Advertisement

ಶಿವರಾತ್ರಿ: ಅಂತರಗಂಗೆ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

12:05 PM Mar 01, 2022 | Team Udayavani |

ಕುದೂರು:  ಶಿವರಾತ್ರಿ ಶಿವಭಕ್ತರಿಗೆ ಪುಣ್ಯ ದಿನವಾಗಿದ್ದು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಅಂತರಗಂಗೆ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ಅಭಿಷೇಕ ಶಿವನಾಮಸ್ಮರಣೆ ರುದ್ರ ಹೋಮ ಗಣ ಹೋಮ ನವಗ್ರಹ ಹೋಮ ಅತ್ಯಂತ ವೈಭವದಿಂದ ನಡೆಯುತ್ತಿದೆ.

Advertisement

ಯುವಕರ ಸಾಧನೆ: ನಮ್ಮಲ್ಲಿ ಯುವಶಕ್ತಿ ಸದ್ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ ಆದರೆ ಕುದೂರು ಯುವಕರು ಈ ಅಪವಾದಕ್ಕೆ ಹೊರತಾಗಿದ್ದಾರೆ ಶ್ರೀ ಗಂಗಾಧರೇಶ್ವರ ಯುವಕ ಸಂಘ ಕಟ್ಟಿಕೊಂಡು ಶಿಥಿಲ ಅವಸ್ಥೆಯಲ್ಲಿದ್ದ ಪುರಾಣಪ್ರಸಿದ್ಧ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಕಂಗೊಳಿಸುವಂತೆ ಮಾಡಿದ್ದಾರೆ ಬೆಂಗಳೂರಿನ ನಂದಕುಮಾರ್. ಮಾಜಿ ಸಂಸದೆ ತೇಜಸ್ವಿನಿ ಗೌಡ. ಗ್ರಾಮದ ಹನುಮಂತರಾಯಪ್ಪ .ಕೃಷ್ಣಮೂರ್ತಿ .ಶೇಖರ್ ಮತ್ತು ಗ್ರಾಮಸ್ಥರು ಯುವಕರು ಸಹಕಾರ ನೀಡಿದ್ದಾರೆ. 7 ವರ್ಷಗಳ ಹಿಂದೆ ಈ ದೇವಾಲಯ ಜೂಜು. ಕುಡಿತ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು .ಗ್ರಾಮದ ಯುವಕರು ಅಕ್ರಮ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ದೇವಾಲಯ ಕಾರ್ಯ ಕೈಗೊಂಡರು ಈಗ ತೀರ್ಮಾನ ಮಾಡಿದ ಯುವಕರಲ್ಲ ವಿದ್ಯಾವಂತರಲ್ಲ. ಹಣವಂತರ ಅಲ್ಲ ಬದಲಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು.

ಕರ್ನಾಟಕದಲ್ಲಿ 2 ಅಂತರಗಂಗೆ ಗಳಿವೆ ಒಂದು ಕೋಲಾರ ಜಿಲ್ಲೆಯಲ್ಲಿ ಇದ್ದರೆ ಮತ್ತೊಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಗ್ರಾಮದಲ್ಲಿದೆ. ಈ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಂಗಾಧರೇಶ್ವರ ಪಾರ್ವತಿದೇವಿ ಒಳಗೊಂಡಂತೆ 14 ದೇವಾಲಯಗಳಿವೆ ಅದರಲ್ಲಿ ಬಹಳವಾಗಿದೆ ಅದರಲ್ಲಿ ಷಣ್ಮುಖ ವಿಗ್ರಹ ಬಹಳ ಅಪರೂಪವಾಗಿದೆ ಶಿಲ್ಪದ ಹಿಂದೆ ಮತ್ತು ಮುಂದೆ ಒಂದೇ ರೀತಿಯ ಐದು ಮುಖಗಳನ್ನು ಕೆತ್ತಿ ಶಿಲ್ಪಿ ನೈಪುಣ್ಯತೆ ಮೆರೆದಿದ್ದಾನೆ ದೇವಾಲಯದ ಮುಂದೆ ಸುಂದರವಾದ ಕಲ್ಯಾಣಿ ಇದೆ ಅಂತರ್ಜಲ ಬರ್ತಿದೆ ಆದರೆ ಕಲ್ಯಾಣಿಯ ಅಂದ ಕೇಳಬಾರದೆಂದು ಕೃತಕ ನೀರು ವ್ಯವಸ್ಥೆ ಕಲ್ಪಿಸಲಾಗಿದೆ ಕುದೂರಿನ ಅಂತರಗಂಗೆಗೂ.ಶಿವಗಂಗೆಯ ಪಾತಾಳಗಂಗೆ ಅನ್ಯೋನ್ಯ ಸಂಬಂಧವಿದೆ.

Advertisement

Udayavani is now on Telegram. Click here to join our channel and stay updated with the latest news.

Next