Advertisement
ದುರದೃಷ್ಟವಶಾತ್ ಈತ ತನಗಿರುವ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟಿದ್ದಾನೆ. ಈತನ ವಂಶವಾಹಿಯಲ್ಲೇ ಬುದ್ಧಿಮಾಂದ್ಯತೆ, ಕಡಿಮೆ ನೆನಪಿನ ಶಕ್ತಿಯಿರುವುದು ಈಗ ಖಾತ್ರಿಯಾಗಿದೆ. ಇದು ಗುಣಪಡಿಸಲಾಗದ ಸಮಸ್ಯೆ. ಇದನ್ನು ಆತ ವೀರ್ಯದಾನ ಮಾಡುವ ಮುನ್ನ ತಾಯಂದಿರಿಗೆ ಹೇಳಿಲ್ಲ! ಹಾಗಾಗಿ, ಈ ಕಾಯಿಲೆ ರಕ್ತಗತವಾಗಿ ಈತನ ವೀರ್ಯದಿಂದ ಹುಟ್ಟಿದ ಮಕ್ಕಳಿಗೆ, ಈ ಮಕ್ಕಳಿಂದ ಜನಿಸುವ ಮಕ್ಕಳಿಗೆ ಅಲ್ಲಿಂದ ಅವರ ವಂಶಪಾರಂಪರ್ಯವಾಗಿ ಈ ಕಾಯಿಲೆ ಮುಂದುವರಿಯುತ್ತದೆ.
ಇಷ್ಟೆಲ್ಲ ಎಡವಟ್ಟುಗಳಾಗಲು ಈತನೇ ಕಾರಣ. ವೀರ್ಯದಾನ ಮಾಡುವಾಗ ಸಹಿ ಮಾಡಿದ ಒಪ್ಪಂದಪತ್ರದಲ್ಲಿ ಹುಟ್ಟುವ ಮಕ್ಕಳನ್ನು ಭೇಟಿ ಮಾಡುವುದಿಲ್ಲ ಎಂದು ಸಮ್ಮತಿಸಿದ್ದಾನೆ. ಆದರೆ ಇತ್ತೀಚೆಗೆ ತನಗೆ ನಾಲ್ಕು ಮಕ್ಕಳನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ಡರ್ಬಿ ಕ್ರೌನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಅದೇ ಆತನಿಗೆ ಮುಳುವಾಗಿದೆ.