Advertisement
ಜೆಟ್ ಏರ್‌ವೇಸ್ ಬೋಯಿಂ ಗ್ ಬಿ 737 ವಿಮಾನಕ್ಕೆ ಸ್ಪೈಸ್ ಜೆಟ್‌ನ ವಿಶಿಷ್ಟ ಕೆಂಪು ಗುರುತಿನ ಲೋಗೋವನ್ನು ಅಳವಡಿಸಲಾಗುತ್ತಿದೆ. ಜತೆಗೆ ಜೆಟ್ ಏರ್‌ವೇಸ್ ಹಳದಿ ಮತ್ತು ನೀಲಿ ಪಟ್ಟಿಯೂ ಇದರ ಜತೆಗೆ ಇರಲಿದೆ ಎಂದು ವರದಿಯಾಗಿದೆ. ಈಗಾಗಲೇ ಹಾರಾಟ ನಿಲ್ಲಿಸಿರುವ ಜೆಟ್ ಏರ್‌ವೇಸ್ ವಿಮಾನಗಳನ್ನು ಸ್ಪೈಸ್ ಜೆಟ್ ತನ್ನ ಸಂಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ವಿಮಾನ ಹಾರಾಟದ ಸ್ಥಗಿತದಿಂದ ಜೆಟ್ ಏರ್‌ವೇಸ್ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈಗಾಗಲೇ 100ಕ್ಕೂ ಅಧಿಕ ಪೈಲಟ್‌ಗಳನ್ನು, 200ಕ್ಕೂ ಹೆಚ್ಚು ಕ್ಯಾಬಿನ್ ಸಿಬಂದಿ, 200 ತಾಂತ್ರಿಕ ಸಿಬಂದಿಗೆ ನೌಕರಿ ನೀಡಲಾಗುವುದು ಎಂದು ಸ್ಪೈಸ್ ಜೆಟ್ ಸಂಸ್ಥೆ ಮಾಹಿತಿ ನೀಡಿದೆ ಒಟ್ಟು 1300 ಪೈಲಟ್‌ಗಳಿದ್ದು ಈಗಾಗಲೇ 400ಕ್ಕೂ ಹೆಚ್ಚು ಪೈಲಟ್‌ಗಳಿಗೆ ಬೇರೆ ಸಂಸ್ಥೆಗಳಲ್ಲಿ ಆಶ್ರಯ ದೊರೆತಿದೆ. ಹಲವಾರು ಎಂಜನಿಯರ್‌ಗಳು, ಇತರ ಸಿಬಂದಿ ಈಗಾಗಲೇ ಕಂಪನಿಗೆ ಗುಡ್ ಬೈ ಹೇಳಿದ್ದಾರೆ.