ಹೈದರಾಬಾದ್ : ಗೋವಾದಿಂದ ಹೈದರಾಬಾದ್ ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಗೋವಾದಿಂದ ಹೈದರಾಬಾದ್ ಗೆ ಬುಧವಾರ ರಾತ್ರಿ ಹೊರಟ SG 3735 ಸ್ಪೈಸ್ ಜೆಟ್ ವಿಮಾನದ ಕಾಕ್ ಪಿಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕೂಡಲೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿ ಉಂಟಾದ ತಾಂತ್ರಿಕ ಅವಘಡದ ಬಗ್ಗೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಒಟ್ಟು 86 ಪ್ರಯಾಣಿಕರಿದ್ದು ಎಲ್ಲಾ ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ವಿಮಾನ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಕೆಲವು ವಿಮಾನಗಳು ಬೇರೆ ರನ್ ವೇ ಮೂಲಕ ಸಂಚರಿಸಿತು ಎಂದು ಅಧಿಕಾರಿಗಳು ತಳಿಸಿದ್ದಾರೆ.
ಇದನ್ನೂ ಓದಿ : ಕಬ್ಬಿಣದ ಕಡಲೆಯಾದ ಕಬ್ಬು ಬೆಳೆ ; ಕಬ್ಬು ದರ ಹೆಚ್ಚಿಸುವ ಬದಲು ಇಳಿಕೆ