Advertisement
ಕೈಯಲ್ಲಿ ಡಿಗ್ರಿ ಇದೆ, ದೇಹದಲ್ಲಿ ಕಸುವೂ ಇದೆ; ಆದರೂ ಕೆಲವರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಅದಕ್ಕೆ ಪ್ರತಿಭೆಯ ಕೊರತೆ ಕಾರಣವೋ, ಇಚ್ಛಾಶಕ್ತಿಯ ಕೊರತೆಯೋ ಗೊತ್ತಿಲ್ಲ. ಆದರೆ, ಜ್ಯೋತಿಯಂಥ ಕೆಲವರು, ತಮ್ಮೆಲ್ಲ ಇತಿಮಿತಿಗಳನ್ನು ಮೀರಿ, ಮನೆಯಲ್ಲಿ ಕುಳಿತೇ ಸಾಧನೆಗೆ, ಸಂಪಾದನೆಗೆ ಹಾದಿ ಕಂಡುಕೊಂಡಿದ್ದಾರೆ. ಕಾಲು ಮತ್ತು ಬೆನ್ನು ಸ್ವಲ್ಪ ಊನವಾಗಿದ್ದರೂ, ಕಲಿತಿರುವ ವಿದ್ಯೆಯ ನೆರವಿನಿಂದ ವಿದೇಶಿ ಮಕ್ಕಳಿಗೆ ಟೀಚರ್ ಆಗಿದ್ದಾರೆ!
ಹೀಗೇ ಒಮ್ಮೆ, ನೌಕರಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದಾಗ, ಹೈದರಾಬಾದ್ ಮೂಲದ ಸಂಸ್ಥೆಯೊಂದರಲ್ಲಿ ಆನ್‌ಲೈನ್ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ಖಾಲಿಯಿರುವ ಬಗ್ಗೆ ತಿಳಿಯಿತು. ಮನೆಯಲ್ಲಿಯೇ ಕುಳಿತು ಮಾಡುವ ಕೆಲಸವಾದ್ದರಿಂದ, ಟ್ರೈ ಮಾಡೋಣ ಅಂತ ಅರ್ಜಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕೃತವಾಗಿ, ಸಂದರ್ಶನಕ್ಕೆ ಆಹ್ವಾನವೂ ಬಂತು. ಆನ್‌ಲೈನ್‌ನಲ್ಲೆ ಇಂಟರ್‌ವ್ಯೂ ಕೂಡಾ ನಡೆಯಿತು. ಪರಸ್ಪರ ಮುಖ ನೋಡದೇ ನಡೆದ ಸಂದರ್ಶನದಲ್ಲಿ ಜ್ಯೋತಿ ಆಯ್ಕೆಯಾಗಿಬಿಟ್ಟರು.
Related Articles
ಹೈದರಾಬಾದ್‌ನ ಆ ಸಂಸ್ಥೆಗೆ ಅಮೆರಿಕ, ಜರ್ಮನ್, ರಷ್ಯಾ ಹಾಗೂ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಸಬ್‌ಸೆð„ ಬ್ ಆಗಿದ್ದಾರೆ. ಈಗ ಜ್ಯೋತಿ ಮನೆಯಲ್ಲಿ ಕುಳಿತೇ ಆ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ, ರಸಾಯನಶಾಸ್ತ್ರ ದ ಪಾಠ ಮಾಡುತ್ತಿದ್ದಾರೆ. ಪಾಠ ನಡೆಯುವುದು ಬರವಣಿಗೆ ಮೂಲಕ ಮಾತ್ರ. ವಿಡಿಯೋ ಕಾಲ್ ಮಾಡಲು ಕೂಡ ಅವಕಾಶ ಇಲ್ಲ. ವಿದ್ಯಾರ್ಥಿಗಳಿಗೆ ಪಾಠ ಇಷ್ಟವಾಗದಿದ್ದರೆ, ಅದನ್ನು ಅವರು ಪ್ರತಿಕ್ರಿಯೆ ಮೂಲಕ ತಿಳಿಸುತ್ತಾರೆ.
