ತೈವಾನ್ ಮೂಲದ ಏಸರ್ ಬ್ರಾಂಡ್, ಲ್ಯಾಪ್ ಟಾಪ್, ಪಿಸಿ, ಮಾನಿಟರ್ ಗಳನ್ನು ತಯಾರಿಸುತ್ತದೆ. ಅದು ಸ್ಮಾರ್ಟ್ ಟಿವಿ ಕ್ಷೇತ್ರದಲ್ಲೂ ಉತ್ತಮ ಹೆಸರು ಗಳಿಸಿರುವುದು ಬಹುತೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಏಸರ್ ಟಿವಿಗಳನ್ನು ಮಾರಾಟ ಮಾಡುವ ಅಧಿಕೃತ ಲೈಸೆನ್ಸೀ ಇಂಡ್ ಕಾಲ್ ಟೆಕ್ನಾಲಜೀಸ್ ಆಗಿದೆ. ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಟಿವಿಗಳನ್ನು ಏಸರ್ ನೀಡುತ್ತಿದೆ. ಅದು ಇತ್ತೀಚಿಗೆ ಬಿಡುಗಡೆ ಮಾಡಿರುವ ಏಸರ್ ಅಡ್ವಾನ್ಸಡ್ ಐ ಸೀರೀಸ್ (32 ಇಂಚು ಪರದೆ) ನ ವಿಶೇಷಣಗಳು ಹೀಗಿವೆ.
ಈ ಟಿವಿಯ ದರ ಅಮೆಜಾನ್ ನಲ್ಲಿ, ಏಸರ್ ಸ್ಟೋರ್ ನಲ್ಲಿ 11,999 ರೂ. ಇದೆ.
ಪರದೆ: ಇದು 32 ಇಂಚಿನ ಎಲ್ ಇ ಡಿ ಫ್ರೇಂಲೆಸ್ ಪರದೆ ಹೊಂದಿದೆ. ಅಂದರೆ ಪರದೆಯ ಅಂಚಿನಲ್ಲಿ ಕಪ್ಪು ಪಟ್ಟಿಗಳಿಲ್ಲ. ಹೀಗಾಗಿ ಪರದೆ ಸ್ಟೈಲಿಷ್ ಆಗಿ ಕಾಣುತ್ತದೆ. ಟಿವಿ ಸಾಕಷ್ಟು ಸ್ಲಿಮ್ ಆಗಿಯೂ ಇದೆ. ಪರದೆ ಎಚ್ ಡಿ ರೆಸ್ಯೂಲೇಷನ್ ಹೊಂದಿದೆ. 1366*768 ಪಿಕ್ಸಲ್ಸ್ ಇದ್ದು 60 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದ್ದು, 178 ಡಿಗ್ರಿ ಕೋನದಲ್ಲೂ ಪರದೆ ವೀಕ್ಷಿಸಬಹುದು. ಇದರ ಆಪರೇಟಿಂಗ್ ಸಿಸ್ಟಂ ಗೂಗಲ್ ಆಗಿದ್ದು, ಬೇರಾವುದೇ ಹೆಚ್ಚುವರಿ ಓಎಸ್ ಗಳಿಲ್ಲ.
ವಿನ್ಯಾಸ: ಟಿವಿಯ ಹಿಂಭಾಗದಲ್ಲಿ ಬೇರೆ ಬೇರೆ ಕೇಬಲ್ ಗಳನ್ನು ಸಂಪರ್ಕಿಸುವ ಪೋರ್ಟ್ ಗಳಿವೆ. ಟಿವಿಯನ್ನು ಟೇಬಲ್ ಮೇಲೆ ಇರಿಸಿಕೊಳ್ಳಲು ಎರಡು ಕಾಲುಗಳಂಥ ಸ್ಟ್ಯಾಂಡ್ ನೀಡಲಾಗಿದೆ. ವಾಲ್ ಮೌಂಟ್ ಮಾಡಲು ಪ್ರತ್ಯೇಕ ಬ್ರಾಕೆಟ್ ನೀಡಿಲ್ಲ. ಗೋಡೆಗೆ ಅಳವಡಿಸಿಕೊಳ್ಳಬಯಸಿದರೆ ಪ್ರತ್ಯೇಕವಾಗಿ ಹೊರಗೆ ಖರೀದಿಸಬೇಕು.
ಟಿವಿಯ ಎಡಬದಿ (ಸೈಡ್)ಯಲ್ಲಿ ಎಲ್ಲ ಪೋರ್ಟ್ (ಸಂಪರ್ಕ ಕಿಂಡಿಗಳು) ಗಳನ್ನೂ ನೀಡಲಾಗಿದೆ. ಇದು ಟಿವಿ ಗೋಡೆಯ ಮೇಲಿದ್ದಾಗಲೂ ಕೇಬಲ್ ಗಳನ್ನು ಹಾಕಲು ತೆಗೆಯಲು ಅನುಕೂಲಕರ. ಕೆಲವು ಟಿವಿಗಳಲ್ಲಿ ಹಿಂಬದಿ ನೀಡಲಾಗಿರುತ್ತದೆ. ಅಂತಲ್ಲಿ ಗೋಡೆಯಲ್ಲಿ ಅಳವಡಿಸಿದ್ದರೆ, ಕೇಬಲ್ ಹಾಕಲು ಬಹಳ ಕಷ್ಟಪಡಬೇಕಾಗುತ್ತದೆ. ಇದರಲ್ಲಿ ತಲಾ ಎರಡು ಯುಎಸ್ ಬಿ ಪೋರ್ಟ್, ಎಚ್ ಡಿ ಎಂ ಐ ಪೋರ್ಟ್(1 ಎಆರ್ ಸಿ) , ತಲಾ ಒಂದು ನೆಟ್ವರ್ಕ್ ಪೋರ್ಟ್, ಆಂಟೆನಾ ಕೇಬಲ್ ಪೋರ್ಟ್, ಕೋಆಕ್ಸಿಯಲ್ ಪೋರ್ಟ್, ಎವಿ ಇನ್, 3.5 ಎಂಎಂ ಆಡಿಯೋ ಪೋರ್ಟ್ ಇದೆ. ಇನ್ನು ವೈರ್ ಲೆಸ್ ಮೂಲಕ ಸಂಪರ್ಕಿಸಲು ಡುಯಲ್ ಬ್ಯಾಂಡ್ ವೈಫೈ, 2 ವೇ ಬ್ಲೂಟೂತ್ 5.0 ಸೌಲಭ್ಯ ಇದೆ.
