Advertisement

ಯೋಧರಿಗೆ ತರಬೇತಿ

08:50 AM Oct 26, 2018 | Karthik A |

ಗ್ರೇಟರ್‌ ನೊಯ್ಡಾ: ಭಾರತ-ಚೀನ ಗಡಿ ಪ್ರದೇಶವನ್ನು ಕಾಯುವ ಇಂಡೋ ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆ, ವಿಶೇಷ ಸಮರಾಭ್ಯಾಸವನ್ನು ಆರಂಭಿಸಿದ್ದು, ಇದರಲ್ಲಿ ಗಡಿ ಪ್ರದೇಶಗಳ ಮೇಲೆ ಸತತ ಕಣ್ಗಾವಲು ವಹಿಸಲು ಹಾಗೂ ಗುಪ್ತಚರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಐಟಿಬಿಪಿ ಅಧಿಕಾರಿಗಳು ತಿಳಿಸಿದ್ದಾರೆ. ಶೂನ್ಯಕ್ಕಿಂತ ಕೆಳಗಿನ ತಾಪಮಾನದಲ್ಲಿ ಕುಡಿಯುವ ನೀರನ್ನು ಪಡೆಯುವ ಬಗೆ ಹಾಗೂ ತಾವು ಅವಿತಿರುವ ಸ್ಥಳಗಳಲ್ಲೇ 20ರಿಂದ 23 ಡಿಗ್ರಿ ಸೆಂಟಿಗ್ರೇಡ್‌ನ‌ಷ್ಟು ಉಷ್ಣತೆ ಕಾಯ್ದುಕೊಳ್ಳುವ ಬಗೆಯನ್ನು ಸಿಬಂದಿಗೆ ತಿಳಿಸಿಕೊಡಲಾಗುತ್ತದೆೆ. ಹಿಮಚ್ಛಾದಿತ ಪ್ರದೇಶದಲ್ಲಿ ಪಡೆಗೆ ತುರ್ತು ಸಂದರ್ಭಗಳಲ್ಲಿ  ಸಜ್ಜಾಗಲು ತರಬೇತಿ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next