ಮುಂಬೈ: ಹಲವರಿಗೆ ಟ್ಯಾಟೂಗಳೆಂದರೆ ಪ್ರಾಣ. ಮೈಯಲ್ಲಿ ಹಲವೆಡೆ ತಮ್ಮ ಇಷ್ಟದ ಚಿತ್ತಾರವನ್ನು ಹಚ್ಚೆ ಹಾಕಿಕೊಳ್ಳುತ್ತಾರೆ. ಟ್ಯಾಟೂಗಳು ವ್ಯಾಪಕವಾದ ಕಲಾತ್ಮಕ ಅಭಿವ್ಯಕ್ತಿಗಳನ್ನು ನೀಡುತ್ತವೆ, ಅಸಾಮಾನ್ಯದಿಂದ ಸುಂದರವಾದ ವಿನ್ಯಾಸಗಳವರೆಗೆ, ಟ್ಯಾಟೂಗಳು ಮಿತಿಯಿಲ್ಲದ ಸೃಜನಶೀಲತೆಯನ್ನು ಎತ್ತಿ ತೋರಿಸುತ್ತದೆ.
ಆದರೆ, ಟ್ಯಾಟೂವನ್ನು ಎಚ್ಚರಿಕೆಯಿಂದ ಮಾಡದಿದ್ದರೆ ಅಚಾತುರ್ಯವಾಗುವುದು ಖಚಿತ. ಹಾಗಾಗಿ ಹಚ್ಚೆ ಹಾಕಿಕೊಳ್ಳುವಾಗ ಬಹಳಷ್ಟು ಎಚ್ಚರಿಕೆ ವಹಿಸಿ, ಸರಿಯಾಗಿ ಯೋಚನೆ ಮಾಡಬೇಕು.
ಇತ್ತೀಚೆಗೆ, ವ್ಯಕ್ತಿಯೊಬ್ಬರು ಟ್ಯಾಟೂ ತಪ್ಪೊಂದನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡರು. ಇದೀಗ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ತಂಪು ಪಾನೀಯವಾದ ಸ್ಪ್ರೈಟ್ (Sprite) ಕ್ಯಾನ್ ನ ಚಿತ್ರವನ್ನು ಹಚ್ಚೆ ಹಾಕಿಕೊಂಡಿದ್ದಾರೆ. ಆದರೆ ಟ್ಯಾಟೂ ಕಲಾವಿದನ ಅಚಾತುರ್ಯವೋ ಏನೋ, Sprite ಎಂದು ಬರೆಯುವ ಬದಲು Spite ಎಂದು ಬರೆಯಲಾಗಿದೆ. ಇದರ ಫೋಟೊ ಇದೀಗ ಸಖತ್ ವೈರಲ್ ಆಗಿದೆ.
ಹಚ್ಚೆ ಹಾಕಿಸಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಮತ್ತು ಯೋಜಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ- ಚಿತ್ರ ಎತ್ತಿ ತೋರಿಸುತ್ತದೆ. ಟ್ಯಾಟೂ ದೀರ್ಘಕಾಲ ಉಳಿಯುವ ಕಾರಣ ಇಂತಹ ತಪ್ಪುಗಳು ತಮಾಷೆಯ ವಿಷಯವಾಗುವ ಸಾಧ್ಯತೆ ಹೆಚ್ಚು.