Advertisement

ರಫೇಲ್ ಯುದ್ಧ ವಿಮಾನ ಅಂದ ಕೂಡಲೇ ಬೆಚ್ಚಿಬೀಳೋದೇಕೆ? ರಫೇಲ್ ವಿಶೇಷತೆ ಏನು…

03:27 PM Sep 10, 2020 | Nagendra Trasi |

ನವದೆಹಲಿ: ಬರೋಬ್ಬರಿ ಏಳು ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿ ಐದು ಯುದ್ಧ ವಿಮಾನ ಬುಧವಾರ(ಜುಲೈ 29- 2020) ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದಿದ್ದು, ಗುರುವಾರ (ಸೆ.10, 2020) ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಗೆ ಭೀಮಬಲ, ರಫೇಲ್ ಶತ್ರು ದೇಶಗಳಿಗೆ ನಡುಕ ಹುಟ್ಟಿಸುತ್ತಿದೆ…ಹೀಗೆ ರಫೇಲ್ ಬಗ್ಗೆ ಅಷ್ಟೊಂದು ಭಯವೇಕೆ? ರಫೇಲ್ ಸಾಮರ್ಥ್ಯ ಎಂತಹದ್ದು ಎಂಬ ಮಾಹಿತಿ ಇಲ್ಲಿದೆ…

Advertisement

ರಫೇಲ್ ವಿಮಾನ ಗಂಟೆಗೆ ಗರಿಷ್ಠ 750 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸಬಲ್ಲದು. ರಫೇಲ್ ಜೆಟ್ 9,500 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ರಫೇಲ್ ಯುದ್ಧ ವಿಮಾನ ಇಳಿಯಲು 450 ಮೀಟರ್ ಉದ್ದದ ರನ್ ವೇ ಅಗತ್ಯವಿದೆ.

* ರಫೇಲ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಇದೀಗ ಭಾರತದ ವಾಯುಸೇನೆಗೆ ಚಿನ್ನದ ಬಾಣಗಳಾಗಿ ಸೇರ್ಪಡೆಯಾಗಿದೆ.

*ರಫೇಲ್ ಅವಳಿ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ. ರಫೇಲ್ ಯುದ್ಧ ವಿಮಾನ ಆಕಾಶ ಹಾಗೂ ನೌಕಾನೆಲೆಯಿಂದಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

*ರಫೇಲ್ ನಲ್ಲಿ ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿ ಉಡ್ಡಯನ ಮಾಡುವ ಸಾಮರ್ಥ್ಯ ಇದೆ.

Advertisement

ಇದನ್ನೂ ಓದಿ: ರಫೇಲ್‌ ನೋಡಲು ಜನವೋ ಜನ; ತಾರಸಿಯ ಮೇಲೆ ನಿಂತು ಹರ್ಷೋದ್ಗಾರ

*ಅನತಿ ದೂರದಿಂದ(ಕಣ್ಣಿಗೆ ಕಾಣಿಸದಷ್ಟು)ಲೂ ದಾಳಿ ನಡೆಸಬಲ್ಲ ವೈಶಿಷ್ಠ್ಯತೆ ರಫೇಲ್ ಯುದ್ಧ ವಿಮಾನದಲ್ಲಿದೆ.

*ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ದು ಸೇರಿದಂತೆ ಎಲ್ಲಾ ರೀತಿಯ ವೈಮಾನಿಕ ದಾಳಿ ನಡೆಸುವ ಸರ್ವಸಾಮರ್ಥ್ಯ ರಫೇಲ್ ಯುದ್ಧ ವಿಮಾನಕ್ಕಿದೆ.

*ಆಕಾಶ ಮಾರ್ಗದಲ್ಲಿಯೇ ಶತ್ರು ದೇಶದ ವಿಮಾನಗಳ ಮೇಲೆ ದಾಳಿ ನಡೆಸಬಲ್ಲದು.

*ರಾಡಾರ್ ವಾರ್ನಿಂಗ್ ರಿಸೀವರ್ ಹೊಂದಿದೆ.

*ಹತ್ತು ಗಂಟೆಗಳ ಕಾಲ ಫ್ಲೈಟ್ ಡಾಟಾ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಕ್ರಿಕೆಟ್: ಐಪಿಎಲ್ ನಲ್ಲಿ ಅಭಿಮಾನಿಗಳಿಗೆ ನಿರಾಶೆ ಮಾಡಲಿದೆ ಈ ಏಳು ಅಂಶಗಳು

ರಫೇಲ್ ವಿಮಾನ ವಿಶೇಷತೆ ಏನು:

ರಫೇಲ್ ವಿಮಾನದ ರೆಕ್ಕೆಗಳ ಉದ್ದ: 10.8 ಮೀಟರ್

ವಿಂಗ್(ರೆಕ್ಕೆಯ ಅಗಲ) ಏರಿಯಾ :45.7ಮೀಟರ್

ರಫೇಲ್ ಯುದ್ಧ ವಿಮಾನದ ಒಟ್ಟು ಉದ್ದ:15.3 ಮೀಟರ್

ರಫೇಲ್ ಯುದ್ಧ ವಿಮಾನದ ಎತ್ತರ: 5.34 ಮೀಟರ್

ರಫೇಲ್(ಖಾಲಿ) ತೂಕ: ಅಂದಾಜು 10.3 ಟನ್

ಲೇಸರ್ ವಾರ್ನಿಂಗ್, ರೇಡಾರ್ ಜಾಮರ್ ಹಾಗೂ 1800 ಕಿ,ಮೀ ವ್ಯಾಪ್ತಿ ವೈರಿಪಡೆಯ ಚಟುವಟಿಕೆ ಗ್ರಹಿಸುವ ಸಾಮರ್ಥ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next