ನೆದರ್ಲ್ಯಾಂಡ್ಸ್: ವೀರ್ಯ ದಾನದ ಮೂಲಕ 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆ ಎಂದು ಶಂಕಿಸಲಾಗಿರುವ ವ್ಯಕ್ತಿಗೆ ಇನ್ಮುಂದೆ ವೀರ್ಯ ದಾನ ಮಾಡದಂತೆ ನೆದರ್ಲ್ಯಾಂಡ್ಸ್ ಕೋರ್ಟ್ ನಿರ್ಬಂಧ ಹೇರಿರುವ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ:UP;ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು
41ವರ್ಷದ ಜೋನಾಥನ್ ಜಾಕೋಬ್ ಮೈಜರ್ ಒಂದು ವೇಳೆ ಕೋರ್ಟ್ ಆದೇಶ ಉಲ್ಲಂಘಿಸಿ ವೀರ್ಯದಾನ ಮಾಡಿದಲ್ಲಿ 1,00,000 ಯುರೋಗಳಷ್ಟು(ಅಂದಾಜು 90,41,657) ದಂಡ ವಿಧಿಸುವ ಸಾಧ್ಯತೆ ಇದ್ದಿರುವುದಾಗಿ ಬಿಬಿಸಿ ವರದಿ ತಿಳಿಸಿದೆ.
ಮಗುವಿನ ತಾಯಿಯೊಬ್ಬರು ಫೌಂಡೇಶನ್ ಮೂಲಕ ಹೇಗ್ ನ ಕೋರ್ಟ್ ನಲ್ಲಿ ದಾವೆ ಹೂಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಹಿಂದೆ ತನ್ನ ವೀರ್ಯದಾನದಿಂದ ಜನಿಸಿರುವ ಮಕ್ಕಳ ಸಂಖ್ಯೆಯ ಕುರಿತು ಮಕ್ಕಳಾಗುವ ನಿರೀಕ್ಷೆಯಲ್ಲಿರುವ ಪೋಷಕರಿಗೆ ಈ ವ್ಯಕ್ತಿ ತಪ್ಪು ಮಾಹಿತಿ ನೀಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಜೋನಾಥನ್ ಯಾವುದೇ ಕಾರಣಕ್ಕೂ ವೀರ್ಯ ದಾನ ಮಾಡುವುದಾಗಿ ಮಕ್ಕಳನ್ನು ಪಡೆಯುವ ನಿರೀಕ್ಷೆಯಲ್ಲಿರುವ ಪೋಷಕರ ಬಳಿ ಇಚ್ಛೆ ವ್ಯಕ್ತಪಡಿಸುವುದಾಗಲಿ ಅಥವಾ ಸಂಪರ್ಕಿಸುವುದಾಗಲಿ ಮಾಡುವಂತಿಲ್ಲ ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಜೋನಾಥನ್ ನೆದರ್ಲ್ಯಾಂಡ್ಸ್ ನ 13 ಕ್ಲಿನಿಕ್ಸ್ ಗಳಲ್ಲಿ ವೀರ್ಯ ದಾನ ಮಾಡಿರುವುದಾಗಿ ವರದಿ ತಿಳಿಸಿದೆ. ಡಚ್ ವೈದ್ಯಕೀಯ ನಿಯಮಾನುಸಾರ, ವೀರ್ಯ ದಾನಿಗಳು 12ಕ್ಕಿಂತ ಹೆಚ್ಚು ಮಹಿಳೆಯರಿಗೆ ವೀರ್ಯ ದಾನ ಮಾಡುವಂತಿಲ್ಲ ಅಥವಾ 25 ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ತಂದೆಯಾಗುವಂತಿಲ್ಲ. ವೀರ್ಯದಾನದ ಮೂಲಕ ನೂರಾರು ಮಕ್ಕಳಿಗೆ ತಂದೆಯಾದರೆ, ನಮಗೆ ನೂರಾರು ಮಂದಿ ಒಡಹುಟ್ಟಿದವರು ಇದ್ದಾರೆ ಎಂಬ ವಿಷಯ ಮಕ್ಕಳಲ್ಲಿ ಮಾನಸಿಕ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ನೂರಾರು ಮಹಿಳೆಯರಿಗೆ ವೀರ್ಯ ದಾನ ಮಾಡುವುದನ್ನು ತಡೆಯಬೇಕಾಗಿದೆ ಎಂದು ಕೋರ್ಟ್ ತಿಳಿಸಿದೆ.