Advertisement

ಬಿಜೆಪಿ ಸೇರುತ್ತೇನೆ ಎನ್ನುವುದು ಊಹಾಪೋಹ :ಸುಮಲತಾ

02:06 AM Apr 06, 2019 | Team Udayavani |

ಮಂಡ್ಯ: “ನಾನು ಬಿಜೆಪಿಗೆ ಸೇರೋದಿಲ್ಲ. ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಕೇವಲ ಊಹಾಪೋಹ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ.

Advertisement

ನಗರದ ಗುತ್ತಲು ಬಡಾವಣೆಯ ಕಾಂಗ್ರೆಸ್‌ ಮುಖಂಡ ಮುನಾವರ್‌ ಖಾನ್‌ ನಿವಾಸದಲ್ಲಿ ನಡೆದ ಮುಸಲ್ಮಾನರ ಸಭೆಯಲ್ಲಿ ಮಾತನಾಡಿ,”ನನ್ನ ಮೊದಲ ಆದ್ಯತೆ ಕಾಂಗ್ರೆಸ್‌ ಆಗಿತ್ತು.ಕಾಂಗ್ರೆಸ್‌ ಟಿಕೆಟ್‌ ಕೊಡಲಿಲ್ಲ.ಅದಕ್ಕೆ ಪಕ್ಷೇತರನಾಗಿ ಸ್ಪರ್ಧಿಸುವುದು ಅನಿವಾರ್ಯವಾಯಿತು.ನನಗೆ ಅಧಿಕಾರದ ಆಸೆ ಇಲ್ಲ. ಆ ಆಸೆ ಇದ್ದಿದ್ದರೆ ಕೊಟ್ಟ ಆಫ‌ರ್‌ಗಳನ್ನೇ ಒಪ್ಪಿಕೊಳ್ಳುತ್ತಿದ್ದೆ’ ಎಂದರು.

“ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಹೊಸ ಗಾಳಿ ಬೀಸುತ್ತಿದೆ. ಅದು ಮತಗಳಾಗಿ ನನಗೆ ಒಲಿದು ಬರಲಿದೆ. ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಟರಾದ ದರ್ಶನ್‌ ಮತ್ತು ಯಶ್‌ ಮೂರು ದಿನ ಪ್ರಚಾರ ಕ್ಕೆ ಬರಲ್ಲ. ಮಧ್ಯದಲ್ಲೊಂದು ಬ್ರೇಕ್‌ ಅಷ್ಟೆ.

ಏ.8ರಿಂದ ಮಂಡ್ಯಕ್ಕೆ ಆಗಮಿಸಿ ನನ್ನ ಪರ ಪ್ರಚಾರ ನಡೆಸಲಿದ್ದಾರೆ.ಕೊನೆಯವರೆಗೂ ಅವರು ನನ್ನೊಟ್ಟಿಗೆ ಕ್ಷೇತ್ರದಲ್ಲಿರುತ್ತಾರೆ’ಎಂದು ಹೇಳಿದರು.ನಮ್ಮ ಟೂರಿಂಗ್‌ ಟಾಕೀಸ್‌ ಖಾಲಿ ಆಗುತ್ತಾ ಅಥವಾ ಜೆಡಿಎಸ್‌ನ ಡ್ರಾಮಾ ಕಂಪನಿ ಖಾಲಿ ಆಗುತ್ತಾ ಎಂದು ಚುನಾವಣಾ ಫ‌ಲಿತಾಂಶದ ನಂತರ ನೋಡೋಣ ಎಂದು ಸಂಸದ ಶಿವರಾಮೇ ಗೌಡರಿಗೆ ಟಾಂಗ್‌ ನೀಡಿದರು.

ಈ ಮಧ್ಯೆ,ಕೆಂಗೇರಿಯಿಂದ ಆಗಮಿಸಿದ್ದ ಅರ್ಚಕನೊಬ್ಬ ಪೇಟೆ ಬೀದಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಸುಮಲತಾ ಅವರನ್ನು ಭೇಟಿ ಯಾಗಿ ತ್ರಿಶೂಲ ನೀಡಿದ.
“ಕೆಂಗೇರಿ ಯ ದುರ್ಗಾ ಪರಮೇಶ್ವರಿ ನನಗೆ ಹೇಳಿದ್ದಾಳೆ.ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಶತಸ್ಸಿದಟಛಿ’ಎಂದು ಹೇಳಿ ಆಶೀರ್ವದಿಸಿದ. ಬಳಿಕ, 5 ರೂ.ಡಾಕ್ಟರ್‌ಎಂದೇ ಪ್ರಸಿದಟಛಿರಾಗಿರುವ ಡಾ.ಶಂಕರೇಗೌಡರ ನಿವಾಸಕ್ಕೆ ಭೇಟಿ ನೀಡಿ, ಬೆಂಬಲ ಕೋರಿದರು. ಈ ಮಧ್ಯೆ,ತಾಲೂಕಿನ ಸಂತೆಕಸಲಗೆರೆ ಗ್ರಾಮಕ್ಕೆ ಸುಮಲತಾ ಬಂದಾಗ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಬಾವುಟಗಳು ರಾರಾಜಿಸಿದವು.

Advertisement

ಸುಮಲತಾ ಅವರಂತೆ ಡ್ರಸ್‌ ಮತ್ತು ಕನ್ನಡಕ
ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿಗಳ ಎವಿಎಂನ ಕ್ರಮ ಸಂಖ್ಯೆ 19ರ ಸುಮಲತಾ ಅವರನ್ನು ತಕ್ಷಣ ನೋಡಿದರೆ ಮತದಾರರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ.ಸುಮಲತಾ ಅಂಬರೀಶ್‌ ಅವರಂತೆ ಪುಲ್‌ ಬ್ಲೌಸ್‌,ಸೀರೆ ಹಾಗೂ ಕನ್ನಡಕ ಹಾಕಿಸಿ ಪೋಟೊ ಕ್ಲಿಕ್ಕಿಸಿದ್ದಾರೆ.ಆ ಪೋಟೋವನ್ನೇ ಇವಿಎಂನಲ್ಲಿಯೂ ಹಾಕಿದಂತೆ ಕಾಣುತ್ತಿದೆ ಎಂದು ಕ್ರಮಸಂಖ್ಯೆ 19ರ ಸುಮಲತಾ ಹಾಗೂ ಕ್ರಮಸಂಖ್ಯೆ 20ರ ಸುಮಲತಾ ಅಂಬರೀಶ್‌ ಅವರ ಪೋಟೋಗಳು ಜಂಟಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next