Advertisement

ರಸ್ತೆ ಸುಧಾರಣೆ-ಡಾಂಬರೀಕರಣ ಕಾಮಗಾರಿಗೆ ವೇಗ

12:03 PM Nov 05, 2019 | Suhan S |

ಚಿಂಚೋಳಿ: ಪಟ್ಟಣದ ಕನಕದಾಸ ವೃತ್ತದಿಂದ ಆಸ್ಪತ್ರೆವರೆಗೆ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ.

Advertisement

ಲೋಕೋಪಯೋಗಿ ಇಲಾಖೆ 5054 ಅಪೆಂಡಿಕ್ಸ್‌(ಇ)ಯೋಜನೆ 2016-17ನೇ ಸಾಲಿನಲ್ಲಿ ಒಟ್ಟು 96 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ವರೆಗೆ ಮಾತ್ರ ನಡೆಯುತ್ತಿದೆ. ಮಹಾತ್ಮ ಗಾಂಧಿ  ಚೌಕಿನಿಂದ ಆಸ್ಪತ್ರೆವರೆಗೆ ರಸ್ತೆ ಡಾಂಬರೀಕರಣಕ್ಕಾಗಿ 2018-19ನೇ ಸಾಲಿನಲ್ಲಿ 2.50 ಕೋಟಿ ರೂ. ಮಂಜೂರಾಗಿದೆ. ನಾಲ್ಕು ಮಾರ್ಗ ಅಭಿವೃದ್ಧಿ ಆಗುವುದರಿಂದ ವಾಹನಗಳ ಸಂಚಾರ ಸುಗಮವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್‌ ಗಿರಿರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ಚಂದಾಪುರ ನಗರದಲ್ಲಿ ರಸ್ತೆ ಮಧ್ಯೆ ವಿದ್ಯುತ್‌ ದೀಪ ಅಳವಡಿಸುವುದು ಮತ್ತು ರಸ್ತೆ ಪಕ್ಕದಲ್ಲಿ ಚರಂಡಿ ಮತ್ತು ಫುಟಪಾರ್‌ ಕಾಮಗಾರಿ ನಡೆಯುತ್ತಿದೆ. ಆದರೆ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಿಂದ ಕಾಮಗಾರಿ ನಡೆಯುತ್ತಿದೆ. ಚಂದಾಪುರ ನಗರ ಸೌಂದರ್ಯಕ್ಕೆ ಒಳ್ಳೆಯ ಅಭಿವೃದ್ಧಿ ಕೆಲಸವಾಗಿದೆ. ವಾಹನಗಳ ಸಂಚಾರಕ್ಕೆ ಉತ್ತಮ ಅನುಕೂಲವಾಗುತ್ತಿದೆ. ಆದರೆ ಚರಂಡಿ ಕಾಮಗಾರಿ ಮಾತ್ರ ನಿಧಾನಗತಿಯಿಂದ ನಡೆಯುತ್ತಿದೆ. ಕೆಲಸ ಬೇಗನೆ ಪೂರ್ಣಗೊಳಿಸಿದರೆ ಚಂದಾಪುರ ನಗರ ಇನ್ನು ಮುಂದೆ ಅತ್ಯಂತ ಚೆಂದವಾಗಿ ಕಾಣಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next