Advertisement
ಇಸ್ರೇಲ್‌ನ ಕಾನೂನಿನ ಪ್ರಕಾರ, ಮೃತ ವ್ಯಕ್ತಿಯ ಪತ್ನಿ ಅಥವಾ ಪೋಷಕರು ಮೃತರ ವೀರ್ಯವನ್ನು ಸಂಗ್ರಹಿಸುವಂತೆ ಮನವಿ ಸಲ್ಲಿಸಬಹುದು. ವ್ಯಕ್ತಿಯು ಮೃತಪಟ್ಟ 24 ಗಂಟೆಯೊಳಗೆ ವೀರ್ಯ ಸಂಗ್ರ ಹಿಸಿದರೆ, ಅದು ಹೆಚ್ಚು ಫಲಪ್ರದವಾಗಲಿದೆ. ಆದರೆ ವ್ಯಕ್ತಿ ಮೃತಪಟ್ಟ ಹಲವು ದಿನಗಳ ಅನಂತರವೂ ವೀರ್ಯ ಸಂಗ್ರಹಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. “ಅಕ್ಟೋಬರ್ ಅನಂತರ ಮೃತ ಇಸ್ರೇಲಿ ಯೋಧರು ಮತ್ತು ನಾಗರಿಕರ ವೀರ್ಯ ಸಂಗ್ರಹಿಸುವಂತೆ ಅವರ ಕುಟುಂಬದ ವರಿಂದ ಮನವಿಗಳು ಸಲ್ಲಿಕೆಯಾಗುತ್ತಿರುವ ಸಂಖ್ಯೆ ಅಧಿಕ ವಾಗಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ವೀರ್ಯ ಸಂಗ್ರಹ ಮತ್ತು ಅದರ ಸಂರಕ್ಷಣೆ ಸವಾಲಿನ ವಿಷಯವಾಗಿದೆ’ ಎಂದು ರೆಹೋವೋಟ್‌ನ ಕಪ್ಲಾನ್ ವೈದ್ಯಕೀಯ ಕೇಂದ್ರದ ಭ್ರೂ ಣಶಾಸ್ತ್ರ ತಜ್ಞ ಡಾ| ಯೇಲ್ ಹರಿರ್ ಮಾಹಿತಿ ನೀಡಿದ್ದಾರೆ. Advertisement
Israel: ಪೀಳಿಗೆ ಬೆಳೆಸಲು ಮೃತ ಇಸ್ರೇಲಿಗರ ವೀರ್ಯ ಸಂಗ್ರಹ!
08:51 PM Nov 16, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.