ಬೆಳಗಾವಿ: ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿರುವ ಸುರೇಶ್ ಅಂಗಡಿಯವರ ಆದೇಶದಂತೆ ಚೌತಿ ಹಬ್ಬದ ಸಂದರ್ಭದಲ್ಲಿ ವಿಶೇಷ ರೈಲು ಯಲಹಂಕ ಮತ್ತು ಕುಲಬುರ್ಗಿ ನಡುವೆ ಓಡಾಡಲಿದೆ.
ಈ ವಿಶೇಷ ರೈಲು ಆಗಸ್ಟ್ 30ರಂದು ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ಸಾಯಂಕಾಲ 5 ಗಂಟೆಗೆ ಹೊರಡಲಿದೆ ಮತ್ತು ಆಗಸ್ಟ್ 31ರ ಶನಿವಾರದಂದು ಬೆಳಗ್ಗೆ 4.20ಕ್ಕೆ ಕಲಬುರ್ಗಿ ತಲುಪಲಿದೆ.
ಬಳಿಕ ಸೆಪ್ಟಂಬರ್ 2ರಂದು ರಾತ್ರಿ 8.30ಕ್ಕೆ ಕಲಬುರ್ಗಿಯಿಂದ ಹೊರಟು ಮರುದಿನ ಮುಂಜಾನೆ 7.25ಕ್ಕೆ ಯಲಹಂಕ ರೈಲು ನಿಲ್ದಾಣವನ್ನು ತಲುಪಲಿದೆ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವರ ಕಾರ್ಯಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ವಿಶೇಷ ರೈಲಿನಲ್ಲಿ ಎರಡು ಎಸಿ, 12 ಸ್ಲೀಪರ್ ಮತ್ತು 2 ಸಾಮಾನ್ಯ/ಲಗೇಜ್ ಸಹಿತ ಒಟ್ಟು 16 ಬೋಗಿಗಳು ಇರಲಿದೆ. ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ ಮತ್ತು ವಾಡಿ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆಯನ್ನು ಕಲ್ಪಿಸಲಾಗಿದೆ.