Advertisement
ರಾಜ್ಯದ ರಾಜಧಾನಿ ಬೆಂಗಳೂರು “ಬ್ ಂಗಳೂರು’, ಹೊಸಪೇಟೆಗೆ”ಹೂಸಪೇಟ’, ಕೋಟ ನೂರಗೆ ಕೋಟ್ನೂರ್, ಸಿರನೂರಗೆ “ಸಿರ್ನೂರ’, ರೇವನೂರಗೆ “ರಾವನೂರ’, ಆಳಂದಗೆ “ಅಳಂದ ಎಂದು ನಗರದ ಮತ್ತು ಊರುಗಳ ಹೆಸರನ್ನು ತಪ್ಪು ತಪ್ಪಾಗಿ ಬರೆದು ಆಭಾಸವುಂಟು ಮಾಡಲಾಗಿದೆ.
Related Articles
Advertisement
ಆದರೆ ಅದೇ ಊರುಗಳ ಹೆಸರುಗಳನ್ನು ಹೆದ್ದಾರಿ ಪ್ರಾಧಿಕಾರವೀಗ ಮಾಡಿರುವ ಎಡವಟ್ಟಿನಿಂದ ಪ್ರಯಾಣಿಕರ ಹಾಗೂ ಗ್ರಾಮಸ್ಥರಿಂದ ನಿತ್ಯ ಅಪಹಾಸ್ಯಕ್ಕೀಡಾಗುತ್ತಿರುವುದು ಒಂದೆಡೆಯಾದರೆಮತ್ತೂಂದೆಡೆ ಕನ್ನಡ ಭಾಷೆ ಕಗ್ಗೊಲೆಯಾಗಿ ಕನ್ನಡಿಗರಆಕ್ರೋಶಕ್ಕೆ ಕಾರಣವಾಗಿದೆ. ಬಹಳಷ್ಟು ಗ್ರಾಮಗಳ ಹೆಸರು ನಾಮಫಲಕಗಳಲ್ಲಿ ಕಾಗುಣಿತ ದೋಷದಿಂದ ಗ್ರಾಮಗಳಿಗೆ ಬರುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಬಹಳಷ್ಟುಕಡೆ ಕಾಗುಣಿತ ತಪ್ಪಿನಿಂದ ಈ ರೀತಿಯ ಆವಾಂತರ ನಾಮಫಲಕಗಳಲ್ಲಾಗಿದ್ದು, ಸರಿಪಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.
ಕಲಬುರಗಿಯಿಂದ ಜೇವರ್ಗಿ ಮಾರ್ಗವಾಗಿ ಸಿಂದಗಿಗೆ ತೆರಳುವ ಮಾರ್ಗದುದ್ದಕ್ಕೂ ಬಹಳಷ್ಟು ಗ್ರಾಮಗಳ ಹೆಸರು ತಪ್ಪಾಗಿ ನಾಮಫಲಕಗಳಲ್ಲಿಅಳವಡಿಸಲಾಗಿದೆ. ಆದರೆ ಯಾರೂ ಕೂಡ ಈಬಗ್ಗೆ ಧ್ವನಿ ಮೊಳಗಿಸಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಈ ಮಾರ್ಗದ ಮೂಲಕ ರಾಜ್ಯದ ಮಂತ್ರಿಗಳು, ಶಾಸಕರು, ಜಿಲ್ಲಾ-ರಾಜ್ಯಮಟ್ಟದ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸದಿರುವುದು ಬೇಸರದ ಸಂಗತಿ.
ಅಕ್ಷರ ದೋಷದಿಂದ ಊರಿನ ನಿಜವಾದ ಹೆಸರೇನು ಎಂದು ಅರಿಯಲು ಅವರಿವರ ಸಹಾಯ ಪಡೆಯುವಂತಾಗಿದೆ. ಇದರಿಂದ ವಾಹನಚಾಲಕರಿಗೆ ಗೊಂದಲ ಸೃಷ್ಟಿಯಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ನಿತ್ಯ ಇದೇ ರಸ್ತೆ ಮೇಲೆ ಸಂಚರಿಸಿದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.
ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಯಡವಟ್ಟಿನಿಂದ ಸಾಕಷ್ಟು ಜನರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಅಕ್ಷರ ದೋಷಸರಿಪಡಿಸಲು ಪ್ರಯತ್ನಿಸಬೇಕು.-ಗುರುಲಿಂಗಯ್ಯಸ್ವಾಮಿ ಯನಗುಂಟಿ, ಸ್ಥಳೀಯರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ಕೂಡಲೇ ಅಕ್ಷರ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ವಿನಯಕುಮಾರ ಪಾಟೀಲ, ತಹಶೀಲ್ದಾರ್, ಜೇವರ್ಗಿ
-ವಿಜಯಕುಮಾರ ಎಸ್.ಕಲ್ಲಾ