ಮಾಗಡಿ: ಶ್ರೀರಾಮನ ಪರಮ ಭಕ್ತ ಆಂಜನೇಯಸ್ವಾಮಿ ದೇವರನ್ನು ಶ್ರದ್ಧಾಭಕ್ತಿಯಿಂದಆರಾಧಿಸುವುದರಿಂದ ಸಕಲ ದುಷ್ಟಶಕ್ತಿಗಳು ದೂರವಾಗುತ್ತದೆ. ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ವಾಯುಪುತ್ರ ಆಂಜನೇಯಸ್ವಾಮಿ ಸಕಲರಿಗೂ ಒಳಿತು ಮಾಡಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಪ್ರಾರ್ಥಿಸಿದರು.
ಪಟ್ಟಣದ ಹೊಸಪೇಟೆ ಆಂಜನೇಯಸ್ವಾಮಿ ಮತ್ತು ಸೀತಾರಾಮ ದೇವಸ್ಥಾನದಲ್ಲಿ ಹನುಮ ಜಯಂತಿಪ್ರಯುಕ್ತ ವಿಶೇಷವಾಗಿ ಪೂಜೆ ಸಲ್ಲಿಸಿ ಬಳಿಕ ಮಾತ ನಾಡಿದ ಅವರು, ವ್ಯಾಸರಾಯರು ಪ್ರತಿಷ್ಠಾಪಿಸಿದ ಈದೇವಸ್ಥಾನವನ್ನು ನಾನು ಜೀರ್ಣೋದ್ಧಾರಗೊಳಿಸಿದ್ದೇನೆ.ಭಕ್ತರ ಮತ್ತು ಸಾರ್ವಜನಿಕರ ಅನುಕೂಲಕಕ್ಕಾಗಿಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಸದ್ಯಕ್ಕೆ ಶಾಲೆ ಆರಂಭಿಸುವುದು ಸೂಕ್ತವಲ್ಲ, ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಶಾಲೆ ಆರಂಭಿಸುವುದು ಉತ್ತಮ ಎಂದರು. ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೊಂದಾಣಿಕೆಯ ಲಾಭದಾಯಕ ರಾಜಕಾರಣ ಮಾಡುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾಜಿ ಸಚಿವರು ತಿಳಿಸಿದರು.
ಹನುಮ ಜಯಂತಿ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಹೂವಿನಅಲಂಕಾರ ಏರ್ಪಡಿಸಲಾಗಿತ್ತು. ಗಣಪತಿ ನವಗ್ರಹ,ಮೃತ್ಯುಂಜಯ, ಪಾವಮಾನ ಹೋಮ ಹವನಪೂರ್ಣಾಹುತಿ ನೆರೆವೇರಿಸಲಾಯಿತು. ನೂರಾರುಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.ಈ ವೇಳೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಶಶಾಂಕ್ ರೇವಣ್ಣ, ಚಿತ್ರನಟ ಅನೂಪ್ ರೇವಣ್ಣ, ಎಸ್. ನಾಗರಾಜ ಶೆಟ್ಟಿ, ಹೊಸಪೇಟೆ ಚಂದ್ರಯ್ಯ, ಕೆಂಪಣ್ಣ,ತೇಜಸ್‌ಕುಮಾರ್, ವೆಂಕಟೇಶ್, ಮಂಜುನಾಥ್,ಪುರಸಭಾ ಸದಸ್ಯೆ ವಿಜಯ ರೂಪೇಶ್, ರಾಜಣ್ಣ, ರಂಗನಾಥ್ ಇತರರು ಉಪಸ್ಥಿತರಿದ್ದರು.