Advertisement

ಸ್ಪೈಸ್‌ಜೆಟ್ 2ನೇ ಅವಘಡ: ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

10:45 PM Jul 05, 2022 | Team Udayavani |

ನವದೆಹಲಿ: ಸ್ಪೈಸ್‌ಜೆಟ್‌ ಏರ್‌ಲೈನ್‌ನಲ್ಲಿ ಮಂಗಳವಾರ ಎರಡೆರೆಡು ಸಮಸ್ಯೆಗಳು ಕಾಣಿಸಿಕೊಂಡಿದೆ.

Advertisement

ಗುಜರಾತ್‌ನ ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ವಿಮಾನವು, ಆಗಸದಲ್ಲಿದ್ದಾಗ ಇದ್ದಕ್ಕಿದ್ದಂತೆ ಅದರ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಬಿಟ್ಟಿದೆ.

ವಿಮಾನವು ಸುಮಾರು 23,000 ಅಡಿ ಎತ್ತರ ದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆ ದಿದೆ. ತಕ್ಷಣವೇ ವಿಮಾನದ ಸಿಬ್ಬಂದಿ ಎಚ್ಚೆತ್ತು ಕೊಂಡು, ಅಗತ್ಯ ಪರೀಕ್ಷೆಗಳನ್ನು ಮಾಡಿದ್ದಾರೆ. ವಿಮಾನವನ್ನು ಮುಂಬೈನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ ಎಂದು ಸ್ಪೈಸ್‌ಜೆಟ್‌ ಸಂಸ್ಥೆ ತಿಳಿಸಿದೆ.

ಈ ಘಟನೆಗೂ ಮೊದಲು ನವದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ ಜೆಟ್‌ನ ವಿಮಾನ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿದಿದೆ. ಇಂಧನ ಪೂರೈಕೆ ಮಾಡುವ ಟ್ಯಾಂಕ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಈ ಬೆಳವಣಿಗೆ ಉಂಟಾಗಿದೆ.

ವಿಮಾನದಲ್ಲಿದ್ದ 100 ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯ(ಡಿಜಿಸಿಐ) ತನಿಖೆ ಕೈಗೆತ್ತುಕೊಂಡಿದೆ.

Advertisement

ಈ ಎರಡು ಪ್ರಕರಣಗಳು ಮೂಲಕ 17 ದಿನಗಳ ಅವಧಿಯಲ್ಲಿ ಸ್ಪೈಸ್‌ ಜೆಟ್‌ನ 7ನೇ ವಿಮಾನಕ್ಕೆ ತಾಂತ್ರಿಕ ತೊಂದರೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next