ಬಸವಕಲ್ಯಾಣ: ಕ್ಷೇತ್ರದ ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನನ್ನ ಅವಧಿ ಒಂದು ವರ್ಷವೂ ಕೂಡಾ ಆಗಿಲ್ಲ. ನಿಮ್ಮಲ್ಲೆರ ಸೇವಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇನೆ ಜೊತೆಗೆ ಪ್ರಾಮಣಿಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಿದ್ದೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಲು ಮನೆ-ಮನೆಗೆ ಗಂಗೆ ಯೋಜನೆಯ ಒಟ್ಟು 9.32 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಜೊತೆಗೆ ನೂತನ ಅನುಭವ ಮಂಟಪದ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ. ಇದರಿಂದ ನೂರಾರು ಜನರಿಗೆ ಉದ್ಯೋಗದ ಜೊತೆಗೆ ವ್ಯವಹಾರಗಳು ಆಗಲಿವೆ. ಇದರಿಂದಾಗಿ ಇಲ್ಲಿನ ಜನರ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ ಎಂದು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಸಿರಗಾಪೂರ, ಪಕ್ಷದ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಜ್ಞಾನೇಶ್ವರ ಪಾಟೀಲ, ಕಳಿದಾಸ ಜಾಧವ, ಶಿವರಾಜ ತಾಟೆ, ಶಿವಾ ಕಲೋಜಿ, ರತಿಕಾಂತ ಕೊಹಿನೂರ, ಸುರೇಶ ನಾಟೀಕಾರ, ಸುಭಾಷ ಜಮಾದಾರ, ತುಕರಾಮ ಜಾಧವ, ಲಾಡವಂತಿ ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ ಆರ್ ಕಾಂಬಳೆ, ಉಪಾಧ್ಯಕ್ಷೆ ರೋಹಿದಾ ಬಿರಾದಾರ, ಕೊಹಿನೂರ ಗ್ರಾಪಂ ಅಧ್ಯಕ್ಷ ಸುನೀಲ ಅಡೆಪ್ಪಗೋಳ, ಶಿವಶರನಪ್ಪ ಸಂತಾಜಿ, ವಿಲಾಸ ತರಮುಡೆ, ವಸಂತ ಪಾಟೀಲ, ಅನಿಲ ಮಣಕೋಜಿ, ಶ್ರೀಶೈಲ ಪಾಟೀಲ, ಶಿವಾಜಿ ಪಾಟೀಲ, ದಿಲೀಪ ಸಿಂಧೆ, ಸತ್ಯವಾನ ಸಾಳುಂಕೆ, ನವನಾಥ ಸೋಳಂಕೆ ಇದ್ದರು.