Advertisement
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಲಾಗುವುದು. ಈ ನಿಯಮ ಆಗಸ್ಟ್ 2 ರಿಂದ (ಮಂಗಳವಾರ) ಆರಂಭಗೊಳ್ಳಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
Related Articles
Advertisement
ವಾಹನ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅಪಘಾತದ ಸಾವುಗಳ ಸಾಮಾನ್ಯ ವಿಧವೆಂದರೆ ಕುಡಿದು ವಾಹನ ಚಾಲನೆ ಮತ್ತು ವೇಗದ ಚಾಲನೆ. ಈ ವರ್ಷ ಗೋವಾ ರಾಜ್ಯದಲ್ಲಿ ಇಂತಹ 133 ಪ್ರಕರಣಗಳು ನಡೆದಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ ಎಂದು ಧರ್ಮೇಶ ಆಂಗಲೆ ಮಾಹಿತಿ ನೀಡಿದರು.
ಅಪ್ರಾಪ್ತ ವಯಸ್ಸಿನ ಮಕ್ಕಳೂ ವಾಹನ ಚಲಾಯಿಸುತ್ತಿರುವುದು ಟ್ರಾಫಿಕ್ ಪೋಲಿಸ್ ಇಲಾಖೆಯ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಅಪ್ರಾಪ್ತ ಚಾಲಕರು ಕಂಡುಬಂದಲ್ಲಿ, ವಾಹನ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಅವರಿಂದ ದಂಡವನ್ನು ಸಂಗ್ರಹಿಸಲಾಗುವುದು. ಅಲ್ಲದೆ, ಮುಂದಿನ ಕ್ರಮಕ್ಕಾಗಿ ಈ ಪ್ರಕರಣವನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‍ಗೆ ಹಸ್ತಾಂತರಿಸಲಾಗುವುದು. ಕಳೆದ ವರ್ಷ 1519 ಅಪಘಾತ ನಡೆದಿದ್ದು, ಈ ಅಪಘಾತಗಳಲ್ಲಿ 143 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದಕ್ಷಿಣ ಗೋವಾ ಪೊಲೀಸ್ ಅಧೀಕ್ಷಕ ಧರ್ಮೇಶ ಆಂಗಲೆ ಆಹಿತಿ ನೀಡಿದರು.