Advertisement

ಭಾರತದಲ್ಲಿ ಮತ್ತೆ ಸ್ಪಿನ್‌ ಪಿಚ್‌: ಬಿಸಿಸಿಐ ನಿರ್ಧಾರ

06:45 AM Nov 12, 2018 | Team Udayavani |

ಹೊಸದಿಲ್ಲಿ: ಸ್ಪಿನ್‌ಗೆ ಅತ್ಯುತ್ತಮವಾಗಿ ಆಡುವ ತಂಡವೆಂದರೆ ಭಾರತ ಎಂಬ ಹೆಗ್ಗಳಿಕೆಯಿತ್ತು. ಆದರೆ ಕಳೆದ ಐದಾರು ವರ್ಷಗಳಲ್ಲಿ ಭಾರತೀಯರು ವಿದೇಶಿ ಸ್ಪಿನ್‌ ಬೌಲರ್‌ಗಳೆದುರು ತಡವರಿಸುತ್ತಿದ್ದಾರೆ. ವಿದೇಶಿ ವೇಗಿಗಳನ್ನೆದುರಿಸಲು ಭಾರತದಲ್ಲಿ ವೇಗದ ಪಿಚ್‌ಗಳನ್ನು ತಯಾರಿಸಿದ್ದೇ ಇದಕ್ಕೆ ಕಾರಣ.

Advertisement

ಭಾರತೀಯ ಬ್ಯಾಟ್ಸ್‌ಮನ್‌ಗಳ ಇಂತಹ ಸ್ಥಿತಿಗೆ ಬಿಸಿಸಿಐ ನೇರ ಕಾರಣ. ಕಳೆದ ಏಳೆಂಟು ವರ್ಷಗಳಿಂದ ವೇಗಕ್ಕೆ ಪೂರಕವಾಗಿ ಅಂಕಣಗಳನ್ನು ಬಿಸಿಸಿಐ ತಯಾರಿಸಿದೆ. ಆದ್ದರಿಂದ ಹೊಸ ತಲೆಮಾರಿನ ಆಟಗಾರರು ಸ್ಪಿನ್‌ಗೆ ಆಡಲು ಒದ್ದಾಡುತ್ತಿದ್ದಾರೆ. ಇದರ ಪರಿಣಾಮ ಆಸ್ಟ್ರೇಲಿಯ, ಇಂಗ್ಲೆಂಡ್‌, ಆಫ್ರಿಕಾ ಸ್ಪಿನ್ನರ್‌ಗಳು ಭಾರತದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದನ್ನು ಗಮನಿಸಬಹುದು.

ಪರಿಸ್ಥಿತಿಯನ್ನು ಮನಗಂಡಿರುವ ಬಿಸಿಸಿಐ, ಭಾರತದ ದೇಶಿ ಪಂದ್ಯಗಳಲ್ಲಿ ಗರಿಷ್ಠ ತಿರುವು ಪಡೆಯುವ ಅಂಕಣ ತಯಾರಿಸಲು ಕ್ಯುರೇಟರ್‌ಗಳಿಗೆ ಸೂಚನೆ ನೀಡಿದೆ. ಹುಲ್ಲಿನಿಂದ ಕೂಡಿರುವ, ವೇಗಿಗಳಿಗೆ ನೆರವು ನೀಡುವ ಅಂಕಣಗಳಿಗೆ ಕಡಿವಾಣ ಹಾಕಲು ಅದು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next