Advertisement
ನಾಲ್ಕು ಗಂಟೆ ಪಾಠಜ್ಯೋತಿಯವರ ಕ್ಲಾಸ್, ಬೆಳಗ್ಗೆ 4.30- 8.30ರವರೆಗೆ ನಡೆಯುತ್ತದೆ. ಪ್ರತಿದಿನ ಕನಿಷ್ಠ ನಾಲ್ಕು ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಅವತ್ತಿನ ಪಾಠ ಇಷ್ಟವಾದರೆ ಮರುದಿನ ಆ ವಿದ್ಯಾರ್ಥಿಗಳು ಮತ್ತೆ ಜ್ಯೋತಿ ಅವರ ಅಪಾಯಿಂಟ್‌ಮೆಂಟ್ ಪಡೆಯುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪಾಠ ಹೇಳಿದ್ದಕ್ಕೆ, ಒಂದು ಗಂಟೆಗೆ 175 ರೂ. ವೇತನವನ್ನು ಸಂಸ್ಥೆ ನೀಡುತ್ತಿದೆ. ಹೀಗೆ, ಅವರು ಪ್ರತಿ ತಿಂಗಳು 30-35 ಸಾವಿರ ರೂ. ಅನ್ನು ದುಡಿಯುತ್ತಿದ್ದಾರೆ. 2018ರ ಅಕ್ಟೋಬರ್‌ನಿಂದ ಜ್ಯೋತಿ ಈ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಆರ್ಟ್ಸ್, ಕಲಿಸೋದು ಸೈನ್ಸ್
ಇಂಗ್ಲಿಷ್‌ನಲ್ಲಿ ಎಂ.ಎ ಮಾಡಿರುವ ಜ್ಯೋತಿ, ಪಾಠ ಮಾಡುತ್ತಿರುವುದು ವಿಜ್ಞಾನವನ್ನು. ಇದು ಸಾಧ್ಯವಾಗಲು ಕಾರಣ, ಪಿಯುಸಿಯಲ್ಲಿ ಅವರು ಸೈನ್ಸ್ ಓದಿರುವುದು. ನಂತರವೂ ಅವರು, ವಿಜ್ಞಾನದ ಜ್ಞಾನ ಹೆಚ್ಚಿಸಿಕೊಳ್ಳಲು ಅನೇಕ ಪುಸ್ತಕಗಳನ್ನು ಓದಿದ್ದಾರೆ, ಓದುತ್ತಿದ್ದಾರೆ. ಬೇರೆಯವರಿಗೆ ಪಾಠ ಮಾಡುವ ಮುನ್ನ, ನಾವು ವಿಷಯದ ಕುರಿತು ಆಳವಾದ ಜ್ಞಾನ ಪಡೆದಿರಬೇಕು ಅಂತಾರೆ ಜ್ಯೋತಿ. ಇವರೇ ಮೊದಲು
ಆನ್‌ಲೈನ್ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಮೊದಲ ಕನ್ನಡತಿ ಈಕೆಯಂತೆ. ಈ ಬಗ್ಗೆ ಜ್ಯೋತಿ ಅವರಿಗೆ ಗೊತ್ತಾಗಿದ್ದು ಸಂದರ್ಶನದ ವೇಳೆಯಲ್ಲಿ. ಆನಂತರ, ಇಬ್ಬರು ಸ್ನೇಹಿತರನ್ನೂ ಇದೇ ಸಂಸ್ಥೆಗೆ ಸೇರಿಸುವಲ್ಲಿಯೂ ನೆರವಾಗಿದ್ದಾರೆ ಇವರು. ಇವರ ಸಲಹೆಯಂತೆ ಅತ್ತಿಗೆ ನಿವೇದಿತಾ ಬೀಳಗಿ ಹಾಗೂ ವಿಜಯಪುರದ ರೇವಣಸಿದ್ದ ಹಿರೇಮಠ, ಎಂಬವರು ಉದ್ಯೋಗ ಪಡೆದಿದ್ದಾರೆ. “ನನಗೆ ಕಾಲು ಮತ್ತು ಬೆನ್ನು ಸ್ವಲ್ಪ ಊನವಾಗಿದೆ. ವೈದ್ಯರಿಂದ ಸಾಕಷ್ಟು ಚಿಕಿತ್ಸೆ ಪಡೆದರೂ, ಅದರಿಂದ ಪ್ರಯೋಜನವಾಗಿಲ್ಲ. ಯಾರಿಗೂ ಭಾರವಾಗದೆ, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬು ಆಸೆಯಿತ್ತು. ಎಷ್ಟು ಪ್ರಯತ್ನಿಸಿದರೂ, ಸರ್ಕಾರಿ ಕೆಲಸ ಸಿಗಲಿಲ್ಲ. ಕೊನೆಗೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಈ ಕೆಲಸ ಸಿಕ್ಕಿತು. ವಿದೇಶಿ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ ಅಂತ ಖುಷಿ ಇದೆ. ನನ್ನ ಹಾಗೇ ಇತರರೂ, ಅಂತರ್ಜಾಲದ ಸಹಾಯ ಪಡೆದು ಬದುಕು ರೂಪಿಸಿಕೊಳ್ಳುವಂತಾಗಲಿ.’
-ಜ್ಯೋತಿ ಮಲ್ಲಪ್ಪ ಬೀಳಗಿ -ಬಿ.ಟಿ. ಪತ್ತಾರ್