1.5 ಜಿಬಿ RAM, 16 GB ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಟಿವಿಗಳಿಗೆ ಇದು ಸಾಕು. ಇದು 64 ಬಿಟ್ ನಾಲ್ಕು ಕೋರ್ ಗಳ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್ ಗಾಗಿ ಮಲಿ ಜಿ31 ಎಂಪಿ2 ಪ್ರೊಸೆಸರ್ ಇದೆ.
ರಿಮೋಟ್ ಕಂಟ್ರೋಲರ್: ಸ್ಮಾರ್ಟ್ ಟಿವಿಗಳಿಗೆ ರಿಮೋಟ್ ಕಂಟ್ರೋಲರ್ ನಲ್ಲಿನ ಆಯ್ಕೆ ಸೌಲಭ್ಯಗಳು ಮುಖ್ಯ. ಇದರಲ್ಲಿ ನೆಟ್ ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್, ಡಿಸ್ನೆ ಹಾಟ್ ಸ್ಟಾರ್ ಗೆ ನೇರವಾಗಿ ಸಂಪರ್ಕಿಸುವ ಡೆಡಿಕೇಟೆಡ್ ಬಟನ್ಗಳಿವೆ. ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬಟನ್ ಇದ್ದು ಧ್ವನಿ ಆಜ್ಞೆಯ ಮೂಲಕ ನಮಗೆ ಬೇಕಾದ ಓಟಿಟಿ, ಚಾನೆಲ್ ಗೆ ಹೋಗಬಹುದು. ಸೆಟಿಂಗ್ ಬಟನ್ ಕೂಡ ರಿಮೋಟ್ ನಲ್ಲೇ ಇದೆ.
ಕಾರ್ಯಾಚರಣೆ: ಟಿವಿ ಬಜೆಟ್ ದರದಲ್ಲಿದ್ದರೂ ನೋಡುಗನಿಗೆ ಉತ್ತಮ ನೋಟ ಮತ್ತು ಶ್ರವ್ಯ ಅನುಭವ ನೀಡುತ್ತದೆ. ಪರದೆ 16.7 ಮಿಲಿಯನ್ ಕಲರ್ಸ್ ಹೊಂದಿದ್ದು, ಇಂಟೆಲಿಜೆಂಟ್ ಫ್ರೇಂ ಸ್ಟೆಬಿಲೈಜೇಷನ್ ಎಂಜಿನ್ ಇದೆ. ಸೂಪರ್ ಬ್ರೈಟ್ ನೆಸ್ , ಎಚ್ ಡಿ ಡಿಆರ್ 10 ಇರುವುದರಿಂದ ಪರದೆಯಲ್ಲಿ ದೃಶ್ಯಗಳು ರಿಚ್ ಆಗಿ ಕಾಣುತ್ತವೆ. 30 ವ್ಯಾಟ್ಸ್ ಹೈ ಫಿಡಿಲಿಟಿ ಸ್ಪೀಕರ್ಸ್ ಇರುವುದರಿಂದ ಇದರಲ್ಲಿ ಹೊರಹೊಮ್ಮುವ ಶಬ್ದ ಸ್ಪಷ್ಟವಾಗಿ, ಕ್ಲಿಯರ್ ಆಗಿ ಕೇಳುತ್ತದೆ. ಕೆಲವು ಟಿವಿಗಳಲ್ಲಿ ಶಬ್ದ ಸರಿಯಾಗಿ ಕೇಳದೇ, ಹೆಚ್ಚುವರಿ ಸೌಂಡ್ ಬಾರ್ ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಇದರಲ್ಲಿ ಸೌಂಡ್ ಬಾರ್ ಹಾಕಿಕೊಳ್ಳುವ ಅಗತ್ಯವಿಲ್ಲ. ಒಂದು ಟಿವಿಯಲ್ಲಿ ದೃಶ್ಯ ಮತ್ತು ಧ್ವಾನಿ ಬಹಳ ಮುಖ್ಯವಾದ ಅಂಶಗಳು. 11 ಸಾವಿರ ರೂ. ಬಜೆಟ್ ದರದಲ್ಲಿ ಇದೊಂದು ಉತ್ತಮ ಗುಣಮಟ್ಟದ ಟಿವಿ ಎನ್ನಲಡ್ಡಿಯಿಲ್ಲ.
-ಕೆ.ಎಸ್. ಬನಶಂಕರ ಆರಾಧ್ಯ