Advertisement

ಪ್ರವಾಸಿಗರಿಗಾಗಿಯೇ ಬರಲಿ ವಿಶೇಷ ಸಾರಿಗೆ

10:04 PM Apr 20, 2019 | Sriram |

ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರ ಹಾಗೂ ಸುತ್ತ ಮುತ್ತಲಿನ ಭಾಗಗಳಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.ಹೀಗಾಗಿ ಸಾಕಷ್ಟು ದೇಶ,ವಿದೇಶಿ ಪ್ರವಾಸಿಗರು ನಿತ್ಯವೂ ಎಂಬಂತೆ ನಮ್ಮ ನಗರಕ್ಕೆ ಬರುತ್ತಿದ್ದಾರೆ.ಆದರೆ ಇಲ್ಲಿಯ ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುವುದು ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ.

Advertisement

ಬಸ್‌ ಅನ್ನು ಅವಲಂಬಿಸಿಕೊಂಡರೆ ಸಮಯ ಪಾಲನೆ ಮಾಡುವುದು ಸಂಕಷ್ಟ. ಯಾಕೆಂದರೆ ಪ್ರವಾಸ ಬರುವವರು ಕಡಿಮೆ ಖರ್ಚು ಮತ್ತು ಸಮಯ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿರುತ್ತಾರೆ. ಆದರೆ ನಮ್ಮ ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಇಂಥ ಸಾಧ್ಯತೆಗಳು ಅವರಿಗೆ ಸಿಗುವುದು ಕಡಿಮೆ.

ಹೀಗಾಗಿ ಅವರು ಕೆಲವೊಂದು ಕಡೆ ದುಬಾರಿ ಹಣ ಪಾವತಿಸ ಬೇಕಿದೆ ಮತ್ತು ಹೆಚ್ಚಿನ ಸಮಯವನ್ನು ಒಂದೇ ಸ್ಥಳದಲ್ಲಿ ಕಳೆಯುವಂತೆ ಮಾಡುತ್ತದೆ. ಇದರಿಂದ ದಿನದಲ್ಲಿ 2- 3 ಸ್ಥಳಕ್ಕಿಂತ ಹೆಚ್ಚಿನ ಸ್ಥಳಕ್ಕೆ ಭೇಟಿ ನೀಡುವುದು ಪ್ರವಾಸಿಗರಿಗೆ ಅಸಾ ಧ್ಯವಾಗುತ್ತಿದೆ.

ಇದಕ್ಕಾಗಿ ಸ್ಮಾರ್ಟ್‌ ನಗರಿ ಮಂಗಳೂರಿನಲ್ಲಿ ಒಂದು ಹೊಸ ಚಿಂತನೆ ಬೆಳೆಯಬೇಕಿದೆ. ಮಂಗಳೂರು ನಗರದ ಪ್ರಮುಖ ರಸ್ತೆ ಸೇರಿದಂತೆ ಒಳಭಾಗದ ರಸ್ತೆಗಳನ್ನು ಬಳಸಿಕೊಂಡು ಸಮಗ್ರ ಯೋಜನೆಯೊಂದು ರೂಪುಗೊಳ್ಳಬೇಕಿದೆ.ಮೊದಲಿಗೆ ಪ್ರವಾಸಿ ತಾಣಗಳನ್ನು ಗುರುತಿಸಿ,ಅಲ್ಲಿಗೆ ಬಸ್‌,ರೈಲು, ವಿಮಾನ ನಿಲ್ದಾಣದಿಂದ ಸಂಪರ್ಕ ಸಾಧಿಸುವ ಹತ್ತಿರದ ದಾರಿಗಳನ್ನು ಗುರುತಿಸಬೇಕು ಮತ್ತು ಈ ರಸ್ತೆಯ ಮೂಲಕ ಪ್ರವಾಸಿ ಗರಿಗಾಗಿಯೇ ವಿಶೇಷ ಮಾದರಿಯ ಅಂದರೆ ಬಸ್‌ ಮಾದ ರಿಯ ಸಾರ್ವಜನಿಕ ವಾಹನ ವ್ಯವಸ್ಥೆ ಕಲ್ಪಿಸಬೇಕಿದೆ.

ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ಗಳು ಇತರೆ ಬಸ್‌ಗಳಿಗಿಂತ ಭಿನ್ನ ಸ್ವರೂಪದಲ್ಲಿರಲಿ.ಇದರಲ್ಲಿ ದೂರದೂರಿನಿಂದ ಪ್ರವಾಸಕ್ಕೆ ಬಂದವರಿಗಷ್ಟೇ ಸಂಚರಿಸಲು ಅನುಮತಿ ನೀಡ ಬೇಕು. ಪ್ರವಾಸಿಗರು ನಗರ ಸೌಂದರ್ಯ ಅಸ್ವಾದಿಸಲು ಬಸ್‌ಗಳಿಗೆ ತೆರೆದ ಕಿಟಕಿಗಳಿರಬೇಕು. ಪ್ರವಾಸಿ ತಾಣವಷ್ಟೇ ಅಲ್ಲ ನಗರದಲ್ಲಿರುವ ಅತ್ಯುತ್ತಮ ರೆಸ್ಟೋರೆಂಟ್‌, ಮಾರುಕಟ್ಟೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಮಾಡಬಹುದು.

Advertisement

ಕಡಿಮೆ ಶುಲ್ಕದೊಂದಿಗೆ ಇದರ ನಿರ್ವಹಣೆ ಹೊಣೆಯನ್ನು ಆಡಳಿತವೇ ವಹಿಸಿಕೊಂಡರೆ ಉತ್ತಮ. ಇದರಿಂದ ಪ್ರವಾಸೋದ್ಯ ಮದ ಅಭಿವೃದ್ಧಿಯ ಜತೆಗೆ ಆಡಳಿತಕ್ಕೂ ನಿರ್ದಿಷ್ಟ ಆದಾಯ ಗಳಿಸಲು ಸಾಧ್ಯವಿದೆ.

ಈಗಾಗಲೇ ದೇಶ,ವಿದೇಶಗಳಲ್ಲಿ ಇಂಥ ವ್ಯವಸ್ಥೆ ಜಾರಿಯಲ್ಲಿದೆ. ನಮ್ಮ ದೇಶದಲ್ಲೇ ಹೇಳುವುದಾದರೆ ತಿರುಪತಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜರಥ ಎಂಬ ಬಸ್‌ ಸೌಲಭ್ಯಗಳು ಅತ್ಯು ತ್ತಮ ಉದಾಹರಣೆ.

– ವಿದ್ಯಾ ಕೆ.ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next