Advertisement

ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ : ಸುರಕ್ಷಿತವಾಗಿ ಲ್ಯಾಂಡ್‌ ಆದ ಸ್ಪೈಸ್‌ಜೆಟ್‌

11:02 PM May 09, 2022 | Team Udayavani |

ನವದೆಹಲಿ: ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಯಾವುದೇ ಸಮಸ್ಯೆಯಿಲ್ಲದೇ ವಿಮಾನವು ಸುರಕ್ಷಿತವಾಗಿ ದೆಹಲಿಯ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆಗಿದೆ.

Advertisement

ಬೋಯಿಂಗ್‌ 737-8 ಮ್ಯಾಕ್ಸ್‌ ವಿಮಾನದಲ್ಲಿ 187 ಪ್ರಯಾಣಿಕರಿದ್ದರು. ಬೆಳಗಾವಿಯ ಏರ್‌ಪೋರ್ಟ್‌ನಿಂದ ಟೇಕ್‌ ಆಫ್ ಆದ ಬಳಿಕ ಪಕ್ಷಿಯೊಂದು ಡಿಕ್ಕಿ ಹೊಡೆದ ಕಾರಣ, ಎಂಜಿನ್‌ನ ಬ್ಲೇಡ್‌ಗೆ ಹಾನಿಯಾಗಿದೆ.

ಆದರೂ, ಅದೃಷ್ಟವಶಾತ್‌ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಉಕ್ರೇನ್‌ನಿಂದ ಬರಲಿದೆ ವಂದೇ ಭಾರತ್‌ ರೈಲಿನ ಚಕ್ರಗಳು : 36,000 ಗಾಲಿಗಳ ಖರೀದಿಗೆ ಒಪ್ಪಂದ

Advertisement

Udayavani is now on Telegram. Click here to join our channel and stay updated with the latest news.

Next