Advertisement

Para: ಪ್ಯಾರಾ ಆ್ಯತ್ಲೀಟ್‌ಗಳಿಗೆ ವಿಶೇಷ ತರಬೇತಿ: ನರೇಂದ್ರ ಮೋದಿ

11:34 PM Aug 15, 2023 | Team Udayavani |

ಹೊಸದಿಲ್ಲಿ: ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರವು ಪ್ಯಾರಾ ಆ್ಯತ್ಲೀಟ್‌ಗಳಿಗೆ ವಿಶೇಷ ತರಬೇತಿ ನೀಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಕೆಂಪುಕೋಟೆಯಲ್ಲಿ 77ನೇ ಸ್ವಾಂತತ್ರ್ಯೋತ್ಸವದ ದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಲಮ್‌ನಲ್ಲಿರುವ ಮಕ್ಕಳು ಕೂಡ ಕ್ರೀಡಾ ಜಗತ್ತಿನಲ್ಲಿ ವಿಶೇಷ ಸಾಧನೆ ಮಾಡಿರುವುದನ್ನು ನಾವು ನೋಡಿದ್ದೇವೆ. ಅಂಗವಿಕಲರೂ ಕೂಡ ಭಾರತವನ್ನು ಪ್ರತಿನಿಧಿಸಲು ನಾವು ಪ್ರಯತ್ನಿಸಬೇಕು ಮತ್ತು ಅವರು ಪ್ಯಾರಾ ಒಲಿಂಪಿಕ್ಸ್‌ನಂತಹ ಕೂಟಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕಾಗಿದೆ. ಇದಕ್ಕಾಗಿ ಅಂತಹ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದವರು ಹೇಳಿದರು.

2021ರಲ್ಲಿ ನಡೆದ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಇಷ್ಟರವರೆಗಿನ ಶ್ರೇಷ್ಠ ನಿರ್ವಹಣೆಯನ್ನು ನೀಡಿದೆ. ಭಾರತ ಒಟ್ಟಾರೆ 5 ಚಿನ್ನ, 8 ಬೆಳ್ಳಿ ಸಹಿತ 19 ಪದಕ ಗೆದ್ದ ಸಾಧನೆ ಮಾಡಿದೆ. 1968ರಿಂದ ಭಾರತ ಪ್ಯಾರಾ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುತ್ತಿದ್ದು ಒಟ್ಟಾರೆ 9 ಚಿನ್ನ, 12 ಬೆಳ್ಳಿ ಸಹಿತ 31 ಪದಕ ಗೆದ್ದಿದೆ. ಮುಂದಿನ ಪ್ಯಾರಾ ಒಲಿಂಪಿಕ್ಸ್‌ ಕೂಟ ಪ್ಯಾರಿಸ್‌ನಲ್ಲಿ 2024ರಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next