೃತ್‌ಲಾಲ್‌ ಎ. ಮಸ್ಕರೇನಸ್‌ ತಿಳಿಸಿದ್ದಾರೆ.

Advertisement

ನಗರದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಯ ಅನಾದಿಕಾಲದ ರೋಗ. ಅತಿಯಾದ ಜನಸಂಖ್ಯೆ, ಅಪೌಷ್ಟಿಕತೆ, ಅಸ್ವತ್ಛತೆ, ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ಎಚ್‌ಐವಿ ಸೋಂಕು ಇನ್ನಿತರ ದುಶ್ಚಟಗಳು ಕಾಯಿಲೆ ಹರಡಲು ಕಾರಣವಾದರೆ, ಮಧುಮೇಹ, ರೋಗ ನಿರೋಧಕ ಚಿಕಿತ್ಸೆ ಮತ್ತು ಅನುವಂಶೀಯ ಅನುಮಾನಗಳು ಕೂಡ ಕಾರಣವಾಗುತ್ತವೆ.

ಬೆನ್ನುಹುರಿಯಲ್ಲಿ ಕಿವು ಕಟ್ಟಿಕೊಂಡು ಬೆನ್ನು ಹುರಿಯ ಮೇಲೆ ಒತ್ತಡ ತರುವ ಈ ಟಿಬಿ ನರಮಂಡಲದೊಂದಿಗೂ ಬೆರೆತಿದೆ. ಬೆನ್ನುಹುರಿಯನ್ನು ಒತ್ತುವ ಮೂಲಕ ನರವೈಜ್ಞಾನಿಕ ಸಮಸ್ಯೆಗಳನ್ನು ತರುತ್ತದೆ. ಇದರಿಂದ ಕಾಲಿನ ಪಾರ್ಶ್ವವಾಯು ಅಥವಾ ದೇಹದ ಕೆಳಭಾಗದ‌ಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ. ಇದನ್ನು “ಪಾಟ್ಸ್‌ ಸ್ಪೈನ್‌’ ಎಂತಲೂ ಕರೆಯುತ್ತಾರೆ.

ಕನ್ಸಲ್ಟೆಂಟ್‌ ಚೆಸ್ಟ್‌ ಫಿಸಿಶಿಯನ್‌ ಡಾ.ವಸುನೇತ್ರ ಕಾಸರಗೋಡು ಅವರು ಮಾತನಾಡಿ, ಬೆನ್ನುಮೂಳೆಯ ಟಿಬಿ ಹೊಂದಿರುವ ರೋಗಿಗಳಿಗೆ ಆದಷ್ಟೂ ಶೀಘ್ರ ಟಿಬಿ ನಿರೋಧಕ ಚಿಕಿತ್ಸೆ ಆರಂಭಿಸುವುದು ಒಳ್ಳೆಯದು. ಕಾಯಿಲೆ ಗಂಭೀರ ಸ್ವರೂಪಕ್ಕೆ ತಿರುಗಿದಾಗ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. ಒಟ್ಟಾರೆ ಚಿಕಿತ್ಸೆ ರೋಗದ ಗಂಭೀರತೆ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿಸಿದರು.

ವಿಕ್ರಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.ಸೋಮೇಶ್‌ ಮಿತ್ತಲ್‌ ಅವರು ಮಾತನಾಡಿ, ಟಿಬಿ ಕಾಯಿಲೆ ಇಡೀ ಸಮಾಜಕ್ಕೆ ಒಂದು ರೀತಿಯಲ್ಲಿ ಸಂಕಷ್ಟದ ಸನ್ನಿವೇಶ ತಂದೊಡ್ಡುತ್ತದೆ. ಅದರಲ್ಲೂ ಬೆನ್ನುಮೂಳೆ ಟಿಬಿ ಅತ್ಯಂತ ನೋವುಕಾರಕ ಹಾಗೂ ರೋಗಿಯನ್ನು ಚಲನೆ ಇಲ್ಲದಂತೆ ಮಾಡುತ್ತದೆ ಎಂದರು.

Advertisement

ರೋಗ ಲಕ್ಷಣಗಳು: ಅಸ್ವಸ್ಥತೆ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು, ರಾತ್ರಿ ವೇಳೆ ಬೆವರುವುದು, ಸಂಜೆ ವೇಳೆ ದೇಹ ಬಿಸಿಯಾಗುವುದು, ಚಲನೆ ವೇಳೆ ಬೆನ್ನುಮೂಳೆ ಕಠಿಣತೆ, ನೋವು, ನಿರಂತರ ಸ್ನಾಯುಸೆಳೆತ, ಉರಿ ಮುಂತಾದವು.

Advertisement

Udayavani is now on Telegram. Click here to join our channel and stay updated with the latest news.

Next